ಮೊದಲಿಯಾರ್ ದೊಡ್ಡ ಇತಿಹಾಸ ಇರುವ ಸಮುದಾಯ:

 

ಬೆಂಗಳೂರು: ಮೊದಲಿಯಾರ್ ದೊಡ್ಡ ಇತಿಹಾಸ ಇರುವ ಸಮುದಾಯ, ತಮಿಳುನಾಡು ಇರಲಿ ಕರ್ನಾಟಕ ಇರಲಿ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿದ್ದಾರೆ.

ಪ್ರಕಾಶ ನಗರ ದಲ್ಲಿ ನಡೆದ ಮೊದಲಿಯಾರ್ ಸಂಘದ ವಜ್ರ ಮಹೋತ್ಸವ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಮೊದಲಿಯಾರ್ ದೊಡ್ಡ ಇತಿಹಾಸ ಇರುವ ಸಮುದಾಯ, ತಮಿಳುನಾಡು ಇರಲಿ ಕರ್ನಾಟಕ ಇರಲಿ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ.

ಮೈಸೂರು ಸಂಸ್ಥಾನ ಇತಿಹಾಸದಲ್ಲಿ ಒಳ್ಳೆಯ ಹೆಜ್ಜೆ ಗುರುತು ಇಟ್ಟು ಹೋಗಿದ್ದಾರೆ. ರಾಮ ಸ್ವಾಮಿ ಮೊದಲಿಯಾರ್ ಅವರ ಪಾತ್ರ ಬಹಳ ಮುಖ್ಯ.ಬಹಳಷ್ಟು ಕಟ್ಟಡಕ್ಕೆ ಮೊದಲಿಯಾರ್ ಸಮುದಾಯ ಹೆಸರು ಇಟ್ಟಿದ್ದಾರೆ ಎಂದರು.

ವಿಧಾನಸೌಧದ ನಿರ್ಮಾಣದಲ್ಲಿ ಮೊದಲಿಯಾರ್ ಸಮುದಾಯ ನಾಯಕರು ಬಹಳ ಪಾತ್ರ ವಹಿಸಿದ್ದಾರೆ. ಬೆಂಗಳೂರು ‌ನಿರ್ಮಾದಲ್ಲಿ ಐತಿಹಾಸಿಕ ವಾಗಿದೆ ಮೊದಲಿಯಾರ್ ಸಮುದಾಯ. ಶಿಕ್ಷಣದಲ್ಲೂ ಬಹಳ ಮುಂದಿದೆ. ಐಎಎಸ್, ಐಪಿಎಸ್ ನಲ್ಲೂ ಮೊದಲಿಯಾರ್ ಸಮುದಾಯ ಬಹಳ ಹೆಸರು ಮಾಡಿದ್ದಾರೆ. ಸ್ವಾವಲಂಬನೆ ಜತೆಗೆ ಸ್ವಾಭಿಮಾನ ಸಮುದಾಯ ಕೂಡ ಆಗಿದ್ದಾರೆ ಎಂದರು.

ಬಹಳಷ್ಟು ವಿದ್ಯಾಸಂಸ್ಥೆಗಳನ್ನು ನಿರ್ಮಾಣ ಮಾಡಿ ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.ನಾನು ನಿಮ್ಮ ಸಮುದಾಯಕ್ಕೆ ಮನವಿ ಮಾಡುತ್ತೇನೆ. ಈ ನಾಡ ಕಟ್ಟಲು ನಿಮ್ಮ ಮಾರ್ಗದರ್ಶನ ಮತ್ತು ಸೇವೆ ಅವಶ್ಯಕತೆ ಇದೆ. ಮಹಿಳೆಯರಿಗೆ ಹಾಗೂ ಯುವಕರಿಗೆ ಒಳ್ಳೆಯ ಯೋಜನೆ ಇದೆ. ಶಿಕ್ಷಣ ವ್ಯವಸ್ಥೆಯಲ್ಲೂ ಕೂಡ ಮೊದಲಿಯಾರ್ ಸಮುದಾಯದ ಬೆಂಬಲ ಇದೆ ಎಂದರು.

