ಕ್ರೆಡಿಟ್ ಕಾರ್ಡ್ ನಕಲು ಮಾಡಿ ಅಪರಿಚಿತ ವ್ಯಕ್ತಿಯೊಬ್ಬ 3.82 ಲಕ್ಷ ರೂ. ವಂಚಿಸಿದ್ದಾನೆ.

ಮುಂಬೈ : ಬಾಲಿವುಡ್ ಖ್ಯಾತ ನಿರ್ಮಾಪಕ ಮತ್ತು ಉದ್ಯಮಿ ಬೋನಿ ಕಪೂರ್ ಅವರ ಕ್ರೆಡಿಟ್ ಕಾರ್ಡ್ ನಕಲು ಮಾಡಿ ಅಪರಿಚಿತ ವ್ಯಕ್ತಿಯೊಬ್ಬ 3.82 ಲಕ್ಷ ರೂ. ವಂಚಿಸಿದ್ದಾನೆ. ಆರೋಪಿಯ ವಿರುದ್ಧ ಐಪಿಸಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಬುಧವಾರ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಕಪೂರ್ ಆಪ್ತರೊಬ್ಬರು ದೂರು ದಾಖಸಿದ್ದಾರೆ.

ದೂರಿನಲ್ಲಿ ಬೋನಿ ಕಪೂರ್ ಅವರ ಕ್ರೆಡಿಟ್ ಕಾರ್ಡ್ ನಕಲು ಮಾಡಲಾಗಿದೆ ಎಂದು ವಿವರಿಸಲಾಗಿದೆ.

ದೂರಿನಲ್ಲಿ ಏನಿದೆ ?
ಈ ದೂರಿನಲ್ಲಿ, ಅಪರಿಚಿತ ವ್ಯಕ್ತಿ ಫೆಬ್ರವರಿ 9 ರಂದು ಕಪೂರ್ ಅವರ ವಿವರಗಳು ಮತ್ತು ಪಾಸ್‍ವರ್ಡ್ ಪಡೆಯುವ ಮೂಲಕ ಐದು ಬಾರಿ ಆನ್‍ಲೈನ್ ವಹಿವಾಟುಗಳನ್ನು ನಡೆಸಲು ಕ್ರೆಡಿಟ್ ಕಾರ್ಡ್ ಬಳಸಿದ್ದಾನೆ. ಮಾರ್ಚ್ 30 ರಂದು ತಮ್ಮ ಬ್ಯಾಂಕ್ ಕಾರ್ಯ ನಿರ್ವಾಹಕರು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗೆ ಕರೆ ಮಾಡಿದಾಗ ಕಪೂರ್ ಅವರಿಗೆ ವಂಚನೆಯ ಬಗ್ಗೆ ತಿಳಿದುಬಂದಿದೆ ಎಂದು ದೂರುದಾರರು ಪೊಲೀಸರಿಗೆ ತಿಳಿಸಿದ್ದಾರೆ. ಪ್ರಸ್ತುತ ತನಿಖೆ ಆರಂಭವಾಗಿದ್ದು, ಆರೋಪಿಯನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅಂಬೋಲಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶ್ರೀನಿಧಿ ಶೆಟ್ಟಿ ಸಂಭಾವನೆ ಬೇಡಿಕೆ: ರಶ್ಮಿಕಾ, ಪೂಜಾ ಹೆಗ್ಡೆಗಿಂತಲೂ ಹೆಚ್ಚು!

Sat May 28 , 2022
‘ಕೆಜಿಎಫ್’ ಸಿನಿಮಾದ ಮೂಲಕ ಬಣ್ಣದ ಬದುಕಿನ ಪಯಣ ಆರಂಭಿಸಿದ ಶ್ರೀನಿಧಿ ಶೆಟ್ಟಿ ಇಂದು ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ‘ಕೆಜಿಎಫ್’ ಸೂಪರ್ ಡೂಪರ್ ಹಿಟ್ ಆಗುತ್ತಲೇ, ನಟಿ ಶ್ರೀನಿಧಿ ಶೆಟ್ಟಿಯ ಬೇಡಿಕೆ ಹೆಚ್ಚಿದೆ. ಅಂದರೆ ಶ್ರೀನಿಧಿ ಶೆಟ್ಟಿ ಸ್ಟಾರ್ ನಟಿಯರ ಸಾಲಿಗೆ ಸೇರಿಬಿಟ್ಟಿದ್ದಾರೆ. ಶ್ರೀನಿಧಿ ಶೆಟ್ಟಿಯ ಮೊದಲ ಸಿನಿಮಾ ‘ಕೆಜಿಎಫ್’. ಎರಡನೇ ಸಿನಿಮಾ ‘ಕೆಜಿಎಫ್ 2’. ‘ಕೆಜಿಎಫ್’ ಮೂಲಕವೇ ತಮ್ಮ ಸಿನಿಮಾ ಪಯಣವನ್ನು ಆರಂಭಿಸಿದ ಶ್ರೀನಿಧಿ ಶೆಟ್ಟಿ ಅಭಿನಯಿಸಿರುವುದು 3 ಸಿನಿಮಾಗಳಲ್ಲಿ […]

Advertisement

Wordpress Social Share Plugin powered by Ultimatelysocial