ಖಾಸಗಿ ಏಜೆನ್ಸಿಗಳಿಂದ ಚಾಲಕರ ನೇಮಕ ಪ್ರಕ್ರಿಯೆ!

ಬೆಂಗಳೂರು, ಡಿಸೆಂಬರ್‌ 9: ತೀವ್ರ ಸಿಬ್ಬಂದಿ ಕೊರತೆಯಿಂದ ಬಸ್ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಇತ್ತೀಚೆಗೆ 1,000 ಬಸ್‌ ಚಾಲಕರನ್ನು ಒದಗಿಸಲು ಖಾಸಗಿ ಏಜೆನ್ಸಿಗಳಿಗೆ ಟೆಂಡರ್ ಆಹ್ವಾನಿಸಿದೆ.

ಪ್ರಸ್ತುತ 6,800 BMTC ಬಸ್‌ಗಳಲ್ಲಿ 5,700 ಮಾತ್ರ ಕಾರ್ಯನಿರ್ವಹಿಸುತ್ತಿವೆ.

ಇದು ಮುಖ್ಯವಾಗಿ ಚಾಲಕರ ಕೊರತೆಯಿಂದ ಉಂಟಾಗಿದೆ. ಗುತ್ತಿಗೆ ಆಧಾರದ ಮೇಲೆ ನಡಯುತ್ತಿರುವ ಇ-ಬಸ್‌ಗಳು ಖಾಸಗಿ ಗುತ್ತಿಗೆ ಚಾಲಕರನ್ನು ಹೊಂದಿವೆ. ಇದು ಖಾಸಗೀಕರಣದ ಯೋಜನೆಯ ಭಾಗವಾಗಿದೆ ಎಂದು ಅನೇಕ ಉದ್ಯೋಗಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ನೌಕರರ ಕಾಯಂ ನೇಮಕಾತಿಗೆ ಸರ್ಕಾರ ಅವಕಾಶ ನೀಡದ ಕಾರಣ ನಮಗೆ ಪರ್ಯಾಯ ಮಾರ್ಗವಿಲ್ಲ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

‘ಮುಖ್ಯವಾಗಿ ಕೋವಿಡ್-19 ರ ನಂತರ ಸಿಬ್ಬಂದಿಯ ತೀವ್ರ ಕೊರತೆಯಿದೆ. ಮುಷ್ಕರದಲ್ಲಿ ಭಾಗವಹಿಸಿದ ನಂತರ ಹಲವರನ್ನು ವಜಾಗೊಳಿಸಲಾಗಿದೆ. ನಾವು ಈಗ ಹೆಚ್ಚಿನ ಬಸ್‌ಗಳನ್ನು ಪಡೆಯುತ್ತಿದ್ದೇವೆ. ರಾತ್ರಿಗಳಲ್ಲಿ ಅವುಗಳನ್ನು ನಿರ್ವಹಿಸಲು ಸಿಬ್ಬಂದಿ ಅಗತ್ಯವಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಆಯ್ಕೆಯಾದ ಏಜೆನ್ಸಿಯು ಪ್ರತಿ BMTC ವಲಯಕ್ಕೆ 200 ಚಾಲಕರನ್ನು ಒದಗಿಸಲಿದೆ. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಈಶಾನ್ಯ ವಲಯಗಳನ್ನು ಬಿಎಂಟಿಸಿ ಹೊಂದಿದೆ. ಆಯ್ಕೆಯಾದ ಚಾಲಕರು 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅವರು ಮಾನ್ಯ ಬ್ಯಾಡ್ಜ್‌ನೊಂದಿಗೆ ಎರಡು ವರ್ಷಗಳ HPV/HTV ಪರವಾನಗಿಯನ್ನು ಹೊಂದಿರಬೇಕು’ ಎಂದು ಬಿಎಂಟಿಸಿ ಹೇಳಿದೆ.

‘ವ್ಯಕ್ತಿಯ ವಯಸ್ಸು 50 ವರ್ಷಕ್ಕಿಂತ ಹೆಚ್ಚಿರಬಾರದು. ವರ್ಕ್ ಆರ್ಡರ್ ನೀಡಿದ 15 ದಿನಗಳಲ್ಲಿ ಏಜೆನ್ಸಿ ಚಾಲಕರನ್ನು ನೀಡಬೇಕು. ಗುತ್ತಿಗೆ ಅವಧಿ 11 ತಿಂಗಳು ಇರುತ್ತದೆ,’ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂದಿನ ತಿಂಗಳು ಟೆಂಡರ್‌ ಅಂತಿಮಗೊಳ್ಳುವ ಸಾಧ್ಯತೆ ಇದೆ.

‘ಆಯ್ಕೆಯಾದ ಚಾಲಕರನ್ನು BMTC ನಡೆಸುವ ಚಾಲನಾ ಕೌಶಲ್ಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಮತ್ತು ಅನುತ್ತೀರ್ಣರಾದವರನ್ನು ಪರಿಗಣಿಸಲಾಗುವುದಿಲ್ಲ. ಏಜೆನ್ಸಿಯು ವೈಯಕ್ತಿಕ ವಿವರಗಳ ರಿಜಿಸ್ಟರ್ ಅನ್ನು ನಿರ್ವಹಿಸಬೇಕು. ಅಪರಾಧ/ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಚಾಲಕರನ್ನು ಏಜೆನ್ಸಿ ನಿಯೋಜಿಸುವುದಿಲ್ಲ. ಯಾವುದೇ ಸಮಯದಲ್ಲಿ, ಹೊರಗುತ್ತಿಗೆ ಚಾಲಕರು ಕಾರ್ಯಕುಶಲತೆ ಸರಿಯಾಗಿಲ್ಲವೆಂದು BMTC ತೀರ್ಮಾನಿಸಿದರೆ, ತಕ್ಷಣದ ಬದಲಿಗಾಗಿ ಒತ್ತಾಯಿಸುವ ಹಕ್ಕನ್ನು ಅದು ಕಾಯ್ದಿರಿಸುತ್ತದೆ’ ಎಂದು ಟೆಂಡರ್ ಪ್ರತಿಗಳು ಹೇಳುತ್ತವೆ.

