ಬಿಜೆಪಿಗೆ ಎಎಪಿ ಪರ್ಯಾಯ ಅಲ್ಲ: ಕೇಂದ್ರ ಸಚಿವ ಜಿತೇಂದ್ರ ಸಿಂಗ್‌

ಜಮ್ಮು: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷವು ಬಿಜೆಪಿಗೆ ಪರ್ಯಾಯ ಪಕ್ಷ ಅಲ್ಲ. ಭವಿಷ್ಯದಲ್ಲಿ ಪಂಜಾಬ್‌ಗೆ ಬಿಜೆಪಿಯೇ ಏಕೈಕ ಆಯ್ಕೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರದಲ್ಲಿ ಹೊಸ ರಾಜಕೀಯ ಸಂಸ್ಕೃತಿಯನ್ನು ತಂದಿದ್ದಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ತಿಳಿಸಿದ್ದಾರೆ.

ಪಿಎಂ ಮೋದಿ ಅವರ ಹೊಸ ರಾಜಕೀಯ ಸಂಸ್ಕೃತಿಯು 50-60 ವರ್ಷಗಳ ಕಾಂಗ್ರೆಸ್‌ ಅಧಿಕಾರವಧಿಯಲ್ಲಿ ಸೃಷ್ಟಿಯಾಗಿದ್ದ ‘ಆಡಳಿತ ವಿರೋಧಿ’ ಎಂಬ ಪೀಡೆಯನ್ನು ತೊಡೆದುಹಾಕಿದ್ದಾರೆ. ಜಾತಿ, ಧರ್ಮ, ನಂಬಿಕೆಗಳ ಆಧಾರದಲ್ಲಿ ಚುನಾವಣೆ ಗೆಲ್ಲುವುದು ಸಾಮಾನ್ಯವಾಗಿತ್ತು. ಆದರೆ ಮೋದಿ ಅವರು ಇಂತಹ ವ್ಯವಸ್ಥೆಯನ್ನು ಬದಲಿಸಿದ್ದಾರೆ ಎಂದು ಜಿತೇಂದ್ರ ಸಿಂಗ್‌ ಹೇಳಿದ್ದಾರೆ.

ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಗೆದ್ದ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದಾಗ, ನಾನು ಇಂದೇ ಭವಿಷ್ಯ ನುಡಿಯುತ್ತೇನೆ. ಭವಿಷ್ಯದಲ್ಲಿ ಪಂಜಾಬ್‌ಗೆ ಮತ್ತು ಅಲ್ಲಿನ ಜನರಿಗೆ ಬಿಜೆಪಿಯೇ ಏಕೈಕ ಆಯ್ಕೆಯಾಗಲಿದೆ. ಎಎಪಿ ಬಿಜೆಪಿಗೆ ಪರ್ಯಾಯವಾಗುವುದಿಲ್ಲ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರೀನಾ ಕಪೂರ್ ಯೋಗ ದಿನಚರಿಯಲ್ಲಿ ಸೈಡ್ ಪ್ಲ್ಯಾಂಕ್ ಬದಲಾವಣೆ!

Sun Mar 13 , 2022
ನಟಿ ಕರೀನಾ ಕಪೂರ್ ಯಾವಾಗಲೂ ಫಿಟ್ನೆಸ್ ಉತ್ಸಾಹಿ. ಸಾಂಕ್ರಾಮಿಕ ರೋಗದ ಮೊದಲು, ಶಟರ್‌ಬಗ್‌ಗಳು ಆಗಾಗ್ಗೆ ಜಿಮ್‌ನ ಹೊರಗೆ ತನ್ನ ಸ್ನೇಹಿತರಾದ ಮಲೈಕಾ ಅರೋರಾ ಮತ್ತು ಅಮೃತಾ ಅರೋರಾ ಅವರೊಂದಿಗೆ ನಕ್ಷತ್ರವನ್ನು ಗುರುತಿಸುತ್ತಿದ್ದರು. ಅವಳು ಯೋಗ ಮಾಡುವುದನ್ನು ಇಷ್ಟಪಡುತ್ತಾಳೆ ಮತ್ತು ತನ್ನ ಆರೋಗ್ಯ ಮತ್ತು ಫಿಟ್‌ನೆಸ್ ಮಟ್ಟವನ್ನು ಕಾಪಾಡಿಕೊಳ್ಳಲು ಪುರಾತನ ತಂತ್ರವನ್ನು ಹೆಚ್ಚಾಗಿ ಸಲ್ಲುತ್ತಾಳೆ. ಆದ್ದರಿಂದ, ಈ ವಾರಾಂತ್ಯದಲ್ಲಿ ಕಿಕ್‌ಸ್ಟಾರ್ಟ್ ಮಾಡಲು, ಕರೀನಾ ಯೋಗಾಸನವನ್ನು ಅಭ್ಯಾಸ ಮಾಡಿದರು ಮತ್ತು ನಮ್ಮ ಯೋಗ […]

Advertisement

Wordpress Social Share Plugin powered by Ultimatelysocial