ಹೈಕೋರ್ಟ್ ಆದೇಶದ ಬಳಿಕ ನಟ ದುನಿಯಾ ವಿಜಯ್ ವಿರುದ್ಧ ಎಫ್‌ಐಆರ್ ದಾಖಲು!

ಟರೊಬ್ಬರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶದ ಬಳಿಕ ನಗರದ ಹೈಗ್ರೌಂಡ್ಸ್ ಪೊಲೀಸರು ನಟ ದುನಿಯಾ ವಿಜಯ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಬೆಂಗಳೂರು: ನಟರೊಬ್ಬರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶದ ಬಳಿಕ ನಗರದ ಹೈಗ್ರೌಂಡ್ಸ್ ಪೊಲೀಸರು ನಟ ದುನಿಯಾ ವಿಜಯ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.ನಟನನ್ನು ಬೆದರಿಸಿ ಕಾರಿಗೆ ಹಾನಿ ಮಾಡಿದ್ದಕ್ಕಾಗಿ ಜಿಮ್ ಟ್ರೈನರ್ ಸೇರಿದಂತೆ ಇಬ್ಬರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸೆಪ್ಟೆಂಬರ್ 23, 2018 ರಂದು ವಿಜಯ್ ಮತ್ತು ಅವರ ಮಗ ಸಾಮ್ರಾಟ್ ಡಾ ಬಿಆರ್ ಅಂಬೇಡ್ಕರ್ ಭವನಕ್ಕೆ ಹೋಗಿದ್ದರು, ಅಲ್ಲಿ ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆಯುತ್ತಿತ್ತು. ಕಾರ್ಯಕ್ರಮದಲ್ಲಿ ವಿಜಯ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ದುನಿಯಾ ವಿಜಯ್ ಸ್ಥಳಕ್ಕೆ ತೆರಳುತ್ತಿದ್ದಂತೆಯೇ ಸ್ಥಳದಲ್ಲಿದ್ದ ಮಾರುತಿ ಗೌಡ ಎಂಬಾತ ಕೆಲ ನಿಂದನಾತ್ಮಕ ಮಾತುಗಳನ್ನಾಡಿದ್ದಾನೆ.ಈ ವೇಳೆ ವಿಜಯ್ ಅವರು ಜೀವ ಬೆದರಿಕೆ ಹಾಕಿದ್ದರು ಎಂದು ಹೇಳಲಾಗುತ್ತಿದೆ. ಏತನ್ಮಧ್ಯೆ, ಆಕ್ರೋಶಗೊಂಡ ನಟನ ಅಭಿಮಾನಿಗಳು ಮಾರುತಿ ಗೌಡರನ್ನು ಸುತ್ತುವರೆದಿದ್ದ, ನಂತರ ವಿಜಯ್ ಅವರನ್ನು ಅವರ ಕಾರಿನಲ್ಲಿ ಕೂರಿಸಿದ್ದಾರೆ. ಆದರೆ, ಮಾರುತಿ ಗೌಡರ ಸಂಬಂಧಿ ಪಾನಿಪುರಿ ಕಿಟ್ಟಿ ತಕ್ಷಣವೇ ಹೈಗ್ರೌಂಡ್ಸ್ ಪೊಲೀಸರನ್ನು ಸಂಪರ್ಕಿಸಿ, ವಿಜಯ್ ಗೌಡನನ್ನು ಅಪಹರಿಸಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದರು. ಪೊಲೀಸರು ವಿಜಯ್ ಅವರನ್ನು ಸಂಪರ್ಕಿಸಿ ಠಾಣೆಗೆ ಬರುವಂತೆ ಹೇಳುತ್ತಿದ್ದಂತೆ ವಿಜಯ್ ಅವರು ಮಾರುತಿ ಗೌಡ ಅವರನ್ನು ಠಾಣೆಗೆ ಕರೆತಂದಿದ್ದರು.ಠಾಣೆಗೆ ಪ್ರವೇಶಿಸುವ ಮೊದಲು, ಕಿಟ್ಟಿ ಮತ್ತು ಅವರ ಸಹಾಯಕರು ವಿಜಯ್ಗೆ ಬೆದರಿಕೆ ಹಾಕಿದ್ದಾರೆ ಮತ್ತು ಅವರ ಕಾರಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಪಹರಣದ ಆರೋಪದ ಮೇಲೆ ವಿಜಯ್ ಮತ್ತು ಇತರ ಮೂವರನ್ನು ಪೊಲೀಸರು ಬಂಧಿಸಿದ್ದರು. ನಂತರ ನಟ ಕಿಟ್ಟಿ, ಮಾರುತಿ ಗೌಡ ಮತ್ತು ಇತರರ ವಿರುದ್ಧ ಪ್ರತಿದೂರು ದಾಖಲಾಗಿತ್ತು. ಆದಾಗ್ಯೂ, ಕಿಟ್ಟಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು, ನಂತರ ವಿಜಯ್ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದುಗೊಂಡಿತ್ತು.ನ್ಯಾಯಾಲಯದ ಆದೇಶವನ್ನು ಕಿಟ್ಟಿ ಅವರು ಪ್ರಶ್ನಿಸಿದ್ದರು. ಇದೀಗ ಎಫ್ಐಆರ್ ದಾಖಲಿಸಲು ಹೈಕೋರ್ಟ್ ಸೂಚಿಸಿದೆ ಎಂದು ತಿಳಿದುಬಂದಿದೆ. ನ್ಯಾಯಾಲಯದ ನಿರ್ದೇಶನದ ಆಧಾರದ ಮೇಲೆ ನಾವು ಕಿಟ್ಟಿ, ಗೌಡ ಮತ್ತು ಇತರರ ವಿರುದ್ಧ ಹೊಸದಾಗಿ ಎಫ್ಐಆರ್ ದಾಖಲಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ಶಾಲೆಗಳಲ್ಲಿ ಬಿಸಿಯೂಟ ವಿತರಣೆಗೆ ಸಮಯ ಬದಲಾವಣೆ ಮಾಡಿ ಶಿಕ್ಷಣ ಇಲಾಖೆ ಆದೇಶ!

