ದಕ್ಷಿಣ ಭಾರತದ ಸಿನಿಮಾಗಳು ಕಮಾಲ್ ಮಾಡುತ್ತಿವೆ.

 

 

ದಕ್ಷಿಣ ಭಾರತದ ಸಿನಿಮಾಗಳು ಕಮಾಲ್ ಮಾಡುತ್ತಿವೆ. ಭಾರತೀಯ ಚಿತ್ರರಂಗದ ಮೇಲೆ ಬಾಲಿವುಡ್ ಸಾಧಿಸಿದ್ದ ಏಕಸ್ವಾಮ್ಯವನ್ನು ಮುರಿದಿರುವುದಲ್ಲದೆ, ಬಾಲಿವುಡ್‌ ಪ್ರಾಬಲ್ಯ ಇದ್ದ ಪ್ರದೇಶಗಳಲ್ಲಿಯೇ ದಕ್ಷಿಣ ಭಾರತದ ಸಿನಿಮಾಗಳು ಹಿಂದಿ ಸಿನಿಮಾಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿವೆ

‘ಬಾಹುಬಲಿ’ಯಿಂದ ಆರಂಭವಾದ ಬಾಲಿವುಡ್‌ ಮೇಲೆ ದಕ್ಷಿಣ ಭಾರತ ಸಿನಿಮಾಗಳ ದಂಡಯಾತ್ರೆ, ‘ಪುಷ್ಪ’, ‘RRR’ ಇದೀಗ ‘ಕೆಜಿಎಫ್ 2’ ಮೂಲಕ ಮುಂದೆ ಮುಂದೆ ಸಾಗುತ್ತಲೇ ಇದೆ. ‘ಕೆಜಿಎಫ್ 2’ ಬಿಡುಗಡೆ ಬಳಿಕವಂತೂ ಬಾಲಿವುಡ್‌ ದಂಗಾಗಿಬಿಟ್ಟಿದೆ.

ಹಿಂದಿ ಭಾಷಿಕ ಪ್ರದೇಶದಲ್ಲಿ ‘ಕೆಜಿಎಫ್ 2’ ಕೇವಲ ನಾಲ್ಕು ದಿನದಲ್ಲಿ 200 ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡಿ, ಹಿಂದಿ ಸಿನಿಮಾಗಳ ದಾಖಲೆಗಳನ್ನು ಪುಡಿ-ಪುಡಿ ಮಾಡಿಬಿಟ್ಟಿದೆ. ದಕ್ಷಿಣ ಭಾರತ ಸಿನಿಮಾಗಳ ದಾಳಿಯಿಂದ ಕಂಗೆಟ್ಟಿರುವ ಬಾಲಿವುಡ್ಡಿಗರು, ತಾವು ಮಾಡಿರುವ ತಪ್ಪಿನ ವಿಶ್ಲೇಷಣೆಗೆ ಇಳಿದಿದ್ದಾರೆ. ಇದೀಗ ‘ಕೆಜಿಎಫ್ 2’ ಸಿನಿಮಾದಲ್ಲಿ ಅಧೀರನ ಪಾತ್ರದಲ್ಲಿ ನಟಿಸಿರುವ ಸಂಜಯ್ ದತ್, ಬಾಲಿವುಡ್ ಸಿನಿಮಾಗಳು ದಕ್ಷಿಣ ಭಾರತ ಸಿನಿಮಾಗಳ ಮುಂದೆ ಸೋಲುತ್ತಿರುವುದಕ್ಕೆ ಕಾರಣವೊಂದನ್ನು ಹೆಕ್ಕಿ ನೀಡಿದ್ದಾರೆ.

ಬಾಲಿವುಡ್‌ ಮಾಡಿರುವ ತಪ್ಪಿನ ಬಗ್ಗೆ ಸಂಜಯ್ ದತ್ ಮಾತು
ಬಾಲಿವುಡ್‌ ಸಿನಿಮಾ ರಂಗ ಮಾಡಿದ ತಪ್ಪಿನ ಬಗ್ಗೆ ಮಾತನಾಡಿರುವ ಸಂಜಯ್ ದತ್, ”ಬಾಲಿವುಡ್ ಸಿನಿಮಾ ರಂಗ ಹೀರೋಯಿಸಮ್ ಸಿನಿಮಾಗಳನ್ನು ಮರೆತುಬಿಟ್ಟಿದೆ. ಆದರೆ ದಕ್ಷಿಣ ಭಾರತ ಸಿನಿಮಾಗಳು ಹೀರೋಯಿಸಮ್ ಸಿನಿಮಾಗಳನ್ನು ಮರೆತಿಲ್ಲ. ಅವುಗಳ ಮೂಲಕವೇ ಕತೆ ಹೇಳುತ್ತಿದೆ. ಲಾರ್ಜರ್ ದ್ಯಾನ್ ಲೈಫ್ ಮಾದರಿಯ ಸಿನಿಮಾಗಳನ್ನು ಗುಣಮಟ್ಟದ ಜೊತೆಗೆ ನೀಡುತ್ತಿವೆ” ಎಂದಿದ್ದಾರೆ.

