‘ಬಾಯ್‌ಫ್ರೆಂಡ್‌ ಬಾಡಿಗೆಗೆ ಇದ್ದಾನೆ’ ಎಂದು ಭಿತ್ತಿಪತ್ರ ಹಿಡಿದ ಎಂಜಿನಿಯರಿಂಗ್‌ ವಿದ್ಯಾರ್ಥಿ..!

ವ್ಯಾಲೆಂಟೈನ್ಸ್‌ ದಿನ ಎಂದರೆ ಅದು ಪ್ರೀತಿ ಮಾಡುವವರಿಗೆ ಅವರ ಪ್ರೇಮ ನಿವೇದನೆಗೆ ಇರುವ ವರ್ಷದಲ್ಲೇ ಒಂದು ಸದಾವಕಾಶದ ದಿನ. ಯುವಕರು ಈ ಸಂದರ್ಭವನ್ನು ತಮ್ಮ ನೆಚ್ಚಿನ ಯುವತಿಗೆ ಪ್ರೊಪೋಸ್‌ ಮಾಡಲು ಬಳಸಿಕೊಳ್ಳುತ್ತಾರೆ. ಯುವತಿಯರು ಕೂಡ, ಆದರೆ ಭಾರತದಲ್ಲಿ ಯುವತಿಯರಿಂದ ಪ್ರೇಮ ನಿವೇದನೆ ಪ್ರಸ್ತಾವನೆ ಕಡಿಮೆಬಿಹಾರದ ದರ್ಭಂಗಾ ಎಂಜಿನಿಯರಿಂಗ್‌ ಕಾಲೇಜಿನ 5ನೇ ಸೆಮಿಸ್ಟರ್‌ ವಿದ್ಯಾರ್ಥಿ ಪ್ರಿಯಾಂಶು ಮಾತ್ರ ಫೆ.14ರಂದು ‘ಬಾಯ್‌ಫ್ರೆಂಡ್‌ ಬಾಡಿಗೆಗೆ ಲಭ್ಯ’ ಎಂಬ ಪೋಸ್ಟರ್‌ ಹಿಡಿದುಕೊಂಡು ನಿಂತುಬಿಟ್ಟಿದ್ದಾನೆ! ಹೌದು, ಆತನಿಗೆ ಹುಡುಗಿಯೊಬ್ಬಳ ಜತೆಗೆ ಸ್ನೇಹ ಮಾಡುವ ಆಸೆ. ಆದರೆ, ಯಾರೂ ಕೂಡ ಸಿಕ್ಕಿಲ್ಲವಂತೆ. ಹಾಗಾಗಿ ಪ್ರೊಪೋಸ್‌ ಮಾಡಿಕೊಂಡು ಛೀಮಾರಿ ಹಾಕಿಸಿಕೊಳ್ಳುವುದಕ್ಕಿಂತ ತಾನೇ ಬಾಡಿಗೆಗೆ ಲಭ್ಯ ಎಂದು ಘೋಷಿಸಿಕೊಂಡು ಬಿಟ್ಟಿದ್ದಾನೆ. ದರ್ಭಂಗಾ ನಗರದ ಜನಪ್ರಿಯ ಪ್ರದೇಶಗಳಾದ ರಾಜ್‌ಫೋರ್ಟ್‌, ಟವರ್‌, ಬಿಗ್‌ ಬಜಾರ್‌ಗಳ ಎದುರು ನಿಂತುಕೊಂಡಿರುವ ಪ್ರಿಯಾಂಶು ಫೋಟೊ ವೈರಲ್‌ ಆಗಿದೆ.ಖಿನ್ನತೆ ಮತ್ತು ಒತ್ತಡದಿಂದ ಅನೇಕ ಯುವಕರು ಬಳಲುತ್ತಿದ್ದಾರೆ. ಒಂಟಿಯಾಗಿ ಯುವಕರು ಬದುಕುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಹಾಗಾಗಿ ಪ್ರಕೃತಿ ಸಹಜವಾದ ಹುಡುಗ-ಹುಡುಗಿಯರ ನಡುವಿನ ಆಕರ್ಷಣೆಗೆ ಉತ್ತಮ ಸ್ನೇಹ-ಬಾಂಧವ್ಯದ ಬೆಸುಗೆ ಸಿಗಬೇಕು. ಆ ಮೂಲಕ ಪ್ರೇಮದ ಹಂಚಿಕೆಯಾಗಬೇಕು ಎನ್ನುವುದು ನನ್ನ ಕಾರ್ಯದ ಹಿಂದಿನ ಸಂದೇಶ ಎಂದಿದ್ದಾರೆ ಪ್ರಿಯಾಂಶು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

RR:ತಮ್ಮ ಹೊಸ IPL ತಂಡದ ಆಟಗಾರ ರವಿಚಂದ್ರನ್ ಅಶ್ವಿನ್ ಅವರನ್ನು ಭೇಟಿಯಾದ, ಸಂಜು ಸ್ಯಾಮ್ಸನ್;

Tue Feb 15 , 2022
ಶನಿವಾರ ಬೆಂಗಳೂರಿನಲ್ಲಿ ನಡೆದ ಮೆಗಾ ಹರಾಜಿನಲ್ಲಿ ಉದ್ಘಾಟನಾ ಐಪಿಎಲ್ ವಿಜೇತರು ಖರೀದಿಸಿದ ನಂತರ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಸ್ಟಾರ್ ಭಾರತೀಯ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್‌ನಲ್ಲಿ ಹೊಸ ಸಹ ಆಟಗಾರನನ್ನು ಹೊಂದಿದ್ದಾರೆ. RR ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಇಬ್ಬರ ಚಿತ್ರವನ್ನು ಹಂಚಿಕೊಂಡಿದ್ದಾರೆ, ಅಲ್ಲಿ ಸಂಜು ಭಾರತೀಯ ಹಿರಿಯ ಕ್ರಿಕೆಟ್ ತಂಡದ ಜೆರ್ಸಿಯಲ್ಲಿ ನೋಡಬಹುದು ಮತ್ತು ಅಶ್ವಿನ್ RR ನ ಜೆರ್ಸಿಯನ್ನು ಧರಿಸುತ್ತಾರೆ. “ಸಂಜು ಚೆಟ್ಟಾ ಅವರ ಆಶ್ […]

Advertisement

Wordpress Social Share Plugin powered by Ultimatelysocial