ಬೆಂಗಳೂರು ಮಳೆ, ಸಮಸ್ಯೆ ಎದುರಿಸಲು ಸಚಿವರ ತಂಡ ರಚನೆ

ಬೆಂಗಳೂರು, ಮೇ 20; ಬೆಂಗಳೂರು ನಗರದಲ್ಲಿ ಮಳೆ ಅವಾಂತರ ಮಾಡಿದೆ. ಸರ್ಕಾರ ಮತ್ತು ಬಿಬಿಎಂಪಿ ಮಳೆ ಪರಿಸ್ಥಿತಿ ನಿರ್ವಹಣೆ ಮಾಡುತ್ತಿರುವ ವಿಚಾರ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಗರದಲ್ಲಿನಮಳೆ ಪರಿಸ್ಥಿತಿ ನಿರ್ವಹಣೆಗೆ ಸಚಿವರ ತಂಡವನ್ನು ರಚನೆ ಮಾಡಿದ್ದಾರೆ.

ಬೆಂಗಳೂರು ನಗರದ 8 ವಲಯಗಳಿಗೆ ಏಳು ಸಚಿವರ ಟಾಸ್ಕ್ ಫೋರ್ಸ್‌ ರಚನೆ ಮಾಡಿದ್ದಾರೆ.

ಮಳೆ ಅನಾಹುತಗಳ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ 8 ವಲಯಗಳಿಗೆ ಬೆಂಗಳೂರಿನ ಸಚಿವರ ನೇತೃತ್ವದಲ್ಲಿ ಕಾರ್ಯಪಡೆಗಳನ್ನು ರಚಿಸಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ಇದರಲ್ಲಿ ಸಂಬಂಧಪಟ್ಟ ವಲಯಗಳ ಶಾಸಕರು, ಸಂಸದರು ಮತ್ತು ಬಿಬಿಎಂಪಿ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ವಲಯಗಳ ಜಂಟಿ ಆಯುಕ್ತರು ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

ಕಾರ್ಯಪಡೆ ವಿವರ

* ಆರ್ ಅಶೋಕ್ – ದಕ್ಷಿಣ ವಲಯ

* ಡಾ. ಅಶ್ವಥ್ ನಾರಾಯಣ್ – ಪೂರ್ವ ವಲಯ

* ವಿ. ಸೋಮಣ್ಣ – ಪಶ್ಚಿಮ ವಲಯ

* ಎಸ್. ಟಿ. ಸೋಮಶೇಖರ್ – ಆರ್ ಆರ್ ನಗರ ವಲಯ

* ಬೈರತಿ ಬಸವರಾಜ್ – ಮಹದೇವಪುರ ವಲಯ

* ಗೋಪಾಲಯ್ಯ – ಬೊಮ್ಮನಹಳ್ಳಿ ವಲಯ

* ಮುನಿರತ್ನ – ಯಲಹಂಕ ಮತ್ತು ದಾಸರಹಳ್ಳಿ ವಲಯ

ಪೂರ್ವ ವಲಯದ ಕಥೆ ಏನು? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಅಶ್ವಥ ನಾರಾಯಣಗೆ ಪೂರ್ವವಲಯ ಉಸ್ತುವಾರಿ ನೀಡಿದ್ದಾರೆ. ಆದರೆ ಸಚಿವರು ವಿದೇಶ ಪ್ರವಾಸದಲ್ಲಿದ್ದಾರೆ. ಈಗಾಗಲೇ ಲಂಡನ್ ಪ್ರವಾಸದಲ್ಲಿರುವ ಅವರು, ಮುಖ್ಯಮಂತ್ರಿಗಳ ಜೊತೆ ದಾವೋಸ್ ಪ್ರವಾಸಕ್ಕೂ ತೆರಳಲಿದ್ದಾರೆ.

ವಿದೇಶದಿಂದ ವಾಪಸ್ ಬರಲು ಇನ್ನೂ 5 ದಿನಗಳು ಬೇಕು. ಸಚಿವರು ವಿದೇಶದಿಂದ ವಾಪಸ್ ಆಗುವ ತನಕ ಪೂರ್ವ ವಲಯ ಯಾರು ನೋಡಿಕೊಳ್ಳುತ್ತಾರೆ? ಎನ್ನುವ ಪಶ್ನೆಗೆ ಉತ್ತರವಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂಧನ ದರ ಇಳಿಕೆ ಬೆನ್ನಲ್ಲೇ ಭಾರತವನ್ನು ಹೊಗಳಿದ ಇಮ್ರಾನ್ ಖಾನ್!

Sun May 22 , 2022
ಇಸ್ಲಾಮಾಬಾದ್: ಭಾರತದ ಸ್ವತಂತ್ರ ವಿದೇಶಾಂಗ ನೀತಿಗಳ ಬಗ್ಗೆ ಇತ್ತೀಚೆಗೆ ಮುಕ್ತ ಕಂಠದಿಂದ ಶ್ಲಾಘಿಸಿದ್ದ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಇದೀಗ ಮತ್ತೆ ನೆರೆ ದೇಶವನ್ನು ಶ್ಲಾಘಿಸಿದ್ದಾರೆ. ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಕುರಿತ ವರದಿಯೊಂದರ ತುಣುಕನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪಾಕಿಸ್ತಾನ ಸರ್ಕಾರವನ್ನು ಟೀಕಿಸಿದ್ದಾರೆ. ‘ಕ್ವಾಡ್ ಸದಸ್ಯ ರಾಷ್ಟ್ರವಾದರೂ ಅಮೆರಿಕದ ಒತ್ತಡಕ್ಕೆ ಮಣಿಯದ ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿಸುವ ಮೂಲಕ […]

Advertisement

Wordpress Social Share Plugin powered by Ultimatelysocial