ಕನ್ನಡಿಗರ ರಕ್ಷಣೆಗೆ ಸರ್ಕಾರ ಬದ್ಧ; ‘ಸುಪ್ರೀಂ’ನಲ್ಲಿ ಗೆಲುವಿನ ವಿಶ್ವಾಸ; ಸಿಎಂ ಬೊಮ್ಮಾಯಿ.

ಬೆಂಗಳೂರು: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ನಮಗೆ ಗೆಲುವಾಗುವ ವಿಶ್ವಾಸವಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಚುನಾವಣೆ ದೃಷ್ಟಿಯಿಂದ ಗಡಿ ವಿವಾದ ಎಬ್ಬಿಸಿಲ್ಲ.

ವಿಪಕ್ಷ ಕಾಂಗ್ರೆಸ್ ನಾಯಕರ ಆರೋಪದಲ್ಲಿ ಹುರುಳಿಲ್ಲ. ಬಹಳ ವರ್ಷಗಳಿಂದ ಮಹಾರಾಷ್ಟ್ರದವರು ಗಡಿ ವಿವಾದ ಮಾಡುತ್ತಿದ್ದಾರೆ. ಭಾಷೆ, ನೆಲ, ಜಲ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ರಕ್ಷಣೆಗೂ ಸರ್ಕಾರ ಸಿದ್ಧವಿದೆ ಎಂದರು.

ಮಹಾರಾಷ್ಟ್ರವಾಗಿರಲಿ, ತೆಲಂಗಾಣವಾಗಿರಲಿ, ಆಂಧ್ರದಲ್ಲಿಯೇ ಇರಲಿ. ಎಲ್ಲಾ ಕನ್ನಡಿಗರ ರಕ್ಷಣೆ ಸರ್ಕಾರದ ಜವಾಬ್ದಾರಿ. ಜನರ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೀವು ನಮ್ಮ ಸೋಲು, ಸಂಕಟಗಳಿಂದ ಲಾಭ ಪಡೆದುಕೊಂಡಿದ್ದೀರಿ.ಭಾರತದ ವಿರುದ್ಧ ಉಕ್ರೇನ್ ಅಸಮಾಧಾನ.

Tue Dec 6 , 2022
  ಕೀವ್(ಉಕ್ರೇನ್): ಯುದ್ಧದ ಸಂದರ್ಭದಲ್ಲಿ ರಷ್ಯಾದಿಂದ ಕಡಿಮೆ ಬೆಲೆಗೆ ತೈಲವನ್ನು ಖರೀದಿಸಿರುವ ಭಾರತದ ವಿರುದ್ಧ ಉಕ್ರೇನ್ ವಿದೇಶಾಂಗ ಸಚಿವ ಅಸಮಾಧಾನ ವ್ಯಕ್ತಪಡಿಸಿದ್ದು, ಇದೊಂದು ನೈತಿಕವಾಗಿ ಸಮರ್ಪಕವಾದ ನಿರ್ಧಾರವಲ್ಲ ಎಂದು ತಿಳಿಸಿರುವುದಾಗಿ ವರದಿಯಾಗಿದೆ.ರಷ್ಯಾದ ದಾಳಿಯಿಂದಾಗಿ ಉಕ್ರೇನ್ ನಿವಾಸಿಗಳು ಬಿಕ್ಕಟ್ಟಿಗೆ ಸಿಲುಕಿದ್ದು, ಮತ್ತೊಂದೆಡೆ ಸಾವು, ನೋವು ಅನುಭವಿಸುತ್ತಿದ್ದಾರೆ. ಇಂತಹ ಅವಕಾಶವನ್ನು ಬಳಸಿಕೊಂಡು ಭಾರತ ರಷ್ಯಾದಿಂದ ಅಗ್ಗದ ಬೆಲೆಗೆ ತೈಲ ಖರೀದಿಸುತ್ತಿದೆ ಎಂದು ಡೆಮೈಟ್ರೋ ಕುಲೇಬಾ ಎನ್ ಡಿಟಿವಿ ಜತೆಗಿನ ವಿಶೇಷ ಸಂದರ್ಶನದಲ್ಲಿ ದೂರಿದ್ದಾರೆ.ಒಂದು […]

Advertisement

Wordpress Social Share Plugin powered by Ultimatelysocial