ನಮ್ಮ ಪ್ರೇಕ್ಷಕರನ್ನು ನಾವು ಮರೆತಿದ್ದೇವೆ: ಸಂಜಯ್ ದತ್

”ಜೀವನದ ಪ್ರತಿಫಲನದಂಥಹಾ ಸಿನಿಮಾ, ರೊಮ್ಯಾಂಟಿಕ್ ಸಿನಿಮಾಗಳು ಒಳ್ಳೆಯವಲ್ಲ ಎಂದು ನಾನು ಹೇಳುತ್ತಿಲ್ಲ ಆದರೆ ಅದರ ಜೊತೆಗೆ ಹೀರೋಯಿಸಮ್ ಸಿನಿಮಾಗಳು ಸಹ ಬೇಕು. ನಾವು ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ರಾಜಸ್ಥಾನದ ದೊಡ್ಡ ಸಂಖ್ಯೆಯ ನಮ್ಮ ಆಡಿಯನ್ಸ್‌ಗಳನ್ನು ಮರೆತೇ ಬಿಟ್ಟಿದ್ದೇವೆ. ಕೇವಲ ಕೆಲವೇ ವರ್ಗಕ್ಕೆ ನಾವು ಸಿನಿಮಾಗಳನ್ನು ಮಾಡುತ್ತಿದ್ದೇವೆ. ಬಾಲಿವುಡ್ ಮತ್ತೆ ತನ್ನ ಹಿಂದಿನ ವೈಭಕ್ಕೆ ಮರಳುತ್ತದೆನ್ನುವ ಅಭಿಲಾಶೆ ಇದೆ” ಎಂದಿದ್ದಾರೆ ಸಂಜಯ್ ದತ್.

ರಾಜಮೌಳಿಯ ಉದಾಹರಣೆ ನೀಡಿದ ಸಂಜಯ್ ದತ್

ರಾಜಮೌಳಿಯ ಉದಾಹರಣೆ ನೀಡಿರುವ ಸಂಜಯ್ ದತ್, ”ನೋಡಿ ರಾಜಮೌಳಿ ತನ್ನ ಯೋಜನೆಗೆ, ಯೋಚನೆಗೆ ಸರಿ ಹೊಂದುವ ನಿರ್ಮಾಪಕರನ್ನು ತಾವೇ ಆಯ್ಕೆ ಮಾಡುತ್ತಾರೆ. ನಮ್ಮಲ್ಲಿ ಅಂಥಹಾ ನಿರ್ಮಾಪಕರು ಹಲವರಿದ್ದಾರೆ. ಸುಭಾಷ್ ಘಾಯ್, ಯಶ್ ಚೋಪ್ರಾ, ಗುಲ್ಶನ್ ರಾಯ್, ಯಶ್ ಜೋಹರ್ ಇನ್ನೂ ಹಲವು ನಿರ್ಮಾಪಕರು ಎಂತೆಂಥಾ ಒಳ್ಳೆಯ ಸಿನಿಮಾ ಮಾಡಿದ್ದಾರೆ ಗಮನಿಸಿ. ದಕ್ಷಿಣ ಭಾರತದಲ್ಲಿ ಅವರು ಲಿಖಿತ ಚಿತ್ರಕತೆಯೊಂದಿಗೆ ಸಿನಿಮಾ ಮಾಡುತ್ತಾರೆ. ಕತೆಯನ್ನು ಹಾಳೆಯ ಮೇಲೆ ಬರೆಯುತ್ತಾರೆ. ಆದರೆ ನಮ್ಮಲ್ಲಿ ಸಿನಿಮಾ ಬಿಡುಗಡೆ ಆದಮೇಲೆ ಎಷ್ಟು ರಿಕವರಿ ಆಯಿತೆಂಬ ಲೆಕ್ಕ ಮಾತ್ರ ಹಾಳೆಯ ಮೇಲಿರುತ್ತದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಸಂಜಯ್.

ಅಧೀರ ಹಾಗೂ ಕಾಂಚಾಗೂ ಇರುವ ವ್ಯತ್ಯಾಸವೇನು?

