ಕಣ್ಣುಗಳ ಕೆಳಗೆ ಡಾರ್ಕ್ ಸರ್ಕಲ್ ಗಳು ಯುವತಿಯರ ಸೌಂದರ್ಯಕ್ಕೆ ಕಪ್ಪು ಚುಕ್ಕೆ ಇದ್ದಂತೆ!

ಕಣ್ಣುಗಳ ಕೆಳಗೆ, ಮೊಣಕೈ  ಡಾರ್ಕ್ ಸರ್ಕಲ್ ಗಳು ಯುವತಿಯರ ಸೌಂದರ್ಯಕ್ಕೆ ಕಪ್ಪು ಚುಕ್ಕೆ ಇದ್ದಂತೆ. ಅದನ್ನು ಹೋಗಲಾಡಿಸಲು ಎಲ್ರೂ ಸಾಕಷ್ಟು ಸರ್ಕಸ್ ಮಾಡಿರ್ತಾರೆ. ಆದ್ರೆ ಕಪ್ಪು ಕಲೆಗಳನ್ನು ಹೋಗಲಾಡಿಸಲು ಅಷ್ಟೆಲ್ಲಾ ಕಷ್ಟಪಡಬೇಕಾಗಿಯೇ ಇಲ್ಲ, ಅದಕ್ಕಾಗಿ ಮೂರು ಸಿಂಪಲ್ ಟಿಪ್ಸ್ ಇಲ್ಲಿದೆ.ಅಲೋವೆರಾ : ಇದು ಬಹಳ ಉಪಯುಕ್ತವಾದ ವಸ್ತು. ರೋಗಗಳಿಂದ ದೂರವಿಡುವುದು ಮಾತ್ರವಲ್ಲ, ಅಲೋವೆರಾ ನಿಮ್ಮ ಸೌಂದರ್ಯವನ್ನೂ ಹೆಚ್ಚಿಸುತ್ತದೆ. ಅಲೋವೆರಾದ ಒಂದು ಸ್ಟಿಕ್ ತೆಗೆದುಕೊಳ್ಳಿ, ಅಲೋವೆರಾ ಜೆಲ್ ತೆಗೆದು, ನಿಮ್ಮ ದೇಹದ ಯಾವ್ಯಾವ ಭಾಗದಲ್ಲಿ ಕಪ್ಪು ಕಲೆಗಳಿವೆಯೋ ಅಲ್ಲೆಲ್ಲಾ ಅದನ್ನು ಹಚ್ಚಿಕೊಳ್ಳಿ. 20 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಲ್ಲಿ ತೊಳೆದುಕೊಳ್ಳಿ. ಪ್ರತಿದಿನ ಹೀಗೆ ಮಾಡುತ್ತಾ ಬಂದ್ರೆ ಕೆಲವೇ ದಿನಗಳಲ್ಲಿ ಡಾರ್ಕ್ ಸರ್ಕಲ್ ಮಾಯವಾಗುತ್ತದೆ.ನಿಂಬೆಹಣ್ಣು : ನಿಂಬೆಹಣ್ಣಿನಿಂದ ಕಪ್ಪು ಕಲೆಗಳನ್ನು ಸುಲಭವಾಗಿ ಹೋಗಲಾಡಿಸಬಹುದು. ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಆಯಸಿಡ್ ಹಾಗೂ ಇತರ ಅಂಶಗಳಿಂದ ಡಾರ್ಕ್ ಸರ್ಕಲ್ ಮಾಯವಾಗುತ್ತದೆ. ಪ್ರತಿದಿನ ಅರ್ಧ ನಿಂಬೆಹಣ್ಣನ್ನು ತೆಗೆದುಕೊಂಡು ಮೊಣಕಾಲು ಹಾಗೂ ಮೊಣಕೈಗೆ ಹಚ್ಚಿಕೊಳ್ಳಿ. ಕೆಲವೇ ದಿನಗಳಲ್ಲಿ ನಿಮಗೆ ಉತ್ತಮ ಫಲಿತಾಂಶ ಸಿಕ್ಕೇ ಸಿಗುತ್ತದೆ.ಆಲೂಗಡ್ಡೆ ಮತ್ತು ಸೌತೇಕಾಯಿ : ಆಲೂಗಡ್ಡೆ ಮತ್ತು ಸೌತೆಕಾಯಿಯ ಸ್ಲೈಸ್ ಮಾಡಿಕೊಳ್ಳಿ. ಅದನ್ನು ಸುಮಾರು 20 ನಿಮಿಷಗಳ ಕಾಲ ಕಣ್ಣುಗಳ ಮೇಲೆ ಇಟ್ಟುಕೊಳ್ಳಿ. ಪ್ರತಿದಿನ ಹೀಗೆ ಮಾಡುತ್ತಾ ಬಂದರೆ ಕಣ್ಣುಗಳ ಸುತ್ತ ಇರುವ ಡಾರ್ಕ್ ಸರ್ಕಲ್ ಮಾಯವಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಆಧಾರ್ ಹೊಂದಿದ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ: ಬೆಳೆ ಹಾನಿಗೆ ಡಬಲ್ ಪರಿಹಾರ

Thu Feb 10 , 2022
ರಾಯಚೂರು: 2021ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಈಗಾಗಲೇ ಭೂಮಿ ಪರಿಹಾರ ತಂತ್ರಾಂಶದಲ್ಲಿ ದಾಖಲು ಮಾಡಿರುವ ಬೆಳೆ ಹಾನಿಯಾದ ರೈತರಿಗೆ ಒಟ್ಟು 20 ಹಂತಗಳಲ್ಲಿ 84,982 ಫಲಾನುಭವಿಗಳಿಗೆ 60.22 ಕೋಟಿ ರೂ.ಗಳ ಇನ್‌ಪುಟ್ ಸಬ್ಸಿಡಿಯನ್ನು ಸರ್ಕಾರದಿಂದ ನೇರವಾಗಿ ಆಧಾರ್ ಸಂಖ್ಯೆ ಹೊಂದಿರುವ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ.ಮುಂಗಾರು ಹಂಗಾಮಿನಲ್ಲಿ ಮಳೆಯಾಶ್ರಿತ ಬೆಳೆ ಪ್ರತಿ ಹೆಕ್ಟರಿಗೆ ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ 6,800 ರೂ.ಹಾಗೂ ಹೆಚ್ಚುವರಿ ಪರಿಹಾರ 6,800 ರೂ. ಸೇರಿದಂತೆ ಒಟ್ಟು 13,600ರೂ., ನೀರಾವರಿ […]

Advertisement

Wordpress Social Share Plugin powered by Ultimatelysocial