ಒಂದೇ ಒಂದು ಹಾಡು ಇರದಿದ್ದ ‘ಖೈದಿ’ ಚಿತ್ರದ ಹಿಂದಿ ರಿಮೇಕ್‌ನಲ್ಲಿ ಐಟಂ ಸಾಂಗ್;

ಬಾಲಿವುಡ್.. ಈ ಹಿಂದೆ ತನ್ನ ಕಲರ್‌ಫುಲ್ ಚಿತ್ರಗಳು ಹಾಗೂ ಹಾಡುಗಳಿಂದ ಇತರೆ ಚಿತ್ರರಂಗದ ಸಿನಿ ರಸಿಕರನ್ನು ಸೆಳೆಯುತ್ತಿದ್ದ ಈ ಚಿತ್ರರಂಗ ಇದೀಗ ತನ್ನ ಪ್ರಾಂತ್ಯದ ಸಿನಿ ರಸಿಕರನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗುತ್ತಿದೆ. ಹೌದು, ಬಾಲಿವುಡ್ ಚಿತ್ರರಂಗ ಈಗ ಎಂತಹ ಹೀನ ಸ್ಥಿತಿಯಲ್ಲಿದ್ದು ಸಾಲು ಸಾಲು ಟ್ರೋಲ್‌ಗಳನ್ನು ಅನುಭವಿಸಿದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿರುವುದೇ.

ತನ್ನ ಹಳೆ ಮಸಾಲಾ ಚಿತ್ರಗಳಿಂದ ಹೊರಬರದ ಬಾಲಿವುಡ್ ಕೆಟ್ಟದಾಗಿ ಟ್ರೋಲ್ ಆಗುವುದು ಮಾತ್ರವಲ್ಲದೇ ದಕ್ಷಿಣ ಭಾರತ ಚಿತ್ರರಂಗಗಳ ಹಿಟ್ ಚಿತ್ರಗಳನ್ನು ರಿಮೇಕ್ ಮಾಡುವ ಮೂಲಕ ಮತ್ತಷ್ಟು ಟ್ರೋಲ್‌ಗಳನ್ನು ಎದುರಿಸಿತು. ಹೌದು, ದಕ್ಷಿಣ ಭಾರತದಲ್ಲಿ ಅಚ್ಚುಕಟ್ಟಾಗಿ ತಯಾರಾಗಿದ್ದ ಚಿತ್ರಗಳನ್ನು ಬಾಲಿವುಡ್ ತನ್ನ ಫ್ಲೇವರ್‌ಗೆ ಬದಲಿಸಲು ಹೋಗಿ ಟ್ರೋಲ್ ಆಗಿತ್ತು ಹಾಗೂ ಹೀನಾಯ ಸೋಲು ಕಂಡಿತ್ತು.

ರಿಮೇಕ್ ಮಾಡಿದ ಮೇಲೆ ಆ ಚಿತ್ರದ ಮೇಕಿಂಗ್ ಅನ್ನು ತಮ್ಮ ಇಂಡಸ್ಟ್ರಿಯ ನೇಟಿವಿಟಿಗೆ ತಕ್ಕಂತೆ ಬದಲಿಸಿಕೊಳ್ಳುವುದು ಕಾಮನ್ ಹಾಗೂ ಅಗತ್ಯ ಕೂಡ. ಆದರೆ ಬಾಲಿವುಡ್ ಚಿತ್ರರಂಗ ಅದನ್ನೂ ಮೀರಿಬಿಟ್ಟಿದೆ. ತೆಲುಗಿನ ಕ್ಷಣಂ ರೀತಿಯ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವನ್ನು ರಿಮೇಕ್ ಮಾಡಿದ್ದ ಬಾಲಿವುಡ್ ಆ ಚಿತ್ರದಲ್ಲಿ ಹೆಲಿಕಾಪ್ಟರ್ ಸಾಹಸ ದೃಶ್ಯಗಳನ್ನು ಸೇರಿಸಿ ನಗೆಪಾಟಲಿಗೀಡಾಗಿತ್ತು. ಇದೀಗ ಅಂತಹದ್ದೇ ಟ್ರೋಲ್‌ಗಳನ್ನು ಖೈದಿ ಚಿತ್ರದ ರಿಮೇಕ್ ಮಾಡಿ ಎದುರಿಸುತ್ತಿದೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೋವಿಡ್-19 ಎರಡನೇ ಅಲೆಯ ನೈಜ ಕಥೆ ಆಧರಿಸಿದ ಚಿತ್ರದಲ್ಲಿ ರಿಚಾ ಚಡ್ಡಾ ನಟನೆ

Tue Jan 24 , 2023
ಝೀ ಸ್ಟುಡಿಯೋಸ್ನ ಬ್ಯಾನರ್ನಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಚಿತ್ರವೊಂದರಲ್ಲಿ ನಟಿ ರಿಚಾ ಚಡ್ಡಾ ಅವರು ನಟಿಸುತ್ತಿದ್ದಾರೆ. ಝೀ ಸ್ಟುಡಿಯೋಸ್ನ ಬ್ಯಾನರ್ನಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಚಿತ್ರವೊಂದರಲ್ಲಿ ನಟಿ ರಿಚಾ ಚಡ್ಡಾ ಅವರು ನಟಿಸುತ್ತಿದ್ದಾರೆ. ಕೋವಿಡ್-19 ಎರಡನೇ ಅಲೆಯ ನೈಜ ಕಥೆಯನ್ನು ಹೊಂದಿರುವ ಈ ಚಿತ್ರಕ್ಕೆ ಇನ್ನೂ ಹೆಸರಿಡಲಾಗಿಲ್ಲ. ಚಿತ್ರದಲ್ಲಿ ಮುಂಚೂಣಿ ಹೋರಾಟಗಾರ್ತಿ ಪಾತ್ರವೊಂದರಲ್ಲಿ ರಿಚಾ ಚಾಧಾ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರವು 2021ರ ನೈಜ ಕಥೆಗಳನ್ನು ಹೈಲೈಟ್ ಮಾಡುತ್ತಿದೆ. ಚಿತ್ರದ ಕುರಿತು ಮಾಹಿತಿ ನೀಡಿರುವ ರಿಚಾ ಚಡ್ಡಾ, ಚಿತ್ರವು ಕೋವಿಡ್ನ […]

Advertisement

Wordpress Social Share Plugin powered by Ultimatelysocial