ವಿಧಾನಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ನಡೆಸ್ತಿದೆ.

ವಿಧಾನಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ನಡೆಸ್ತಿದೆ. ಱಲಿ, ರೋಡ್ ಶೋ, ಸಮಾವೇಶಗಳ ಬಳಿಕ ಸಾಂಪ್ರದಾಯಿಕ ರಥಯಾತ್ರೆಯ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ರಾಜ್ಯ ಚುನಾವಣೆ ಪ್ರಚಾರಕ್ಕೂ ರಥಯಾತ್ರೆ ಮೂಲಕ ನಾಳೆಯಿಂದ ಕೇಸರಿ ಕಲಿಗಳು ಮತಬೇಟೆಗೆ ಇಳಿಯಲಿದ್ದಾರೆ. 2023ರ ಕರ್ನಾಟಕ ಮತಯುದ್ಧಕ್ಕೆ ಎರಡೇ ತಿಂಗಳು ಬಾಕಿ ಇದೆ. ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆಗೆ ಮುಹೂರ್ತ ಕೂಡ ಫಿಕ್ಸ್ ಆಗೋ ಸಾಧ್ಯತೆ ಇದೆ. ಈಗಾಗಲೇ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಅಂತಾ ರಾಜ್ಯದಲ್ಲಿ ಸಂಚರಿಸ್ತಿದೆ. ಇತ್ತ ಕುಮಾರಸ್ವಾಮಿ ಪಂಚರತ್ನ ರಥಯಾತ್ರೆ ಮೂಲಕ ಮತದಾರರ ಮನಗೆಲ್ಲಲು ಮುಂದಾಗಿದ್ದಾರೆ. ಇದೀಗ ಎರಡೂ ಪಕ್ಷಗಳಿಗೆ ಟಕ್ಕರ್ ಕೊಡಲು ಕಮಲ ನಾಯಕರು ಸಕಲ ಸಿದ್ಧತೆಯೊಂದಿಗೆ ಅಖಾಡಕ್ಕಿಳಿಯಲು ಪ್ಲಾನ್ ಮಾಡಿದ್ದಾರೆ.

2023ರ ಮತಯುದ್ಧಕ್ಕೆ ರೆಡಿಯಾಯ್ತು ಕೇಸರಿ ಪಡೆಯ ರಥಗಳು

ರಾಜ್ಯ ವಿಧಾನಸಭಾ ಚುನಾವಣೆ ಕಣ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಈ ಬಾರಿ ಹೇಗಾದ್ರೂ ಮಾಡಿ ಅಧಿಕಾರಕ್ಕೇರಬೇಕು ಅಂತಾ ಕಾಂಗ್ರೆಸ್ ರಣತಂತ್ರ ರೂಪಿಸ್ತಿದ್ದಾರೆ. ಜೆಡಿಎಸ್ ಬಹುಮತ ಪಡೆಯುವತ್ತ ಚಿತ್ತ ಹರಿಸ್ತಿದೆ. ಇದ್ರ ನಡುವೆ ಕೇಸರಿ ಪಾಳಯ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರಲು ಸಕಲ ಪ್ರಯತ್ನ ಮಾಡ್ತಿದೆ. ಈಗಾಗಲೇ ಬಿಜೆಪಿ ಘಟಾನುಘಟಿಗಳಾದ ಪ್ರಧಾನಿ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಸೇರಿದಂತೆ ಹಲವು ನಾಯಕರು ಸಮಾವೇಶ, ರೋಡ್ ಶೋಗಳ ಮೂಲಕ ಮತಬೇಟೆಗಿಳಿದಿದ್ದಾರೆ. ಇದೀಗ ರಾಜ್ಯ ಮಟ್ಟದ ನಾಯಕರು ರಾಜ್ಯದ ಮೂಲೆ ಮೂಲೆಗೆ ತೆರಳಲು ರಥಯಾತ್ರೆ ಮೊರೆ ಹೋಗಿದ್ದಾರೆ.

ರಥದ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿರೋ 4 ವಿಶೇಷ ಬಸ್​​ಗಳ ಮೂಲಕ ಬಿಜೆಪಿ ನಾಯಕರು ರಾಜ್ಯದ 4 ದಿಕ್ಕುಗಳಲ್ಲಿ ಮತಬೇಟೆಯಾಡಲಿದ್ದಾರೆ. ವಿಜಯ ಸಂಕಲ್ಪ ಯಾತ್ರೆ ಅನ್ನೋ ಹೆಸರಿನ ಮೂಲಕ ಸಂಚರಿಸಿ ಮತದಾರರನ್ನು ಸೆಳೆಯಲು ಬಿಜೆಪಿ ನಾಯಕರು ನಾಳೆಯಿಂದ ಅಖಾಡಕ್ಕಿಳಿಯಲಿದ್ದಾರೆ. ಇನ್ನು ವಿಶೇಷ ರಥಗಳ ಸ್ಪೆಷಾಲಿಟಿಗಳೇನು ಅನ್ನೋದನ್ನು ನೋಡೋದಾದ್ರೆ.

ಕೇಸರಿ ರಥದ ವಿಶೇಷತೆಯೇನು?

