ಸ್ಪೀಕರ್  ಸಿಎಂ ಯಡಿಯೂರಪ್ಪರ ರಬ್ಬರ್ ಸ್ಟಾಂಪ್.!

ವಿಧಾನಸಭೆ ಬಜೆಟ್‌ ಅಧಿವೇಶನವನ್ನು ಮೊಟಕುಗೊಳಿಸಿದನ್ನು ಖಂಡಿಸಿ ವಾಟಾಳ್ ನಾಗರಾಜ್ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಕರಾಳ ದಿನಾಚರಣೆಯನ್ನು  ಆಚರಿಸಿದ್ದಾರೆ. ಬಳಿಕ ಮಾತನಾಡಿದ ವಾಟಲ್ ಸ್ಪೀಕರ್  ಸಿಎಂ ಯಡಿಯೂರಪ್ಪರ ರಬ್ಬರ್ ಸ್ಟಾಂಪ್ ಆಗಿದ್ದಾರೆ, ಈ ಬೆಳವಣಿಗೆ ಪ್ರಜಾ ಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ, ಶಾಸಕರ ಮೇಲೆ ಏಕಪತ್ನಿವ್ರತದ ಮೇಲೆ ಚರ್ಚೆ ಮಾಡಿರುವುದು ಅಗೌರವ ಅನೈತಿಕ ಕೆಟ್ಟ ಚಿಂತನೆ ಎಂದು ಸರ್ಕಾರದ ವಿರುದ್ಧ ವಾಟಾಳ್ ಕಿಡಿಕಾರಿದ್ದಾರೆ.ಇದಲ್ಲದೆ ಆಡಳಿತ ಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ರಾಜ್ಯದ ಸಮಸ್ಯೆಗಳನ್ನು ನಿರ್ಲಕ್ಷಿಸಿ ಸದನದಲ್ಲಿ ಯಾವುದೇ ಗಂಭೀರ ಚರ್ಚೆಗಳನ್ನು ನಡೆಸದೆ ಅನಿರ್ದಿಷ್ಟಾವಧಿ ಸದನ ಮುಂದೂಡಿದ್ದು ವಿಪರ್ಯಾಸ ಎಂದು ಹೇಳಿದರು.

ಇದನ್ನೂ ಓದಿ: ಅನುದಾನದ ವಿಚಾರದಲ್ಲಿ CM ಮನೆ ಬಾಗಿಲು ಯಾವಾಗಲು ತೆರೆದಿರುತ್ತದೆ

Please follow and like us:

Leave a Reply

Your email address will not be published. Required fields are marked *

Next Post

ಬರೋಬ್ಬರಿ 45ಕೆಜಿ ಗಾಂಜಾ ಜಪ್ತಿ ಮಾಡಿದ ಪೊಲೀಸರು.!

Thu Mar 25 , 2021
ಆಟೋ ರಿಕ್ಷಾವೊಂದರಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಶ್ರೀರಾಮಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸತೀಶ್ ಹಾಗೂ ವಸಂತ ಎಂದು ಗುರುತಿಸಲಾಗಿದ್ದು, ಬಂಧಿತರಿಂದ ಬರೋಬ್ಬರಿ 45 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. ಆರೋಪಿಗಳು ವಿಶಾಖಪಟ್ಟಣಂನಿಂದ  ರೈಲಿನ ಮೂಲಕ ಬೆಂಗಳೂರಿಗೆ ಗಾಂಜಾ ತಂದು ಸಣ್ಣ ಸಣ್ಣ ಪ್ಯಾಕೇಟ್ ಗಳಾಗಿ ಮಾಡಿ ಮಾರಾಟ ಮಾಡುತ್ತಿದ್ದರೆಂದು ತಿಳಿದು ಬಂದಿದೆ. ಇದನ್ನೂ ಓದಿ: ಸ್ಪೀಕರ್  ಸಿಎಂ ಯಡಿಯೂರಪ್ಪರ ರಬ್ಬರ್ ಸ್ಟಾಂಪ್.! Please follow and […]

Advertisement

Wordpress Social Share Plugin powered by Ultimatelysocial