ಅದೇ ಸಂದರ್ಶನದಲ್ಲಿ ‘ಅಧೀರ’ ಪಾತ್ರಕ್ಕೂ ‘ಕಾಂಚಾ’ ಪಾತ್ರಕ್ಕೂ ಇರುವ ವ್ಯತ್ಯಾಸದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಸಂಜಯ್ ದತ್, ”ಇಬ್ಬರ ಗುರಿ ಒಂದೇ, ಕಾಂಚಾಗೆ ಮಾಂಡ್ವಾ ಬೇಕಿರುತ್ತದೆ, ಅಧೀರನಿಗೆ ಕೆಜಿಎಫ್. ಇಬ್ಬರೂ ಸಹ ತಮ್ಮ ಗುರಿಯೂ ಅಚಲ. ಆದರೆ ಇಬ್ಬರ ಲುಕ್ ಹಾಗೂ ಫೀಲ್ ಮಾತ್ರವೇ ಭಿನ್ನ. ಅಧೀರ ಹಾಗೂ ಕಾಂಚಾ ಗುರಿ ಒಂದೇ ಆದರು ವ್ಯಕ್ತಿತ್ವದಲ್ಲಿ ಹಾಗೂ ವೇಷ ಭೂಷಣಗಳಲ್ಲಿ ಬದಲಾವಣೆ ಇದೆ ಎಂದಿದ್ದಾರೆ.

ಚಿಂತೆ ವ್ಯಕ್ತಪಡಿಸಿರುವ ಸಲ್ಮಾನ್ ಖಾನ್

ಬಾಲಿವುಡ್ ಪ್ರದೇಶದಲ್ಲಿ ದಕ್ಷಿಣದ ಸಿನಿಮಾಗಳು ಒಳ್ಳೆಯ ಪ್ರದರ್ಶನ ಮಾಡುತ್ತಿರುವ ಬಗ್ಗೆ ಸಲ್ಮಾನ್ ಖಾನ್ ಸಹ ಚಿಂತೆಗೀಡಾಗಿದ್ದು, ”ದಕ್ಷಿಣದ ಸಿನಿಮಾಗಳು ಇಲ್ಲಿ ಚೆನ್ನಾಗಿ ಪ್ರದರ್ಶನ ಕಾಣುತ್ತವೆ, ಆದರೆ ನಮ್ಮ ಸಿನಿಮಾಗಳು ಅವರ ಭಾಗದಲ್ಲಿ ಏಕೆ ಓಡುವುದಿಲ್ಲ?” ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ನಾವೂ ಸಹ ಹೀರೋಯಿಸಮ್ ಸಿನಿಮಾಗಳನ್ನು ಮಾಡುವುದನ್ನು ಹೆಚ್ಚು ಮಾಡಬೇಕು, ಹಿರೋಯಿಸಮ್ ಸಿನಿಮಾಗಳು, ದಕ್ಷಿಣದ ಸಿನಿಮಾಗಳು ಹಿರೋಯಿಸಮ್ ಸಿನಿಮಾಗಳ ಮೂಲಕವೇ ದೊಡ್ಡ ಯಶಸ್ಸನ್ನು ಗಳಿಸುತ್ತಿವೆ” ಎಂದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೊಲೆ, ದೊಂಬಿ ಮೂಲಕ ಗಲಭೆ ನಿರ್ಮಾಣದ ಷಡ್ಯಂತ್ರ ನಡೆಯುತ್ತಿದೆ,ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

Wed Apr 20 , 2022
ಶಿವಮೊಗ್ಗ: ಶಾಂತಿಯಲ್ಲಿದ್ದ ರಾಜ್ಯವನ್ನು ಕೊಲೆ, ದೊಂಬಿ ಮೂಲಕ ಗಲಭೆ ನಿರ್ಮಾಣದ ಷಡ್ಯಂತ್ರ ನಡೆಯುತ್ತಿದೆ, ಇದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಒಬ್ಬ ಮೌಲ್ವಿ ಪೊಲೀಸ್ ಜೀಪ್ ಮೇಲೆ ನಿಂತು ಪ್ರಚೋದನೆ ಕೊಡುತ್ತಾನೆ. ತಲೆಗಳನ್ನು ಕತ್ತರಿಸಿ, ರುಂಡಗಳನ್ನು ಬೇರೆ ಮಾಡಿ ಎಂದು ಪ್ರಚೋದಿಸುವ ಹೇಳಿಕೆ‌ ಕೊಡುತ್ತಾರೆ. ಕಾಂಗ್ರೆಸ್ ನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ್ ಮೌಲ್ವಿ ಪಕ್ಕದಲ್ಲಿ ನಿಂತು ಕಲ್ಲು ಹೊಡಿಯೋದು ನೋಡುತ್ತಿದ್ದಾರೆ. […]

Advertisement

Wordpress Social Share Plugin powered by Ultimatelysocial