ಬಾಲಿವುಡ್ ನಟಿ , ಬಿಗ್​ಬಾಸ್ ಖ್ಯಾತಿಯ ರಾಖಿ ಸಾವಂತ್ ಹಾಗೂ ಅವರ ಪತಿ ಎನ್ನಲಾಗಿರುವ ರಿತೇಶ್ ಬೇರೆಯಾಗಿದ್ದಾರೆ ̤

ಬಾಲಿವುಡ್ ನಟಿ  , ಬಿಗ್​ಬಾಸ್ ಖ್ಯಾತಿಯ ರಾಖಿ ಸಾವಂತ್  ಹಾಗೂ ಅವರ ಪತಿ ಎನ್ನಲಾಗಿರುವ ರಿತೇಶ್  ಬೇರೆಯಾಗಿದ್ದಾರೆ. ಆರಂಭದಿಂದಲೂ ವಿವಾದಾತ್ಮಕ ಸಂಬಂಧದಲ್ಲಿದ್ದ ರಾಖಿ ಸಾವಂತ್ ಮದುವೆಯಾಗಿದ್ದಾರೋ  , ಇಲ್ಲವೋ ಒಂದೂ ಸ್ಪಷ್ಟವಿಲ್ಲ. ಬಿಗ್​ಬಾಸ್ ಸೀಸನ್ 15ರಲ್ಲಿ  ರಿತೇಶ್ ಎಂಟ್ರಿ ಕೊಟ್ಟಾಗ ವೀಕ್ಷಕರು ಸಿಕ್ಕಾಪಟ್ಟೆ ಕುತೂಹಲದಲ್ಲಿದ್ದರು.ಮದುವೆಯಾಗಿ ರಾಖಿಯ ಜೊತೆಗಿರದೆ ಭಾರತದಲ್ಲಿ ಎಲ್ಲೂ ಕಾಣಿಸದೆ ಇದ್ದ ರಿತೇಶ್ ಈಗಾಗಲೇ ವಿವಾಹಿತ ಹಾಗೂ ಮೊದಲ ಮದುವೆಯಲ್ಲಿ ಮಗುವನ್ನೂ ಹೊಂದಿದ್ದಾನೆ. ಬಿಗ್​ಬಾಸ್ ಶೋನಲ್ಲಿ ರಾಖಿ ಹಾಗೂ ರಿತೇಶ್ ಮಿಂಚುವಾಗ ರಿತೇಶ್ ಮೊದಲ ಪತ್ನಿ ಆತ ತನಗೆ ಡಿವೋರ್ಸ್​ ಕೊಡದೆಯೇ ರಾಖಿಯನ್ನು ವರಿಸಿದ್ದಾನೆ, ಅವನು ನನಗೂ ಗಂಡ ಎಂದು ವಿವಾದ ಶುರು ಮಾಡಿದ್ದರು. ಅಂತೂ ಈಗ ರಾಖಿ ಸಾವಂತ್ ದಾಂಪತ್ಯ ಜೀವನ ಕೊನೆಯಾಗಿದೆ. ಇದನ್ನು ಸ್ವತಃ ನಟಿ ಎನೌನ್ಸ್ ಮಾಡಿದ್ದಾರೆ.ವ್ಯಾಲೆಂಟೈನ್ಸ್ ಡೇ ಮುನ್ನಾ ದಿನ ಸಂಜೆ ನಟಿ ರಾಖಿ ಸಾವಂತ್ ಸೋಷಿಯಲ್ ಮೀಡಿಯಾ ಮೂಲಕ ತಾವು ಪತಿ ರಿತೇಶ್​ನಿಂದ ಬೇರ್ಪಡುತ್ತಿರುವುದಾಗಿ ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ   ಈ ಸಂಬಂಧ ಹೇಳಿಕೆಯನ್ನೂ ಪೋಸ್ಟ್ ಮಾಡಿದ್ದಾರೆ. ಡಿಯರ್ ಫ್ರೆಂಡ್ಸ್, ನಾನು ಹಾಗೂ ರಿತೇಶ್ ಬೇರೆಯಾಗಲು ನಿರ್ಧರಿಸಿದ್ದೇವೆ.ಬಿಗ್​ಬಾಸ್ಶೋ  ನಂತರ ಬಹಳಷ್ಟು ಘಟನೆಗಳಾದವು. ಅವುಗಳಲ್ಲಿ ಬಹಳಷ್ಟು ನನ್ನ ನಿಯಂತ್ರಣದಲ್ಲಿರಲಿಲ್ಲ. ನಾವಿ ನಮ್ಮ ಭಿನ್ನಾಭಿಪ್ರಾಯಗಳನ್ನು ಸರಿ ಮಾಡುವ ಪ್ರಯತ್ನ ಮಾಡಿದ್ದೇವೆ. ಆದರೆ ಅದು ಫಲ ಕೊಡಲಿಲ್ಲ. ಹಾಗಾಗಿ ನಾವಿಬ್ಬರೂ ಬೇರೆಯಾಗಿ ನಮ್ಮ ಜೀವನವನ್ನು ಬೇರೆ ಬೇರೆ ಹಾದಿಯಲ್ಲಿ ಜೀವನವನ್ನು ಆನಂದಿಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ.ಇದು ಪ್ರೇಮಿಗಳ ದಿನದ ಮೊದಲು ಆಯಿತು. ಆದರೆ ಈ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನಾನು ನಿಜವಾಗಿಯೂ ದುಃಖಿತಳಾಗಿದ್ದೇನೆ. ನಾನು ರಿತೇಶ್ ಜೀವನದಲ್ಲಿ ಉತ್ತಮವಾಗಲಿ ಎಂದು ಹಾರೈಸುತ್ತೇನೆ. ಆದರೆ ನಾನು ಜೀವನದ ಈ ಹಂತದಲ್ಲಿ ನನ್ನ ಕೆಲಸ ಮತ್ತು ನನ್ನ ಜೀವನದ ಮೇಲೆ ಕೇಂದ್ರೀಕರಿಸಬೇಕು. ನನ್ನನ್ನು ಸಂತೋಷದಿಂದ ಮತ್ತು ಆರೋಗ್ಯವಾಗಿರಿಸಿಕೊಳ್ಳಬೇಕು. ಯಾವಾಗಲೂ ನನ್ನನ್ನು ಅರ್ಥಮಾಡಿಕೊಂಡು ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದಿದ್ದಾರೆತನ್ನ ಪತಿಯಿಂದ ಬೇರ್ಪಡುತ್ತಿರುವುದನ್ನು ಘೋಷಿಸಿದಾಗ ನಟಿ ರಾಖಿ ಸಾವಂತ್ ಅವರು ಸದ್ಯ ತಮ್ಮ ಕೆಲಸ ಮತ್ತು ಜೀವನದ ಮೇಲೆ ಕೇಂದ್ರೀಕರಿಸುವುದಾಗಿ ಹೇಳಿದ್ದಾರೆ. ಅವರ ಅಭಿಮಾನಿಗಳ ಬೆಂಬಲವನ್ನು ಅವರು ಬಯಸಿದ್ದಾರೆ. ರಾಖಿ ತನ್ನ ಪತಿ ರಿತೇಶ್ ಅನ್ನು ಬಿಗ್ ಬಾಸ್ 15 ರಲ್ಲಿ ಅವರ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಅವರು ವೈಲ್ಡ್ ಕಾರ್ಡ್   ಎಂಟ್ರಿ ಪಡೆದು ಶೋಗೆ ಪ್ರವೇಶಿಸಿದ್ದಾರೆ. ಎಲಿಮಿನೇಟ್  ಆಗುವ ಮೊದಲು ಕೆಲವು ವಾರಗಳ ಕಾಲ ಅಲ್ಲಿಯೇ ಇದ್ದರು ನಟಿ.ಬಾಲಿವುಡ್​ನ ಬೇಡಿಕೆಯ ನಟಿಯಾಗಿದ್ದ ರಾಖಿ ಸಾವಂತ್ ಅವರಿಗೆ ಈಗ ಅವಕಾಶಗಳ  ಕೊರತೆ ಇದೆ. ಅವರು ಬಹಳಷ್ಟು ಡ್ಯಾನ್ಸ್ ಶೋಗಳನ್ನು ನೀಡುತ್ತಿರುತ್ತಾರೆ. ಆದರೆ ಬಹುತೇಕ ಪ್ರತಿವರ್ಷ ಬಿಗ್​ಬಾಸ್​ನಲ್ಲಿ ಅವಕಾಶ ಸಿಗುವುದರಿಂದ ಅದನ್ನೂ ಅವರು ಆದಾಯದ ದೊಡ್ಡ ಮೂಲವೆಂದೇ ಪರಿಗಣಿಸಿದ್ದಾರೆ.ಸಲ್ಮಾನ್ ಖಾನ್   ಕಳೆದ ವರ್ಷ ಬಿಗ್​ಬಾಸ್ ಸೀಸನ್ 14ರ ನಂತರ ರಾಖಿ ಸಾವಂತ್​ಗೆ ಅವರ ಅಮ್ಮನ ಚಿಕಿತ್ಸೆಗೆ ನೆರವಾಗಿದ್ದರು. ಇದಕ್ಕೆ ನಟಿ ಸೋಷಿಯಲ್ ಮೀಡಿಯಾ  ಮೂಲಕ ಥ್ಯಾಂಕ್ಸ್ ಕೂಡಾ ಹೇಳಿದ್ದರು. ಈ ಬಾರಿಯ ಸೀಸನ್​ನಲ್ಲಿ ಪತಿಯೊಂದಿಗೆ ಎಂಟ್ರಿ ಕೊಟ್ಟ ರಾಖಿಯ ನಿಜವಾದ ಪತಿ ರಿತೇಶ್ ಹೌದೋ ಅಲ್ಲವೋ ಎನ್ನುವ ಬಗ್ಗೆ ಹೋಸ್ಟ್ ಸಲ್ಮಾನ್ ಸೇರಿ ಎಲ್ಲ ಪ್ರೇಕ್ಷಕರಿಗೂ ಕುತೂಹಲವಿತ್ತು. ಆದರೆ ಈಗ ಜೋಡಿ ಬೇರೆಯಾಗಿದ್ದು ಇದು ಬಹುತೇಕ ನಿರೀಕ್ಷಿತವೇ ಆಗಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