Tue Dec 13 , 2022
ಬೆಂಗಳೂರು : ಶಿಕ್ಷಣ ಇಲಾಖೆಯು ರಾಜ್ಯದ ಶಾಲಾ ಮಕ್ಕಳ ಬಿಸಿಯೂಟ ಸಮಯದ ಬದಲಾವಣೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದು, 1-5 ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ 1 ಗಂಟೆಯಿಂದ 1.45 ರವರೆಗೆ ಬಿಸಿಯೂಟ ವಿತರಿಸಲು ಸೂಚನೆ ನೀಡಿದೆ.ಶಾಲೆಗಳಲ್ಲಿ ಎಲ್ಲಾ ಮಕ್ಕಳನ್ನು ಒಟ್ಟಿಗೆ ಸಾಲಾಗಿ ನಿಲ್ಲಿಸಿ ಆಹಾರ ವಿತರಿಸುವುದು ಹಾಗೂ ಕಡಿಮೆ ಸಮಯದಲ್ಲಿ ಊಟ ಸ್ವೀಕರಿಸುವುದು, ತಟ್ಟೆ-ಲೋಟ ತೊಳೆಯುವಾಗ ನೂಕನುಗ್ಗಲು ತಡೆಗಟ್ಟಬೇಕಾಗಿದೆ. ಈ ಹಿನ್ನೆಲೆಯಲ್ಲಿ 1 ರಿಂದ 5 ನೇ ತರಗತಿ ಮಕ್ಕಳಿಗೆ […]

Advertisement

Wordpress Social Share Plugin powered by Ultimatelysocial