ಸಂತೋಷ್‌ ಪಾಟೀಲ್‌ ಅವರ ಅಂತ್ಯಕ್ರಿಯೆ ಇಂದು ಬೆಳಗಾವಿ ತಾಲೂಕಿನ ಬಡಸ ಗ್ರಾಮದಲ್ಲಿ ನಡೆದಿದೆ.

 

 

 

ಸಚಿವ ಈಶ್ವರಪ್ಪ ವಿರುದ್ದ ಶೇ.40 ಕಮೀಷನ್‌ ಆರೋಪ ಹೊರೆಸಿ ಉಡುಪಿಯ ಶಾಂಭವಿ ಲಾಡ್ಜ್‌ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಅವರ ಅಂತ್ಯಕ್ರಿಯೆ ಇಂದು ಬೆಳಗಾವಿ ತಾಲೂಕಿನ ಬಡಸ ಗ್ರಾಮದಲ್ಲಿ ನಡೆದಿದೆ.

ಆತ್ಮಹತ್ಯೆಗೂ ಮುನ್ನ ಕಳುಹಿಸಿದ್ದ ವಾಟ್ಸಾಪ್‌ ಸಂದೇಶದಲ್ಲಿ ಸಂತೋಷ್‌ ಪಾಟೀಲ್‌, ತನ್ನ ಸಾವಿಗೆ ಸಚಿವ ಕೆ.ಎಸ್.‌ ಈಶ್ವರಪ್ಪನವರೇ ನೇರ ಕಾರಣವೆಂದು ಆರೋಪಿಸಿದ್ದು, ಈ ಹಿನ್ನಲೆಯಲ್ಲಿ ಈಶ್ವರಪ್ಪ ವಿರುದ್ದ ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈಶ್ವರಪ್ಪ ವಿರುದ್ದ ಆರೋಪ ಕೇಳಿ ಬಂದಿರುವ ಕಾರಣ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್‌ ನಿನ್ನೆಯಿಂದಲೂ ಪ್ರತಿಭಟನೆ ನಡೆಸುತ್ತಿದ್ದು, ಜೊತೆಗೆ ಈಶ್ವರಪ್ಪ ಬಂಧನವಾಗಬೇಕೆಂದು ಒತ್ತಾಯಿಸಲಾಗುತ್ತಿದೆ.

ಇಂದೂ ಕೂಡಾ ರಾಜ್ಯದಾದ್ಯಂತ ಪ್ರತಿಭಟನೆ ಮುಂದುವರೆದಿದ್ದು, ಬೆಂಗಳೂರಿನಲ್ಲಿ ಕಾಂಗ್ರೆಸ್‌ ನಾಯಕರು ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲಿದ್ದಾರೆನ್ನಲಾಗಿದೆ.

ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳ ನಿವಾಸಕ್ಕೆ ಬಿಗಿ ಬಂದೋಬಸ್ತ್‌ ಹಾಕಲಾಗಿದ್ದು, ಡಿಸಿಪಿ ಅನುಚೇತ್‌ ಅವರ ನೇತೃತ್ವದಲ್ಲಿ 250 ಮಂದಿ ಪೊಲೀಸ್‌ ಸಿಬ್ಬಂದಿ ಬಂದೋಬಸ್ತ್ ಕಾರ್ಯ ನಿರ್ವಹಿಸುತ್ತಿದ್ದಾರೆಂದು ತಿಳಿದುಬಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಿವೃತ್ತ ಯೋಧರೊಬ್ಬರನ್ನು ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆ!

Thu Apr 14 , 2022
ಬೆಂಗಳೂರು: ನಿವೃತ್ತ ಯೋಧರೊಬ್ಬರನ್ನು ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹಲಸೂರು ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ. ದೊಮ್ಮಲೂರಿನ ಗೌತಮನಗರ ನಿವಾಸಿ ಜುಡೆ ಅಲಿ ಯಾಸ್‌ ಸುರೇಶ್‌ (56) ಕೊಲೆಯಾದವರು. ಭಾರತೀಯ ಸೇನೆಯಲ್ಲಿ ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಸುರೇಶ್‌, ಕೆಲ ವರ್ಷಗಳ ಹಿಂದೆ ಪತ್ನಿಗೆ ವಿಚ್ಚೇಧನ ನೀಡಿ ತಾಯಿಯೊಂದಿಗೆ ದೊಮ್ಮಲೂರಿನ ಗೌತಮನಗರದಲ್ಲಿ ವಾಸವಾಗಿದ್ದರು. ಮೂರು ವರ್ಷಗಳ ಹಿಂದೆ ತಾಯಿ ಮೃತಪಟ್ಟ ಬಳಿಕ ಒಬ್ಬರೆ ಮನೆಯಲ್ಲಿದ್ದರು. ಈ ಮಧ್ಯೆ […]

Advertisement

Wordpress Social Share Plugin powered by Ultimatelysocial