ವಿಧಾನ ಪರಿಷತ್ ಚುನಾವಣೆ; ಸಮಿತಿ ರಚನೆ ಮಾಡಿದ ಬಿಜೆಪಿ

ಬೆಂಗಳೂರು, ಅಕ್ಟೋಬರ್ 10; ವಿಧಾನ ಪರಿಷತ್ ಚುನಾವಣೆಗೆ ಕರ್ನಾಟಕ ಬಿಜೆಪಿ ಸಿದ್ಧತೆ ಆರಂಭಿಸಿದೆ. ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಗಳು ಸೇರಿ ಒಟ್ಟು 25 ಸ್ಥಾನಗಳಿಗೆ 2022ರಲ್ಲಿ ಚುನಾವಣೆ ನಡೆಯಲಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಪರಿಷತ್‌ಗೆ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.

ಜೆಡಿಎಸ್ ತೊರೆಯುವುದಾಗಿ ಘೋಷಣೆ ಮಾಡಿದ ವಿಧಾನ ಪರಿಷತ್ ಸದಸ್ಯ!

ಮೇಲ್ಮನೆಯ ಸದಸ್ಯ ಬಲ 75. ಪ್ರಸ್ತುತ ಬಿಜೆಪಿಯ 32, ಕಾಂಗ್ರೆಸ್‌ನ 29 ಮತ್ತು ಜೆಡಿಎಸ್‌ನ 12 ಶಾಸಕರು ಇದ್ದಾರೆ. ಆಡಳಿತಾರೂಢ ಬಿಜೆಪಿ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಿಸಿದರೆ ವಿಧಾನ ಪರಿಷತ್‌ನಲ್ಲಿ ಮಸೂದೆಗಳನ್ನು ಪಾಸು ಮಾಡಿಕೊಳ್ಳಲು ಸಹಾಯಕವಾಗಲಿದೆ ಎಂಬ ಲೆಕ್ಕಾಚಾರದಲ್ಲಿದೆ.

ವಿಧಾನ ಪರಿಷತ್ ಚುನಾವಣೆ; ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆಯಲು ಇದೆಂಥಾ ನಿಯಮ?

ಈಗ ವಿಧಾನ ಪರಿಷತ್‌ನಲ್ಲಿ ಬಿಜೆಪಿಗೆ ಪೂರ್ಣ ಬಹುಮತವಿಲ್ಲ. ಆದ್ದರಿಂದ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಪರಿಷತ್ ಸಭಾಪತಿ ಸ್ಥಾನವನ್ನು ಜೆಡಿಎಸ್‌ನ ಬಸವರಾಜ ಹೊರಟ್ಟಿಗೆ ಬಿಟ್ಟುಕೊಟ್ಟಿದೆ. ಪ್ರತಿಪಕ್ಷ ಕಾಂಗ್ರೆಸ್ ಸಹ ಇರುವ ಸ್ಥಾನಗಳನ್ನು ಉಳಿಸಿಕೊಳ್ಳಲು ತಂತ್ರ ರೂಪಿಸುತ್ತಿದೆ. ಬಿಜೆಪಿ ಚುನಾವಣೆಯಲ್ಲಿ ಬಹುಮತ ಪಡೆದರೆ ಸಭಾಪತಿ ಸ್ಥಾನವನ್ನು ತಮ್ಮ ನಾಯಕರಿಗೆ ಕೊಡಬಹುದು ಎಂಬ ಲೆಕ್ಕಾಚಾರವೂ ಇದೆ.

Please follow and like us:

Leave a Reply

Your email address will not be published. Required fields are marked *

Next Post

ಆಸ್ಪತ್ರೆಯಲ್ಲಿ ನವಜಾತ ಶಿಶು ಅಪಹರಣ-ಮಹಿಳೆ ಅರೆಸ್ಟ್

Mon Oct 11 , 2021
ಆಗ ತಾನೇ ಜನಿಸಿದ ಮಗುವೊಂದನ್ನು ಆಸ್ಪತ್ರೆಯಿಂದ ಅಪಹರಿಸಿದ ಮಹಿಳೆಯೊಬ್ಬಳನ್ನು ತಮಿಳು ನಾಡಿನ ತಂಜಾವೂರು ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್‌ 5ರಂದು ರಾಜಲಕ್ಷ್ಮಿ ಎಂಬಾಕೆ ಹೆಣ್ಣು‌ ಮಗವಿಗೆ ಜನ್ಮ ನೀಡಿದ್ದಾರೆ. ಹೆತ್ತವರ ವಿರೋಧದ ನಡುವೆ ಮದುವೆ ಮಾಡಿಕೊಂಡ ಗುಣಶೇಖರನ್ ಹಾಗೂ ರಾಜಲಕ್ಷ್ಮಿಗೆ ಮಗುವಿನ ಹೆರಿಗೆಯಾದ ವೇಳೆ ಆಸ್ಪತ್ರೆಯಲ್ಲಿ ನೋಡಲು ಯಾರೊಬ್ಬರೂ ಇರಲಿಲ್ಲ.ತಾನೂ ಸಹ ಗರ್ಭಿಣಿಯಾದ ಕಾರಣ ಆಸ್ಪತ್ರೆಗೆ ಚೆಕಪ್‌ಗಾಗಿ ಹೋಗಿದ್ದ ವಿಜಿ ಎಂಬಾಕೆ ರಾಜಲಕ್ಷ್ಮಿ ದಂಪತಿಗೆ ಕೆಲವೊಂದು ಸಹಾಯಗಳನ್ನೂ ಮಾಡಿದ್ದಳು. ಶನಿವಾರ ಬೆಳಿಗ್ಗೆ […]

Advertisement

Wordpress Social Share Plugin powered by Ultimatelysocial