6500 ಸಾವಿರ ಶಾಲ ಕಟ್ಟಡ ನಿರ್ಮಾಣ ಮಾಡುತ್ತಿದ್ದೇವೆ. ಇದು ದಾಖಲೆ, ಯಾವ ಸರ್ಕಾರ ಕೂಡ ಮಾಡಿಲ್ಲ.ಇದೊಂದು ಕ್ರಾಂತಿ ಕಾರಿ ಹೆಜ್ಜೆ ಇಟ್ಟಿದ್ದೇವೆ. ಅತೀ ಹೆಚ್ಚು ಶುಲ್ಕ ಸಂಗ್ರಹ ಮಾಡುವುದು ಖಾಸಗಿ ಶಾಲೆಗಳು. ಇದಕ್ಕೊಂದು ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ. ಸಂಘ ಸಂಸ್ಥೆಗಳ ಮೂಲ ಬಡ ಜನರಿಗೆ ಶಿಕ್ಷಣ ನೀಡಬೇಕು. ಸಂಘ ಸಂಸ್ಥೆಗಳು ಮುಂದೆ ಬಂದರೆ ಸರ್ಕಾರ ಸಹಾಯ ಮಾಡುತ್ತದೆ ಎಂದರು.

ದುಡಿಮೆಗೆ ಹಾಗೂ ತಂತ್ರಜ್ಞಾನಕ್ಕೆ ಬಹಳ ಮಹತ್ವ ನೀಡುತ್ತೀರಿ. ಮಿಷನರಿ ವಿಚಾರದಲ್ಲಿ ನಿಮ್ಮ ಸಮುದಾಯ ಬಹಳಷ್ಟು ಕೆಲಸ‌ಮಾಡಿದೆ. ನಾನು ಕೂಡ ಈ ಸಮುದಾಯದ ಜೊತೆಗೆ 40 ವರ್ಷದ ಸ್ನೇಹ ಇದೆ. ವಜ್ರ ಮಹೋತ್ಸವ ಆಚರಿಸುತ್ತಿದ್ದು ಈ ಸಮುದಾಯ ಕೂಡ ವಜ್ರದಂತೆ ಗಟ್ಟಿಯಾಗಿದೆ‌ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿಗೆ ಬಂದ ಜನತಾ ಜಲಧಾರೆ!

Sun May 8 , 2022
ಬೆಂಗಳೂರು,ಮೇ 8- ಜೆಡಿಎಸ್‍ನ ಮಹತ್ವದ ಕಾರ್ಯಕ್ರಮವಾದ ಜನತಾ ಜಲಧಾರೆ ರಥಯಾತ್ರೆಯು ಬೆಂಗಳೂರು ತಲುಪಿದೆ. ರಾಜ್ಯದಲ್ಲಿ ನೀರಾವರಿ ಯೋಜನೆಗಳ ಸಮರ್ಪಕ ಅನುಷ್ಠಾನದ ಭರವಸೆಯೊಂದಿಗೆ ಪವಿತ್ರ ನದಿಗಳಿಂದ ಜಲಸಂಗ್ರಹ ಮಾಡಿ ಈಗಾಗಲೇ ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಜನತಾ ಜಲಧಾರೆ ರಥಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇಂದಿನಿಂದ 5 ದಿನಗಳ ಕಾಲ ಬೆಂಗಳೂರಿನ ವಿವಿಧ ವಿಧಾನಸಬಾ ಕ್ಷೇತ್ರಗಳಲ್ಲಿ ರಥಯಾತ್ರೆ ಕಾರ್ಯಕ್ರಮವನ್ನು ಜೆಡಿಎಸ್ ಹಮ್ಮಿಕೊಂಡಿದೆ. ಪಕ್ಷದ ಸ್ಥಳೀಯ ನಾಯಕರು, ಮುಖಂಡರ ನೇತೃತ್ವದಲ್ಲಿ ರಥಯಾತ್ರೆಯ ಮೆರವಣಿಗೆ, ಕಳಸಾ […]

Advertisement

Wordpress Social Share Plugin powered by Ultimatelysocial