ಅಣ್ಣಾಮಲೈ ನೇತೃತ್ವದಲ್ಲಿ ಟಿವಿ ವಾಹಿನಿ ಆರಂಭಿಸಲಿರುವ ತಮಿಳುನಾಡು ಬಿಜೆಪಿ.

ಚೆನ್ನೈ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬಿಜೆಪಿಯ (BJP) ತಮಿಳುನಾಡು  ಘಟಕ ಪಕ್ಷಕ್ಕಾಗಿ ರಾಜ್ಯದಲ್ಲಿ ಟಿವಿ ಚಾನಲ್‌ ಆರಂಭಿಸಲು ಯೋಜಿಸಿದೆ. ಕೇರಳದಲ್ಲಿ ಬಿಜೆಪಿಯ ಮುಖವಾಣಿಯಾಗಿರುವ ಜನಮ್‌ ಟಿವಿಯ ವಿಸ್ತರಣೆ ಇದಾಗಲಿದೆ ಎಂದು ಹೇಳಲಾಗಿದೆ.

ಬಿಜೆಪಿಯ ನೂತನ ತಮಿಳು ಟಿವಿ ವಾಹಿನಿಯ ಹೆಸರು ಕೂಡ ಜನಮ್‌ ಟಿವಿ ಆಗಲಿದ್ದು ನಗರದ ಆಳ್ವಾರ್‌ಪೇಟ್‌ ಪ್ರದೇಶದಿಂದ ಅದು ಕಾರ್ಯಾಚರಿಸಲಿದೆ. ಈ ವಾಹಿನಿ ಆರಂಭಕ್ಕೆ ಪಕ್ಷ ಸುಮಾರು ರೂ. 15 ಕೋಟಿ ಖರ್ಚಾಗಲಿದ್ದು ಪಕ್ಷ ಹಾಗೂ ಆರೆಸ್ಸೆಸ್‌ (RSS) ಸಂಪನ್ಮೂಲಗಳಿಂದ ಈ ನಿಧಿಯನ್ನು ಕ್ರೋಢೀಕರಿಸಲಾಗುವುದು ಎಂದು ಪಕ್ಷದ ನಾಯಕರು ಮಾಹಿತಿ ನೀಡಿದ್ದಾರೆ ಎಂದು indianexpress.com ವರದಿ ಮಾಡಿದೆ.

ಈ ಟಿವಿ ವಾಹಿನಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ “ಕೆ ಅಣ್ಣಾನಲೈ ಅವರ ಕೂಸು” ಎಂದು ಬಿಜೆಪಿ ನಾಯಕರೊಬ್ಬರು ಬಣ್ಣಿಸಿದ್ದಾರೆ, ಅಣ್ಣಾಮಲೈ ಅವರೇ ಈ ವಾಹಿನಿಯನ್ನು ನೋಡಿಕೊಳ್ಳಲಿದ್ದಾರೆಂಬ ಮಾಹಿತಿಯಿದೆ. ಎಪ್ರಿಲ್‌ 14, 2023 ರಿಂದ ಆರಂಭಗೊಳ್ಳಲಿರುವೆ ಅಣ್ಣಾಮಲೈ ಅವರ ರಾಜ್ಯವ್ಯಾಪಿ ಪಾದಯಾತ್ರೆಗೆ ವಿಸ್ತೃತ ಪ್ರಚಾರ ಒದಗಿಸುವ ಉದ್ದೇಶದಿಂದ ಈ ವಾಹಿನಿ ಆರಂಭಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಕಡಿಮೆ ವೇತನ ನೀಡುತ್ತಿದೆ ಸಹಿತ ಇತರ ಆರೋಪಗಳನ್ನು ಜನಮ್‌ ಟಿವಿ ಕೇರಳದಲ್ಲಿ ಎದುರಿಸುತ್ತಿದೆಯಾದರೂ ಶಬರಿಮಲೆ ವಿವಾದದ ಸಂದರ್ಭ ಬಿಜೆಪಿ ಮತ್ತು ಆರೆಸ್ಸೆಸ್‌ಗೆ ಈ ವಾಹಿನಿ ಅನುಕೂಲಕರವಾಗಿತ್ತು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಸ್‌ಗಳ ಸಂಚಾರ ಇರುವುದಿಲ್ಲವೇ? ಎಂಬ ಆತಂಕ ಬೇಡ.

Mon Jan 23 , 2023
ಬಸ್‌ಗಳ ಸಂಚಾರ ಇರುವುದಿಲ್ಲವೇ? ಎಂಬ ಆತಂಕ ಬೇಡ. ಬೆಂಗಳೂರು ನಗರದ ಜನರ ಜೀವನಾಡಿಯಾದ ಬಸ್‌ಗಳು ಎಂದಿನಂತೆ ಸಂಚಾರ ನಡೆಸಲಿವೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಜನವರಿ 24ರ ಮಂಗಳವಾರ ಪ್ರತಿಭಟನೆಗೆ ಕರೆ ನೀಡಿದೆ ಈ ಹಿನ್ನಲೆಯಲ್ಲಿ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂಬ ಆತಂಕವಿತ್ತು. ಡಬಲ್‌ ಡೆಕ್ಕರ್‌ ಎಸಿ ಬಸ್‌ಗೆ ಟೆಂಡರ್‌ ಆಹ್ವಾನಿಸಿದ ಬಿಎಂಟಿಸಿ ಸೋಮವಾರ ಪ್ರಕಟಣೆ ಮೂಲಕ ಬಿಎಂಟಿಸಿ ಮಾಹಿತಿ […]

Advertisement

Wordpress Social Share Plugin powered by Ultimatelysocial