"ಟಾಕ್ ಆಫ್ ದಿ ಟೌನ್-ಅಂತಾರಾಷ್ಟ್ರೀಯ ಫ್ಯಾಷನ್ ವೀಕ್ "

Mon Feb 14 , 2022
ಬೆಂಗಳೂರು:ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ “ಟಾಕ್ ಆಫ್ ದಿ ಟೌನ್-ಅಂತಾರಾಷ್ಟ್ರೀಯ ಫ್ಯಾಷನ್ ವೀಕ್ ” ನಡೆಯಲಿದ್ದು, 40 ಸೂಪರ್ ಮಾಡೆಲ್‌ಗಳು ಫ್ಯಾಷನ್ ಶೋನಲ್ಲಿ ಹೆಜ್ಜೆ ಹಾಕಲಿದ್ದಾರೆ.ಇದೇ ಫೆ.18ರ ಸಂಜೆ 5ಕ್ಕೆ ವೈಟ್‌ಫೀಲ್ಡ್‌ನಲ್ಲಿರುವ ಮ್ಯಾರಿಯೆಟ್ ಹೋಟೆಲ್‌ನಲ್ಲಿ ಫ್ಯಾಷನ್ ವೀಕ್ ನಡೆಯಲಿದ್ದು, ಜಯಂತಿ ಬಲ್ಲಾಳ್, ರೇಷ್ಮಾ ಕುನ್ಹಿ, ಸಮಂತಾ ಅರ್ಪಣಾ, ಮಾನವ್, ವೈಲ್ಡ್‌ಕ್ಯಾಟ್ ಅವರಂತಹ ಪ್ರಖ್ಯಾತ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್‌ಗಳು ವಿನ್ಯಾಸಗೊಳಿಸಿರುವ ಭಿನ್ನ ವಿಭಿನ್ನವಾದ ನೂತನ ಶೈಲಿಯ ಧಿರಿಸುಗಳು ಹಾಗೂ ಆಭರಣಗಳನ್ನು ಧರಿಸಿ ಮಾಡೆಲ್‌ಗಳು […]

Advertisement

Wordpress Social Share Plugin powered by Ultimatelysocial