ಬಜೆಟ್ ಬಗ್ಗೆ ಇಂದು ಮೋದಿ ಭಾಷಣ; ದೇಶಾದ್ಯಂತ ವೀಕ್ಷಣೆಗೆ ವ್ಯವಸ್ಥೆ, 5 ರಾಜ್ಯಗಳ ಚುನಾವಣೆ ಮೇಲೆ ಕಣ್ಣು

 

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 2 ರಂದು ಬೆಳಗ್ಗೆ ಸುಮಾರು 11 ಗಂಟೆಗೆ ಬಜೆಟ್ ಬಗ್ಗೆ ಭಾಷಣ ಮಾಡಲಿದ್ದಾರೆ.ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು, ದೇಶದ ಜನರನ್ನುದ್ದೇಶಿಸಿ ಅವರು ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಮಂಡಿಸಿದ ಒಂದು ದಿನದ ನಂತರ ಪ್ರಧಾನಿ ಮೋದಿಯವರ ಭಾಷಣ ಇದೆ.ವರದಿಯ ಪ್ರಕಾರ, ಪ್ರಧಾನಿಯವರು ತಮ್ಮ ಭಾಷಣದಲ್ಲಿ ಕೇಂದ್ರ ಬಜೆಟ್ 2022 ಕುರಿತು ಮಾತನಾಡಲಿದ್ದಾರೆ. ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಧಾನಿ ಭಾಷಣವನ್ನು ಜನರು ಆಲಿಸಲು ದೇಶದ ಹಲವು ಜಿಲ್ಲೆಗಳಲ್ಲಿ ಎಲ್‌ಇಡಿ ಪರದೆಗಳನ್ನು ಸ್ಥಾಪಿಸಲಾಗಿದೆ.ಕೇಂದ್ರ ಸರ್ಕಾರವು ಸಮಾಜದ ಎಲ್ಲಾ ವರ್ಗಗಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ ಮತ್ತು ಕೇಂದ್ರ ಬಜೆಟ್ ಆ ಬದ್ಧತೆಯ ಪ್ರತಿಬಿಂಬವಾಗಿದೆ ಎಂದು ಪ್ರಧಾನಿ ಮೋದಿ ಹೈಲೈಟ್ ಮಾಡುವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳುತ್ತವೆ.ಮುಂದಿನ ತಿಂಗಳು ಐದು ರಾಜ್ಯಗಳಲ್ಲಿ ಚುನಾವಣೆ ನಡೆಯಲಿರುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ರಿಂದ 7 ಹಂತಗಳ ವಿಧಾನಸಭಾ ಚುನಾವಣೆ, ಫೆಬ್ರವರಿ 27 ರಿಂದ ಮಣಿಪುರ ಎರಡು ಹಂತಗಳಲ್ಲಿ ಮತ್ತು ಪಂಜಾಬ್, ಗೋವಾ ಮತ್ತು ಉತ್ತರಾಖಂಡ್ ಫೆಬ್ರವರಿ 14 ರಂದು ಚುನಾವಣೆಗಳನ್ನು ಎದುರಿಸಲಿದೆ. ಈ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪ್ರಧಾನಿ ಭಾಷಣ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಸ್ತೆಗಳ ಮೇಲಿನ ವಿವಿಧ ಬಣ್ಣಗಳ ಪಟ್ಟಿ ಬಗ್ಗೆ ನಿಮಗೆ ತಿಳಿದಿರಲಿ ಮಾಹಿತಿ

Wed Feb 2 , 2022
  ರಸ್ತೆಗಳ ಮೇಲೆ ಬಳಿಯಲಾಗಿರುವ ಬಿಳಿ ಮತ್ತು ಹಳದಿ ಪಟ್ಟಿಗಳು ಸಂಚಾರ ಸುರಕ್ಷತೆ ದೃಷ್ಟಿಯಿಂದ ಏನನ್ನು ಸೂಚಿಸುತ್ತವೆ ಎಂದು ನಮಗೆ ಸಾಮಾನ್ಯವಾಗಿ ಸ್ಪಷ್ಟವಾಗಿ ತಿಳಿದಿರುವುದಿಲ್ಲ.ರಸ್ತೆಗಳ ಮೇಲಿನ ಬಿಳಿ ಮತ್ತು ಹಳದಿ ಪಟ್ಟಿಗಳ ಬಗ್ಗೆ ಈ ಅಂಶಗಳು ನಿಮಗೆ ತಿಳಿದಿರಲಿ: ಬಿಳಿ ಪಟ್ಟಿಗಳು ಒಂದೇ ದಿಕ್ಕಿನಲ್ಲಿ ಸಂಚರಿಸುತ್ತಿರುವ ವಾಹನಗಳನ್ನು ಈ ಪಟ್ಟಿಗಳು ಪ್ರತ್ಯೇಕಿಸುತ್ತವೆ.ಬಿಳಿ ಪಟ್ಟಿಗಳನ್ನು ಮೂರು ವರ್ಗಗಳಾಗಿ ವಿಭಾಗಿಸಲಾಗಿದೆ: ಸಿಂಗಲ್ ಬ್ರೋಕನ್, ಸಿಂಗಲ್ ಸಾಲಿಡ್ ಮಾರ್ಕಿಂಗ್ ಮತ್ತು ಡಬಲ್ ಸಾಲಿಡ್ ಮಾರ್ಕಿಂಗ್.ಬ್ರೋಕನ್ […]

Advertisement

Wordpress Social Share Plugin powered by Ultimatelysocial