ಅಗತ್ಯವಿರುವ ಸಂಖ್ಯೆಯ ಚಾಲಕರನ್ನು ಒದಗಿಸುವಲ್ಲಿ ಏಜೆನ್ಸಿಯು ತಪ್ಪಿದ್ದಲ್ಲಿ, 30- ದಿನದ ಸೂಚನೆಯನ್ನು ನೀಡುವ ಮೂಲಕ ಒಪ್ಪಂದವನ್ನು ಮುಕ್ತಾಯಗೊಳಿಸಲಾಗುತ್ತದೆ. ಚಾಲಕರು ನಿಗದಿತ ನಿರ್ಗಮನಕ್ಕೆ 30 ನಿಮಿಷಗಳ ಮೊದಲು ಕರ್ತವ್ಯಕ್ಕೆ ಹಾಜರಾಗಬೇಕು. BMTC ಒಪ್ಪಿಗೆಯಿಲ್ಲದೆ ಏಜೆನ್ಸಿ ಚಾಲಕರನ್ನು ಬದಲಾಯಿಸಬಾರದು.

350 ಖಾಸಗಿ ಚಾಲಕರನ್ನು ನೇಮಿಸಿಕೊಂಡ ಕೆಎಸ್‌ಆರ್‌ಟಿಸಿ

ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಕೆಎಸ್‌ಆರ್‌ಟಿಸಿ ಇತ್ತೀಚೆಗೆ ಮೂರು ಖಾಸಗಿ ಏಜೆನ್ಸಿಗಳಿಗೆ 350 ಚಾಲಕರನ್ನು ಪೂರೈಸಲು ವರ್ಕ್ ಆರ್ಡರ್ ನೀಡಿದೆ.

ಈ ಚಾಲಕರು ವಾರದಲ್ಲಿ ಕರ್ತವ್ಯಕ್ಕೆ ಸೇರಲಿದ್ದು, ಮಂಗಳೂರು, ಚಾಮರಾಜನಗರ, ಉಡುಪಿ, ಪುತ್ತೂರು ಮತ್ತು ರಾಮನಗರ ವಿಭಾಗಗಳಲ್ಲಿ ನಿಯೋಜಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಎಂಡಿ ವಿ ಅನ್ಬು ಕುಮಾರ್ ಹೇಳಿದರು.

ಮಾರ್ಚ್ ವೇಳೆಗೆ ಸುಮಾರು 600 ಹೊಸ ಬಸ್‌ಗಳನ್ನು ಪಡೆಯಲಿದ್ದೇವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇದು ಸೇವೆಗಳನ್ನು ಸುಧಾರಿಸುತ್ತದೆ ಎಂದು ಕುಮಾರ್ ತಿಳಿಸಿದರು. ಕೆಎಸ್‌ಆರ್‌ಟಿಸಿ ರಾಜ್ಯಾದ್ಯಂತ ತನ್ನ ಬಸ್‌ಗಳನ್ನು ಓಡಿಸಲು 77 ನಿವೃತ್ತ ಚಾಲಕರನ್ನೂ ನೇಮಿಸಿಕೊಂಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಾ. ಬಿ. ವಿ. ರಾಜಾರಾಂ ಕರ್ನಾಟಕ ರಂಗಭೂಮಿ ಕಂಡ ಮಹಾನ್ ಪ್ರತಿಭೆ.

Mon Jan 9 , 2023
ಬಿ. ವಿ. ರಾಜಾರಾಂ 1953ರ ಜನವರಿ 8ರಂದು ಜನಿಸಿದರು. ತಂದೆ ಬುಕ್ಕಾಂಬುಧಿ ವೆಂಕಟೇಶಯ್ಯ, ತಾಯಿ ತಾವರೆಕೆರೆ ಭಾಗೀರಥಮ್ಮ.ರಾಜಾರಾಂ ಚಿಕ್ಕವಯಸ್ಸಿನಿಂದಲೇ ನಾಟಕಗಳಲ್ಲಿ ಆಸಕ್ತಿ ಮೂಡಿಸಿಕೊಂಡವರು. ಒಮ್ಮೆ ಅವರು ನುಡಿದದ್ದು ಇಂತು “ಶಾಲೆಯಲ್ಲಿ ತುಂಟಾಟ ಮಾಡಿಕೊಂಡು ಓಡಿಯಾಡುತ್ತಿದ್ದ ಹುಡುಗರನ್ನು ನಾಟಕಕ್ಕೆ ಅಂತ ಹಾಕೋರು. ನಾವು ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಲೇ ಎಲ್ಲೋ ಅದರಲ್ಲಿ ಆಸಕ್ತಿಯನ್ನೂ ಮೂಡಿಸಿಕೊಂಡವರು. ಕಾಲೇಜಿನಲ್ಲಿ ಓದುವಾಗ ಮತ್ತು ಕೆಲಸ ಮಾಡುವಾಗ ಅಂದು ರಂಗಭೂಮಿಯಲ್ಲಿ ನಡೆಯುತ್ತಿದ್ದ ಅದ್ಭುತ ನಾಟಕ ಪ್ರಯೋಗಗಳನ್ನು ಕಂಡು ನಮಗೂ […]

Advertisement

Wordpress Social Share Plugin powered by Ultimatelysocial