Breaking news: ದೇಶದಾದ್ಯಂತ ಎಂಬೆಸ್ಸಿ ಗ್ರೂಪ್ ಮೇಲೆ ಐಟಿ ದಾಳಿ

 

ಬೆಂಗಳೂರು, ಜೂನ್ 1: ದೇಶದಾದ್ಯಂತ ಏಕಕಾಲದಲ್ಲಿ ಐಟಿ ಅಧಿಕಾರಿಗಳು ಎಂಬೆಸ್ಸಿ ಕಂಪನಿಗೆ ಸೇರಿದ ಕಚೇರಿಗಳಲ್ಲಿ ದಾಳಿಯನ್ನು ನಡೆಸಿದ್ದಾರೆ. ಆದಾಯ ತೆರಿಗೆ ವಂಚನೆಯ ಆರೋಪದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿಯನ್ನು ಮಾಡಿದ್ದಾರೆೆ. ರಾಜ್ಯಾದ್ಯಂತ ಸುಮಾರು 50ಕ್ಕೂ ಹೆಚ್ಚು ಕಡೆಗಳಲ್ಲಿ ಆದಾಯ ತೆರಿಗೆ ಅಧಿಕಾಗಳು ದಾಳಿಯನ್ನು ಮಾಡಿ ದಾಖಲೆಗಳ ಪರಿಶೀಲನೆಯನ್ನು ಮಾಡುತ್ತಿದ್ದಾರೆ.ಎಂಬಸ್ಸಿ ಗ್ರೂಪ್‌ನ ಎಂಡಿ ಜಿತು ವಿರ್ವಾನಿ, ನಿರ್ದೇಶಕ ನರಪತ್ ಸಿಂಗ್ ಚರೋರಿಯಾ ಮನೆಗಳು ಹಾಗೂ ಪ್ಲಾಟ್ ಮೇಲೆ ಸಹ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. 600ಕ್ಕೂ ಹೆಚ್ಚು ಅಧಿಕಾರಿ ಸಿಬ್ಬಂದಿಯಿಂದ ಮನೆ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಐಟಿ ರಿಟರ್ನ್ಸ್ ಸಲ್ಲಿಕೆಗಿಂತ ಹೆಚ್ಚಿನ ಆದಾಯ ಹೊಂದಿರೋದನ್ನ ಪತ್ತೆ ಮಾಡಿ ದಾಳಿ ಅಧಿಕಾರಿಗಳು ನಡೆಸಿದ್ದಾರೆ. ಗೋವಾ – ಕರ್ನಾಟಕ ಅಧಿಕಾರಿಗಳ ತಂಡದಿಂದ ದಾಳಿ ನಡೆಸಿ ಲೆಕ್ಕಪತ್ರಗಳ ಶೋಧನೆ ನಡೆಸಲಾಗುತ್ತಿದೆ. ಎಂಬೆಸ್ಸಿ ಗ್ರೂಪ್‌ ಅನ್ನೇ ಟಾರ್ಗೇಟ್ ಮಾಡಿ ದಾಳಿಯನ್ನು ನಡೆಸಲಾಗಿದೆ.ಬೆಂಗಳೂರಿನಲ್ಲಿ ಮಾತ್ರವಲ್ಲದೇ ಮುಂಬೈನ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (BKC)ಯಲ್ಲಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ರಾಜ್ಯದ ಇತರೆಡೆಗಳಲ್ಲಿರುವ ಎಂಬೆಸ್ಸಿ ಗ್ರೂಪ್‌ಗೆ ಸೇರಿದ ಕಚೇರಿಗಳ ಮೇಲೆಯೂ ದಾಳಿಯಾಗಿದ್ದು ಐಟಿಗೆ ವಂಚನೆಯನ್ನು ಮಾಡಿರುವ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಐಟಿ ರಿಟರ್ನ್ಸ್ ವೇಳೆಯೂ ಲೆಕ್ಕದಲ್ಲಿ ವ್ಯತ್ಯಯಗಳು ಉಂಟಾಗಿರುವ ಹಿನ್ನೆಲೆಯಲ್ಲಿ ದಾಳಿಯನ್ನು ನಡೆಸಿರು ಐಟಿ ಅಧಿಕಾರಿಗಳ ತಂಡ ಲೆಕ್ಕಶೋಧನೆಯ ಕಾರ್ಯದಲ್ಲಿ ತೊಡಗಿದ್ದಾರೆ. 50ಕ್ಕೂ ಹೆಚ್ಚು ಕಡೆಗಳಲ್ಲಿ 600ಕ್ಕೂ ಹೆಚ್ಚು ಅಧಿಕರಿಗಳನ್ನೊಳೊಂಡ ಬೃಹತ್ ದಾಳಿ ಇದಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ಬಳಿ ಹಣ ಕಬಳಿಸಿದ ರಾಮನಗರ ಲೇಡಿ PSI? ದುಡ್ಡು ಕೇಳಿದ್ದಕ್ಕೆ ದರ್ಪದ ಮಾತು

Wed Jun 1 , 2022
ರಾಮನಗರ: ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯ ಬಳಿ ರಾಮನಗರದ ಮಹಿಳಾ ಪಿಎಸ್​ಐ ಹಣ ಕಬಳಿಸಿರುವ ಆರೋಪ ವಿರುದ್ಧ ಕೇಳಿಬಂದಿದೆ.ರಾಮನಗರ ಸಂಚಾರಿ ಠಾಣೆ ಪಿಎಸ್‌ಐ ಸರಸ್ವತಿ ಅವರ ವಿರುದ್ಧ ಆರೋಪ ಕೇಳಿಬಂದಿದೆ. ಈ ಬಗ್ಗೆ ಸಂತ್ರಸ್ತ ದಂಪತಿ ನೇರ ಆರೋಪ ಮಾಡಿದ್ದಾರೆ.ಏ.9 ರ ರಾತ್ರಿ ನಗರದ ಬಾಲಗೇರಿಗೆ ಹೋಗುವ ಬ್ರಿಡ್ಜ್ ಬಳಿ ದೇವೆಂದ್ರ ಅವರ ಬೈಕ್​ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿತ್ತು. ಇದೇ ವೇಳೆಗೆ ಅದೇ ಬ್ರಿಡ್ಜ್ ಬಳಿ ಪಿಎಸ್‌ಐ ಸರಸ್ವತಿ ರೌಂಡ್ಸ್ ಬಂದಿದ್ದರು.ಅಪಘಾತದಲ್ಲಿ […]

Advertisement

Wordpress Social Share Plugin powered by Ultimatelysocial