ಬೂಸ್ಟರ್ ಡೋಸ್ ಲಸಿಕೆ ಬಗ್ಗೆ ನನ್ನ ಸಲಹೆ ಒಪ್ಪಿದ ಕೇಂದ್ರ : ರಾಹುಲ್ ಗಾಂಧಿ

ಬೂಸ್ಟರ್ ಡೋಸ್ ಲಸಿಕೆ ಬಗ್ಗೆ ನನ್ನ ಸಲಹೆ ಒಪ್ಪಿದ ಕೇಂದ್ರ : ರಾಹುಲ್ ಗಾಂಧಿ

ರಾಹುಲ್ ಗಾಂಧಿ ಸದಾ ಬಿಜೆಪಿ ಸರ್ಕಾರ , ಮೋದಿ ವಿರುದ್ಧ ಆರೋಪಗಳನ್ನ ಹೊರಿಸುತ್ತಾ ಆಕ್ರೋಶ ಹೊರಹಾಕುತ್ತಲೇ ಇರುತ್ತಾರೆ.. ಅದ್ರಲ್ಲೂ ಪ್ರಮುಖವಾಗಿ ಕೇಂದ್ರ ಸರ್ಕಾರ ನಮ್ಮ ಸಲಹೆ ಕೇಳಲ್ಲ ವಿಪಕ್ಷಗಳ ಸಲಹೆಗಳನ್ನ ಕಿವಿಗೆ ಹಾಕಿಕೊಳ್ಳೋದಿಲ್ಲ ಅನ್ನೋದು ರಾಹುಲ್ ಗಾಂಧಿ ಅವರು ಮಾಡುವ ಪ್ರಮುಖ ಆರೋಪಗಳಲ್ಲಿ ಒಂದು..

ಆದ್ರೆ ಬೂಸ್ಟರ್ ಡೋಸ್ ವಿಚಾರದಲ್ಲಿ ತನ್ನ ಸಲಹೆ ಒಪ್ಪಿದೆ ಎಂದು ಹೇಳಿಕೊಂಡಿದ್ದಾರೆ ರಾಹುಲ್ ಗಾಂಧೀ.. ದೇಶದಲ್ಲಿ ಕೋವಿಡ್ – 19 ಲಸಿಕೆಯ ಬೂಸ್ಟರ್ ಡೋಸ್‍ ಗಳನ್ನು ನೀಡಲು ಕೇಂದ್ರ ಸರ್ಕಾರ ನನ್ನ ಸಲಹೆಯನ್ನು ಅಂಗೀಕರಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ..

ಈ ಕುರಿತಂತೆ ರಾಹುಲ್ ಗಾಂಧಿ ಅವರು, ಬೂಸ್ಟರ್ ಡೋಸ್ ವಿಚಾರವಾಗಿ ಕೆಂದ್ರ ಸರ್ಕಾರ ನನ್ನ ಸಲಹೆಯನ್ನು ಒಪ್ಪಿಕೊಂಡಿದೆ. ಇದು ಸರಿಯಾದ ಹೆಜ್ಜೆಯಾಗಿದೆ. ಲಸಿಕೆಗಳು ಮತ್ತು ಬೂಸ್ಟರ್​ ಡೋಸ್​​ಗಳು ಸುರಕ್ಷಿತವಾಗಿ ದೇಶದ ಜನರಿಗೆ ತಲುಪಬೇಕು ಎಂದು ಟ್ವಿಟ್ಟರ್‌ ನಲ್ಲಿ ಬರೆದುಕೊಂಡಿದ್ದಾರೆ.

ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು, ಕೊಮೊರ್ಬಿಡಿಟಿ ಹೊಂದಿರುವವರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರು ತಮ್ಮ ವೈದ್ಯರ ಶಿಫಾರಸಿನ ಮೇರೆಗೆ 2022ರ ಜನವರಿ 10 ರಿಂದ ಬೂಸ್ಟರ್ ಡೋಸ್‍ಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಘೋಷಿಸಿದ್ದರು.

ಈ ಮುನ್ನ ಡಿಸೆಂಬರ್ 22ರಂದು ರಾಹುಲ್ ಗಾಂಧಿ ಅವರು ದೇಶದಲ್ಲಿ ಬೂಸ್ಟರ್ ಡೋಸ್ ನೀಡುವಂತೆ ಟ್ವೀಟ್ ಮಾಡುವ ಮೂಲಕ ಒತ್ತಾಯಿಸಿದ್ದರು. ನಮ್ಮ ದೇಶದಲ್ಲಿರುವ ಬಹಳಷ್ಟು ಮಂದಿ ಇನ್ನೂ ಲಸಿಕೆಯನ್ನು ಪಡೆದಿಲ್ಲ. GOI ಯಾವಾಗ ಬೂಸ್ಟರ್ ಡೋಸ್‍ಗಳನ್ನು ನೀಡಲು ಪ್ರಾರಂಭಿಸುತ್ತದೆ ಎಂದು ಪ್ರಶ್ನಿಸಿದ್ದರು. ಇದೀಗ ಕೇಂದ್ರದ ನಿರ್ಧಾರವನ್ನ ರಾಹುಲ್ ಗಾಂಧಿ ಅವರು ಒಂದ್ ರೀತಿ ಸ್ವಾಗತಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

 

Please follow and like us:

Leave a Reply

Your email address will not be published. Required fields are marked *

Next Post

25ನೇ ದಿನದತ್ತ 'ಮದಗಜ': ಚಿತ್ರಮಂದಿರದಲ್ಲಿ ಇರುವಾಗಲೇ ಒಟಿಟಿಗೆ ಬಂದಿದ್ದಕ್ಕೆ ಕಾರಣ ತಿಳಿಸಿದ ನಿರ್ದೇಶಕ

Sun Dec 26 , 2021
Madhagaja Kannada Movie: ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿರುವಾಗಲೇ ‘ಮದಗಜ’ ಸಿನಿಮಾವನ್ನು ಒಟಿಟಿಗೆ ನೀಡಿದ್ದು ಯಾಕೆ ಎಂಬ ಪ್ರಶ್ನೆ ಅನೇಕರ ಮನದಲ್ಲಿದೆ. ಆ ಬಗ್ಗೆ ನಿರ್ದೇಶಕ ಮಹೇಶ್​ ಕುಮಾರ್​ ಪ್ರತಿಕ್ರಿಯೆ ನೀಡಿದ್ದಾರೆ.2021ರ ವರ್ಷ ಮುಗಿಯುತ್ತಿದೆ. ಹೊಸ ಅಧ್ಯಾಯ ಆರಂಭಿಸಲು ಎಲ್ಲರೂ ಸಜ್ಜಾಗುತ್ತಿದ್ದಾರೆ. ಈ ವರ್ಷ ಚಂದನವನದಲ್ಲಿ ಹೈಪ್​​​ ಸೃಷ್ಟಿ ಮಾಡಿದ ಕೆಲವೇ ಸಿನಿಮಾಗಳಲ್ಲಿ ‘ಮದಗಜ’ (, Madhagaja Kannada Movie) ಕೂಡ ಒಂದು. ಶ್ರೀಮುರಳಿ (Sri Murali) ನಟನೆಯ ಈ ಚಿತ್ರಕ್ಕೆ […]

Advertisement

Wordpress Social Share Plugin powered by Ultimatelysocial