ಗೋವಾಗೆ ಹೊರಟಿದ್ದ ಚಾರ್ಟರ್ಡ್ ವಿಮಾನಕ್ಕೆ ಬಾಂಬ್ ಬೆದರಿಕೆ.

ಣಜಿ(ಗೋವಾ), ಜ.21: ರಷ್ಯಾದ ರಾಜಧಾನಿ ಮಾಸ್ಕೋದಿಂದ ಗೋವಾಕ್ಕೆ ಹೊರಟಿದ್ದ ಚಾರ್ಟರ್ಡ್ ವಿಮಾನ ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಮಾರ್ಗ ಬದಲಾವಣೆ ಮಾಡಿ ಉಜ್ಬೇಕಿಸ್ತಾನದತ್ತ ಪ್ರಯಾಣಿಸಿದೆ.

ಮಾಸ್ಕೋದಿಂದ ಹೊರಟ ಚಾರ್ಟರ್ಡ್ ವಿಮಾನವು ದಕ್ಷಿಣ ಗೋವಾದ ದಬೋಲಿಮ್ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 4.15ಕ್ಕೆ ವಿಮಾನ ಲ್ಯಾಂಡ್ ಆಗಬೇಕಿತ್ತು.

ಅಜುರ್ ಏರ್ ಸಂಸ್ಥೆಯ ಈ ವಿಮಾನ ಭಾರತೀಯ ವಾಯುಪ್ರದೇಶವನ್ನು ಪ್ರವೇಶಿಸುವ ಮೊದಲು ಮಾರ್ಗ ಬದಲಾವಣೆ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಬಂದಿರುವ ಕುರಿತು, ಡಾಬೋಲಿಮ್ ವಿಮಾನ ನಿಲ್ದಾಣದ ನಿರ್ದೇಶಕರಿಂದ 12.30ಕ್ಕೆ ಇಮೇಲ್ ಮೂಲಕ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ 240 ಪ್ರಯಾಣಿಕರಿದ್ದ ವಿಮಾನವನ್ನು ಬೇರೆಡೆಗೆ ತಿರುಗಿಸಲಾಗಿದೆ ಎಂದು ಅಧಿಕಾರಿ ಹೇಳಿದರು.

ಇದಕ್ಕೂ ಮೊದಲು ಇದೇ ರೀತಿಯ ಘಟನೆ ವರದಿಯಾಗಿತ್ತು. ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಕಳೆದ ಎರಡು ವಾರಗಳ ಹಿಂದೆ ಮಾಸ್ಕೋದಿಂದ ಆಗಮಿಸಿದ್ದ ವಿಮಾನವನ್ನು ಗೋವಾ ಬದಲು ಗುಜರಾತ್ನ್ ಜಾಮ್ನನಗರದ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಗಿತ್ತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannad

 

 

Please follow and like us:

Leave a Reply

Your email address will not be published. Required fields are marked *

Next Post

ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 108 ಮಹಿಳಾ ಅಧಿಕಾರಿಗಳು.

Sat Jan 21 , 2023
ನವದೆಹಲಿ, ಜ.21: ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 108 ಮಹಿಳಾ ಅಧಿಕಾರಿಗಳನ್ನು ವಿಶೇಷ ಆಯ್ಕೆ ಮಂಡಳಿ ಶೀಘ್ರದಲ್ಲಿ ಕರ್ನಲ್ (ಆಯ್ಕೆ ದರ್ಜೆ) ಹುದ್ದೆಗೆ ಬಡ್ತಿ ನೀಡುವ ಮೂಲಕ ಕಮಾಂಡ್ ಪಾತ್ರ ನಿರ್ವಹಿಸಲು ಸಜ್ಜಾಗಿದ್ದಾರೆ. ಭಾರತೀಯ ಸೇನೆಯಲ್ಲಿ ಮಹಿಳಾ ಕಮಾಂಡರ್ ಗಳ ಜವಾಬ್ದಾರಿ ನಿರ್ವಹಿಸುತ್ತಿರುವುವುದು ಮಹಿಳಾ ನಾಯಕತ್ವ ಮತ್ತು ಕೌಶಲ್ಯ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. 244 ಮಹಿಳಾ ಆಧಿಕಾರಿಗಳಿಗೆ ಬಡ್ತಿ ನೀಡಲು ನಿರ್ಧರಿಸಿದ್ದು ಅದರಲ್ಲು 108 ಮಂದಿ ಭಾರತೀಯ ವಾಯುಸೇನೆಗೆ ಸೇರಿದವರಾಗಿದ್ದಾರೆ. ಕೆಲವು ಮಹಿಳಾ ಆಧಿಕಾರಿಗಳಿಗೆ […]

Advertisement

Wordpress Social Share Plugin powered by Ultimatelysocial