ಅಥಿಯಾ ಲೆಹಂಗಾ ತಯಾರಿಸಲು ಬರೋಬ್ಬರಿ 10 ಸಾವಿರ ಗಂಟೆಗಳು.

ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹಾಗೂ ಕೆ.ಎಲ್.ರಾಹುಲ್ ಮತ್ತು ಅಥಿಯಾ ಶೆಟ್ಟಿ 2023ರ ಜನವರಿ 23ರಂದು ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ, ಮಹಾರಾಷ್ಟ್ರದ ಖಂಡಾಲಯದಲ್ಲಿರುವ ಸುನೀಲ್ ಶೆಟ್ಟಿ ಅವರ ಐಷಾರಾಮಿ ಫಾರ್ಮ್ ಹೌಸ್ನಲ್ಲಿ ಮದುವೆಯಾಗಿದ್ದಾರೆ.

ಇಬ್ಬರು ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಸಖತ್ ವೈರಲ್ ಆಗ್ತಿವೆ.

ವಿವಾಹ ಸಮಾರಂಭದಲ್ಲಿ ನಟಿ ಅಥಿಯಾ ಶೆಟ್ಟಿ ಲೈಟ್ ಪಿಂಕ್ ಬಣ್ಣದ ಅನಾಮಿಕಾ ಖನ್ನಾ ಚಿಕಂಕರಿ ಲೆಹಂಗಾ ಧರಿಸಿ ಮಿಂಚಿದ್ರೆ, ಕೆ.ಎಲ್.ರಾಹುಲ್ ಬಿಳಿ ಬಣ್ಣದ ಕುರ್ತಾ ಧರಿಸಿದ್ದರು. ಅಥಿಯಾ ಲೆಹಂಗಾಗೆ ಸರಿಯಾಗಿ ಹೊಂದುವ ಹಾಗೆ ಗ್ರ್ಯಾಂಗ್ ಚೋಕರ್ ನೆಕ್ಲೇಸ್, ಮಾಂಗ್ ಟಿಕಾ, ಕಿವಿಯೋಲೆ ಮತ್ತು ಬಳೆ ಧರಿಸಿದ್ದರು. ವಿವಾಹ ಸಮಾರಂಭದಲ್ಲಿ ಅಥಿಯಾ ಅವರ ಸಖತ್ ರಿಚ್ ಲುಕ್ ಎಲ್ಲರ ಗಮನ ಸೆಳೆದಿತ್ತು. ಇದೀಗ ಅಥಿಯಾ ಶೆಟ್ಟಿ ಲೆಹಂಗಾ ತಯಾರಿಸಲು ತೆಗೆದುಕೊಂಡ ಸಮಯವನ್ನು ಡಿಸೈನರ್ ರಿವೀಲ್ ಮಾಡಿದ್ದು, ಎಲ್ಲರು ಶಾಕ್ ಆಗಿದ್ದಾರೆ.

ನಟಿ ಅಥಿಯಾ ಶೆಟ್ಟಿ ಮದುವೆಯಲ್ಲಿ ಧರಿಸಿದ್ದ ಬ್ಯೂಟಿಫುಲ್ ಹ್ಯಾಂಡ್ ಮೇಡ್ ಲೆಹಂಗಾ ತಯಾರಿಸಲು ಬರೋಬ್ಬರಿ 10 ಸಾವಿರ ಗಂಟೆಗಳು ಬೇಕಾಯಿತು ಎಂದು ಡಿಸೈನರ್ ಅನಾಮಿಕ ಖನ್ನಾ ತಿಳಿಸಿದ್ದಾರೆ. ವೋಗ್ ಸಂದರ್ಶನದಲ್ಲಿ ಮಾತನಾಡಿದ ಅವರು, ಅಥಿಯಾ ಅತ್ಯಂತ ಸೂಕ್ಷ್ಮ ಮತ್ತು ಉತ್ತಮ ಅಭಿರುಚಿಯುಳ್ಳವರಾಗಿದ್ದಾರೆ. ಹಾಗಾಗಿ ಅವರಿಗೆ ಪ್ರೀತಿಯಿಂದ ಹಾಗೂ ಬಹಳ ವಿಶೇಷವಾಗಿ ಈ ಲೆಹಂಗಾವನ್ನು ತಯಾರಿಸಲಾಗಿದೆ. ಅಥಿಯಾ ಧರಿಸಿದ್ದ ಲೆಹಂಗಾ ಮೇಲೆ ಹ್ಯಾಂಡ್ ಮೇಡ್ ವರ್ಕ್ ಮಾಡಲಾಗಿದೆ. ಜದೋರ್ಜಿ ಮಚ್ಚು ಜಾಲಿ ವರ್ಕ್ ಅನ್ನು ರೇಷ್ಮೆಯಿಂದ ಮಾಡಿಸಲಾಗಿದೆ. ಜೊತೆಗೆ ದುಪ್ಪಟ್ಟಾವನ್ನು ಸಿಲ್ಕ್ ಆರ್ಗನ್ಜಾದಿಂದ ಮಾಡಲಾಗಿದೆ ಎಂದಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಂದೇ ಒಂದು ಹಾಡು ಇರದಿದ್ದ 'ಖೈದಿ' ಚಿತ್ರದ ಹಿಂದಿ ರಿಮೇಕ್‌ನಲ್ಲಿ ಐಟಂ ಸಾಂಗ್;

Tue Jan 24 , 2023
ಬಾಲಿವುಡ್.. ಈ ಹಿಂದೆ ತನ್ನ ಕಲರ್‌ಫುಲ್ ಚಿತ್ರಗಳು ಹಾಗೂ ಹಾಡುಗಳಿಂದ ಇತರೆ ಚಿತ್ರರಂಗದ ಸಿನಿ ರಸಿಕರನ್ನು ಸೆಳೆಯುತ್ತಿದ್ದ ಈ ಚಿತ್ರರಂಗ ಇದೀಗ ತನ್ನ ಪ್ರಾಂತ್ಯದ ಸಿನಿ ರಸಿಕರನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗುತ್ತಿದೆ. ಹೌದು, ಬಾಲಿವುಡ್ ಚಿತ್ರರಂಗ ಈಗ ಎಂತಹ ಹೀನ ಸ್ಥಿತಿಯಲ್ಲಿದ್ದು ಸಾಲು ಸಾಲು ಟ್ರೋಲ್‌ಗಳನ್ನು ಅನುಭವಿಸಿದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿರುವುದೇ. ತನ್ನ ಹಳೆ ಮಸಾಲಾ ಚಿತ್ರಗಳಿಂದ ಹೊರಬರದ ಬಾಲಿವುಡ್ ಕೆಟ್ಟದಾಗಿ ಟ್ರೋಲ್ ಆಗುವುದು ಮಾತ್ರವಲ್ಲದೇ ದಕ್ಷಿಣ ಭಾರತ ಚಿತ್ರರಂಗಗಳ ಹಿಟ್ […]

Advertisement

Wordpress Social Share Plugin powered by Ultimatelysocial