ಬಾಲಿವುಡ್‌ ಸಿನಿಮಾದಲ್ಲಿ ಅಂಧೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ

ಈ ಹಾಡು ನೋಡಿದರೆ ರಶ್ಮಿಕಾಈ ಚಿತ್ರದಲ್ಲಿ ಅಂಧೆಯ ಪಾತ್ರದಲ್ಲಿ ನಟಿಸುತ್ತಿರುವುದು ತಿಳಿಯುತ್ತಿದೆ. ಇದೊಂದು ಸ್ಪೈ ಥ್ರಿಲ್ಲರ್‌ ಸಿನಿಮಾ ಆಗಿದ್ದು ಆರ್‌ಎಸ್‌ವಿಪಿ ಮೂವೀಸ್‌ ಹಾಗೂ ಗಿಲ್ಟಿ ಬೈ ಅಸೋಸಿಯೇಷನ್‌ ಮೀಡಿಯಾ ಎಲ್‌ಎಲ್‌ಪಿ ಜೊತೆ ಸೇರಿ ನಿರ್ಮಿಸಿದೆ.ರಶ್ಮಿಕಾ ಮಂದಣ್ಣ  ತೆಲುಗು, ತಮಿಳು, ಹಿಂದಿ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿ ಇದ್ದಾರೆ. ರಶ್ಮಿಕಾ ಈಗ ಎಲ್ಲಿ ಹೋದರೂ ಫ್ಯಾನ್‌ ಫಾಲೋಯಿಂಗ್‌ ಹೆಚ್ಚಾಗುತ್ತಲೇ ಇದೆ. ಏರ್‌ಪೋರ್ಟ್‌, ಶೂಟಿಂಗ್‌, ಶಾಪಿಂಗ್‌ ಎಲ್ಲಿ ಹೋದರೂ ಜನರು ಅವರನ್ನು ಸುತ್ತುವರೆದು ಸೆಲ್ಫಿ ಕೇಳುತ್ತಾರೆ. ಈಗ ಅವರು ದಕ್ಷಿಣ ಭಾರತ ಮಾತ್ರವಲ್ಲ, ಬಾಲಿವುಡ್‌ನಲ್ಲೂ ಬೇಡಿಕೆಯಲ್ಲಿರುವ ನಟಿ ರಶ್ಮಿಕಾ ಟಾಪ್‌ ಟಕ್ಕರ್‌ ಆಲ್ಬಂನಲ್ಲಿ ನಟಿಸುವ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು. ಇದರ ಬೆನ್ನ ಹಿಂದಿಯೇ ‘ಮಿಷನ್‌ ಮಜ್ನು’ ಚಿತ್ರಕ್ಕೆ ಅವರು ನಾಯಕಿಯಾಗಿ ಆಯ್ಕೆಯಾದರು. ಈ ಸಿನಿಮಾಗೆ ಸಹಿ ಹಾಕುತ್ತಿದ್ದಂತೆ ಅಮಿತಾಬ್‌ ಬಚ್ಚನ್‌ ಪುತ್ರಿಯಾಗಿ ‘ಗುಡ್‌ ಬೈ’ ಚಿತ್ರದಲ್ಲಿ ನಟಿಸಿದರು. ಈ ಸಿನಿಮಾ ಈಗಾಗಲೇ ಬಿಡುಗಡೆಯಾಗಿದೆ. ಚಿತ್ರ ಬಾಕ್ಸ್‌ ಆಫೀಸಿನಲ್ಲಿ ಸೋಲು ಕಂಡರೂ ರಶ್ಮಿಕಾ ಅಭಿನಯ ಅಭಿಮಾನಿಗಳಿಗೆ ಮೆಚ್ಚುಗೆ ಆಗಿತ್ತು. ಇದಾದ ನಂತರ ರಶ್ಮಿಕಾ ರಣಬೀರ್‌ ಕಪೂರ್‌ ಜೊತೆ ‘ಅನಿಮಲ್‌’ ಚಿತ್ರದಲ್ಲಿ ಕೂಡಾ ನಟಿಸುತ್ತಿದ್ದಾರೆ. ಆದರೆ ರಶ್ಮಿಕಾ ಬಾಲಿವುಡ್‌ನಲ್ಲಿ ಮೊದಲು ಒಪ್ಪಿಕೊಂಡಿದ್ದ ಸಿನಿಮಾ ‘ಮಿಷನ್‌ ಮಜ್ನು’ ಸಿನಿಮಾ ಬಿಡುಗಡೆ ಯಾವಾಗ ಎಂದು ಅಭಿಮಾನಿಗಳು ಕೇಳುತ್ತಲೇ ಇದ್ದಾರೆ. ಈ ಸಿನಿಮಾ ನೇರವಾಗಿ ಓಟಿಟಿಯಲ್ಲಿ ತೆರೆ ಕಾಣುತ್ತಿದೆ ಎಂಬ ಸುದ್ದಿ ಹರಿದಾಡಿತ್ತಾದರೂ ಇದು ರೂಮರ್‌ ಇರಬಹುದು ಎನ್ನಲಾಗಿತ್ತು. ಆದರೆ ಕೊನೆಗೂ ಸಿನಿಮಾ ಥಿಯೇಟರ್‌ಗೆ ಬರದೆ ನೆಟ್‌ಫಿಕ್ಸ್‌ನಲ್ಲಿ ರಿಲೀಸ್‌ ಆಗುವುದು ಕನ್ಫರ್ಮ್‌ ಆಗಿದೆ. ಮುಂದಿನ ವರ್ಷ (2023) ಜನವರಿ 20 ರಂದು ಮಿಷನ್‌ ಮಜ್ನು ಬಿಡುಗಡೆಗೆ ದಿನಾಂಕ ಫಿಕ್ಸ್‌ ಆಗಿದೆ. ಚಿತ್ರತಂಡ ಪ್ರಮೋಷನ್‌ ಕೆಲಸಗಳಲ್ಲಿ ಬ್ಯುಸಿ ಇದೆ. ಇದರ ಅಂಗವಾಗಿ ಇತ್ತೀಚೆಗೆ ಸಿನಿಮಾದ ಮೊದಲ ಹಾಡು ಬಿಡುಗಡೆ ಆಗಿದೆ. ಚಿತ್ರದಲ್ಲಿ ರಶ್ಮಿಕಾ ಹಾಗೂ ಸಿದ್ದಾರ್ಥ್‌ ಮಲ್ಹೋತ್ರ ಜೋಡಿಯಾಗಿ ನಟಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