  • ರಥಕ್ಕಾಗಿ 30 ಅಡಿ ಉದ್ದ, 8 ಅಡಿ ಅಗಲದ ವಾಹನ ಬಳಕೆ
  • ನಿಂತು ಭಾಷಣ ಮಾಡಲು ಕೆನೋಪಿ ಅಳವಡಿಸಲಾಗಿದೆ
  • ಕೆನೋಪಿ ಮೇಲೆ 4 ಮೈಕ್​ಗಳನ್ನು ಅಳವಡಿಸಲಾಗಿದೆ
  • ಈ ಮೈಕ್​ಗಳು 1 ಕಿ.ಮೀ ದೂರದವರೆಗೆ ಕೇಳಿಸುತ್ತದೆ
  • ಬಸ್​​ನ ಒಳಗಡೆ 7 ಸೀಟ್​ಗಳ ವ್ಯವಸ್ಥೆ ಮಾಡಲಾಗಿದೆ
  • ಯಾತ್ರೆ ವೇಳೆ ಸಣ್ಣಪುಟ್ಟ ಸಭೆಗಳನ್ನು ನಡೆಸಲು ಅನುಕೂಲ
  • ಭಾಷಣ ಮಾಡಲು ಹೈಡ್ರಾಲಿಕ್ ಸ್ಟೇಜ್ ವ್ಯವಸ್ಥೆ ಕಲ್ಪಿಸಲಾಗಿದೆ
  • 8,000 ಕಿ.ಮೀ ದೂರವನ್ನು ರಥಯಾತ್ರೆ ಬಸ್​ಗಳು ಸಂಚಾರ
  • 80 ಱಲಿಗಳು, 75 ಸಭೆಗಳನ್ನು ಆಯೋಜನೆ ಮಾಡಲಾಗಿದೆ
  • 150 ರೋಡ್ ಶೋಗಳನ್ನು ಆಯೋಜನೆ ಮಾಡಲಾಗುತ್ತದೆ ಮೊದಲ ರಥಯಾತ್ರೆಯನ್ನು ನಾಳೆ ಮಲೆಮಹದೇಶ್ವರ ಬೆಟ್ಟದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಉದ್ಘಾಟನೆ ಮಾಡಲಿದ್ದಾರೆ. 2ನೇ ತಂಡವನ್ನು ಮಾರ್ಚ್ 2 ರಂದು ನಂದಗಡದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಲಿದ್ದಾರೆ. 3ನೇ ರಥಯಾತ್ರೆ ಬಸವಕಲ್ಯಾಣ ಮತ್ತು 4ನೇ ರಥಯಾತ್ರೆ ತಂಡವನ್ನು ಬೆಂಗಳೂರಿನಲ್ಲಿ ಕೇಂದ್ರದ ನಾಯಕರು ಉದ್ಘಾಟನೆ ಮಾಡಲಿದ್ದಾರೆ. ಮಾರ್ಚ್ ಅಂತ್ಯದೊಳಗೆ ಎಲ್ಲಾ 224 ಕ್ಷೇತ್ರಗಳಲ್ಲಿ ಈ ರಥಯಾತ್ರೆ ಸಂಚರಿಸಲಿದೆ. ಕೊನೆಗೆ ದಾವಣಗೆರೆಯಲ್ಲಿ ಈ ರಥಯಾತ್ರೆ ಸಮಾರೋಪಗೊಳ್ಳಲಿದ್ದು, ಅಮಿತ್ ಶಾ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ 10 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿ ಬೃಹತ್ ಶಕ್ತಿಪ್ರದರ್ಶನಕ್ಕೆ ಕೇಸರಿ ನಾಯಕರು ಸಖತ್ ಪ್ಲಾನ್ ಮಾಡಿಕೊಂಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಜಯ್ ರಾಘವೇಂದ್ರ ರೈತನ ಪಾತ್ರದಲ್ಲಿ ಕಾಣಿಸಿಕೊಂಡ 'ಕಾಸಿನ ಸರ'; ಹರ್ಷಿಕಾ ಪೂಣಚ್ಛ ನಾಯಕಿ.

Tue Feb 28 , 2023
  ‘ಹೆಬ್ಬೆಟ್ ರಾಮಕ್ಕ’ ಖ್ಯಾತಿಯ ನಿರ್ದೇಶಕ ಎನ್.ಆರ್. ನಂಜುಂಡೇಗೌಡ ಅವರ ಸಾರಥ್ಯದ ‘ಕಾಸಿನಸರ ‘ಚಿತ್ರ ಮಾ.3ರ ಶುಕ್ರವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ವಿಜಯ ರಾಘವೇಂದ್ರ ಅವರು ( Vijay Raghavendra ) ಒಬ್ಬ ಪ್ರಗತಿಪರ ರೈತನಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಹರ್ಷಿಕಾ ಪೂಣಚ್ಛ ನಾಯಕಿಯಾಗಿ ನಟಿಸಿದ್ದಾರೆ.ಗ್ರಾಮೀಣ ಸೊಗಡಿನಲ್ಲಿ ನಡೆಯುವ ಕೌಟುಂಬಿಕ ಸಂಬಂಧಗಳ ಸುತ್ತ ಹೆಣೆಯಲಾದ ಕಥಾಹಂದರ ಇರುವ ಈ ಚಿತ್ರದಲ್ಲಿ ಸಾವಯುವ ಕೃಷಿಯ ಬಗ್ಗೆ ಹೇಳಲಾಗಿದೆ. ಗ್ರಾಮೀಣ ಭಾಗದಿಂದಲೇ ಬಂದ ದೊಡ್ಡನಾಗಯ್ಯ […]

Advertisement

Wordpress Social Share Plugin powered by Ultimatelysocial