ಬಿಳಿಗಿರಿ ರಂಗನ ಬೆಟ್ಟದಲ್ಲಿ ಬಿಜೆಪಿ ಬಾವುಟ ಕಟ್ಟಿ ಬೂತ್ ವಿಜಯ ಅಭಿಯಾನಕ್ಕೆ ಶಾಸಕ ಎನ್.ಮಹೇಶ್ ಚಾಲನೆ…

ಯಳಂದೂರು ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಬಿಳಿಗಿರಿ ರಂಗನಬೆಟ್ಟದ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೋಲಿಗರ ಕಾಲೋನಿಗಳಿಗೆ ತೆರಳಿ ಶಾಸಕ ಎನ್.ಮಹೇಶ್ ರವರು ಪಿ ಬಿಜೆಪಿ ಬಾವುಟ ಕಟ್ಟುವ ಮೂಲಕ ಬೂತ್ ವಿಜಯ ಅಭಿಯಾನದ ಬಗ್ಗೆ ತಿಳಿಸಿದರು……

ನಂತರ ಶಾಸಕ ಎನ್.ಮಹೇಶ್ ಮಾತನಾಡಿ ವಿಧಾನಸಭೆಯ ಮುಂದಿನ ಚುನಾವಣೆಯಲ್ಲಿ ಮಿಷನ್‌ 150 ಗುರಿ ಸಾಧಿಸಲು ಬಿಜೆಪಿ ರಾಜ್ಯವ್ಯಾಪಿ ಹಮ್ಮಿಕೊಂಡಿರುವ ‘ಬೂತ್ ವಿಜಯ’ ಅಭಿಯಾನವು ಇದೇ ತಿಂಗಳ 12 ರವರೆಗೆ ನಡೆಯಲಿದೆ……

ಇಂದು ಬಿಳಿಗಿರಿ ರಂಗನ ಬೆಟ್ಟದಲ್ಲಿ ಬಿಜೆಪಿ ಕಾರ್ಯಕರ್ತರ ಮನೆಗಳಲ್ಲಿ ಪಕ್ಷದ ಧ್ವಜಗಳನ್ನು ಹಾರಿಸುವುದಕ್ಕೆ ಚಾಲನೆ ನೀಡಲಾಯಿತು….

ಪ್ರತಿಯೊಂದು ಬೂತ್‌ನಲ್ಲಿ ವಿರೋಧ ಪಕ್ಷಗಳಿಗಿಂತ ಅಧಿಕ ಮತಗಳನ್ನು ಗಳಿಸಲು ಕಾರ್ಯಕರ್ತ
ರನ್ನು ಅಣಿಗೊಳಿಸುವುದು ಈ ಅಭಿಯಾನದ ಉದ್ದೇಶ ವಾಗಿದೆ…

ಬೂತ್ ಸಮಿತಿ ರಚನೆ, ಪೇಜ್ ‍ಪ್ರಮುಖ್, ವಾಟ್ಸ್‌ಆ್ಯಪ್ ಗ್ರೂಪ್ ರಚನೆ, ಮನ್‌ ಕಿ ಬಾತ್ ಕಾರ್ಯಕ್ರಮವನ್ನು ಪ್ರತಿ ಮನೆಗೆ ತಲುಪಿಸುವುದು ಮತ್ತು ಬಿಜೆಪಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಮನೆಗಳ ಮೇಲೆ ಬಿಜೆಪಿ ಧ್ವಜ ಹಾರಿಸುವುದು ಈ ಕಾರ್ಯಕ್ರಮದ ಪ್ರಮುಖ ಭಾಗವಾಗಿರುತ್ತದೆ.ಪ್ರತಿ ಬೂತ್‌ನಲ್ಲಿಯೂ ಒಳ್ಳೆಯ ತಂಡ ರೂಪಿಸಲಾಗುತ್ತಿದೆ ಯಳಂದೂರು ತಾಲ್ಲೂಕಿನ ಬಿಜೆಪಿ ಮಂಡಲ ಅಧ್ಯಕ್ಷರಾದ ಮಹೇಶ್ ರವರು ಈ ಅಭಿಯಾನವನ್ನು ಅಚ್ಚುಕಟ್ಟಾಗಿ ನಡೆಸುತ್ತಿದ್ದಾರೆ,ನನ್ನ ಕ್ಷೇತ್ರದ ಎಲ್ಲಾ ಜನತೆ ಈ ಅಭಿಯಾನವನ್ನು ಯಶಸ್ವಿ ಗೊಳಿಸಿ ಎಂದು ಹೇಳಿದರು…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಲ್ಲಿ 266 ಕೇಸ್ ಸಕ್ರಿಯ

Fri Jan 6 , 2023
ಬೆಂಗಳೂರು, ಜನವರಿ 06: ಭಾರತದ ರಾಜ್ಯಗಳ ಪೈಕಿ ಕಳೆದ ಎರಡು ವಾರಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗಿ ಕಂಡು ಬಂದ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದೆ. ಇದು ನಾಡಿನ ಜನರಲ್ಲಿ ಆತಂಕ ಮೂಡಲು ಕಾರಣವಾಗಿದೆ.ಕರ್ನಾಟಕ ಕಳೆದ ವಾರ ಡಿಸೆಂಬರ್ 26 ರಿಂದ ಜನವರಿ 1ರವರೆಗೆ 276 ಹೊಸ ಕೋವಿಡ್ ಪ್ರಕರಣಗಳನ್ನು ವರದಿ ಆಗಿವೆ.ಅದರ ಹಿಂದಿನ ವಾರ ಅಂದರೆ ಡಿಸೆಂಬರ್ 19 ರಿಂದ ಡಿ.25 ರ ನಡುವಿನ ಅವಧಿಯಲ್ಲಿ 116 ಪ್ರಕರಣಗಳು ದಾಖಲಾಗಿದ್ದವು. […]

Advertisement

Wordpress Social Share Plugin powered by Ultimatelysocial