'ಉಕ್ಕಿನ ಮಹಿಳೆ' ಎಂಬ ಬಿರುದಿನ ಜೊತೆಗೆ ‌ಸಮಂತಾಗೆ ಕ್ರಿಸ್‌ಮಸ್‌ ಗಿಫ್ಟ್‌ ನೀಡಿದ ನಟ

Wed Dec 28 , 2022
ಜೀವನದಲ್ಲಿ ಕಷ್ಟಗಳೊಂದಿಗೆ ಹೋರಾಡುತ್ತಿರುವವರಿಗೆ ಈ ಸಂದೇಶ. ಕಷ್ಟಗಳೊಂದಿಗೆ ಹೋರಾಡುತ್ತಲೇ ಇರಿ. ನಾವು ಎಲ್ಲರಿಗಿಂತ ಶಕ್ತಿವಂತರಾಗುತ್ತೇವೆ. ಯಾವಾಗಲೂ ಸ್ಟ್ರಾಂಗ್‌ ಆಗಿರುತ್ತೇವೆ ಎಂದು ಸಮಂತಾ ಬರೆದುಕೊಂಡಿದ್ದಾರೆ.ಟಾಲಿವುಡ್‌ ನಟಿ ಸಮಂತಾ, ‘ಯಶೋದ’ ಸಿನಿಮಾ ಗೆದ್ದ ಖುಷಿಯಲ್ಲಿದ್ದಾರೆ. ಒಂದೆಡೆ ಖುಷಿ, ಒಂದೆಡೆ ತಮಗಿರುವ ಆರೋಗ್ಯ ಸಮಸ್ಯೆ ಬಗ್ಗೆ ಬೇಸರ. ಇಷ್ಟಾದರೂ ಸಮಂತಾ ಎಲ್ಲವನ್ನೂ ಮರೆತು ಸಂತೋಷದ ಜೀವನ ಸಾಗಿಸಲು ಪ್ರಯತ್ನ ಮಾಡುತ್ತಿದ್ದಾರೆ. ಈ ನಡುವೆ ಸ್ಯಾಮ್‌ ತಮ್ಮ ಸ್ನೇಹಿತರ ಜೊತೆ ಸೇರಿ ಕ್ರಿಸ್‌ಮಸ್‌ ಆಚರಿಸಿದ್ಧಾರೆ.ಸಮಂತಾಗೆ ಕ್ರಿಸ್‌ಮಸ್‌ಗಾಗಿ […]

Advertisement

Wordpress Social Share Plugin powered by Ultimatelysocial