6 ಮಂದಿಯನ್ನು ಬಲಿ ಪಡೆದ ಕಟ್ಟಡ! ಅಷ್ಟಕ್ಕೂ ಅಲ್ಲಿ ನಡೆದಿದ್ದೇನು!

ನಗರ ಪ್ರದೇಶಗಳಲ್ಲಿ   ದಿನ ಬೆಳಗಾದರೆ ತಲೆ ಎತ್ತತ್ತಲೇ ಇರುತ್ತವೆ. ಹೀಗೆ ನಾಯಿಕೊಡೆಗಳಂತೆ ತಲೆಯೆತ್ತುವ ಕಟ್ಟಡಗಳು ನಗರದ ಅಭಿವೃದ್ಧಿಯ   ಸಂಕೇತವೂ ಹೌದು. ಆದರೆ ನಗರಕ್ಕೆ ಸೌಂದರ್ಯ ತಂದುಕೊಡುವ ಈ ಕಟ್ಟಡಗಳು ಎಷ್ಟು ಸುರಕ್ಷಿತ   ಅನ್ನೋದು ಈಗಿನ ಪ್ರಶ್ನೆ.
ಬೇಗ ಕಟ್ಟಬೇಕು, ಮತ್ತೊಂದು ಪ್ರಾಜೆಕ್ಟ್‌ಗೆ   ಕೈ ಹಾಕಬೇಕು, ಲಾಭ ಮಾಡಬೇಕು ಅಂತ ಕಟ್ಟಡದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುತ್ತಾರೆ. ಪರಿಣಾಮ ಉದ್ಘಾಟನೆಗೂ  ಮುನ್ನವೇ ಕಟ್ಟಡ ಕುಸಿದು ಬೀಳುವ ಎಷ್ಟೋ ಘಟನೆಗಳ ಬಗ್ಗೆ ಕೇಳಿದ್ದೇವೆ. ಹಾಗೆ ಬೀಳುವ ಕಟ್ಟಡಗಳು ಅದೆಷ್ಟೋ ಜೀವಗಳನ್ನು ಬಲಿ ಪಡೆದಿದ್ದೂ ನಮ್ಮ ಮುಂದೆಯೇ ಇದೆ. ಪಕ್ಕದ ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲೂ   ಇಂಥದ್ದೇ ಒಂದು ಘಟನೆ ನಡೆದಿದೆ. ನಿರ್ಮಾಣ ಹಂತದ ಕಟ್ಟಡವೊಂದು ಅಮಾಯಕ ಜೀವಗಳನ್ನು ಬಲಿ ಪಡೆದಿದೆ.ಘಟನೆ ನಡೆದಿದ್ದು ಎಲ್ಲಿ?
ಮಹಾರಾಷ್ಟ್ರ ಜಿಲ್ಲೆಯ ಪುಣೆ ನಗರದ ಯರವಾಡ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ. ಯರವಾಡ ವ್ಯಾಪ್ತಿಯ ಶಾಸ್ತ್ರಿ ನಗರದ ಲೇನ್ 8 ರಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ನಿನ್ನೆ ರಾತ್ರಿ 11 ಗಂಟೆಗೆ ಈ ಕಟ್ಟಡದ ಚಾವಣಿ ಕುಸಿಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇದು ಬಹುಮಹಡಿ ಅಪಾರ್ಟ್‌ಮೆಂಟ್ ಆಗಿದ್ದು, ಇನ್ನೂ ಕಾಮಗಾರಿ ನಡೆಯುತ್ತಲೇ ಇತ್ತು ಎನ್ನಲಾಗಿದೆ.6 ಮಂದಿ ಸಾವಿನ ಶಂಕೆ, ಹಲವರಿಗೆ ಗಾಯ
ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಕಟ್ಟಡ ಕುಸಿದು ಬೀಳುವ ಸಮಯದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಲೇ ಇದ್ದರು ಎನ್ನಲಾಗಿದೆ. ಅಲ್ಲದೇ ಕಟ್ಟಡ ನಿರ್ಮಾಣ ಸ್ಥಳದಲ್ಲೇ ಅನೇಕ ಕಾರ್ಮಿಕರು ಗುಡಿಸಲು ಮಾಡಿಕೊಂಡು ಊಟ ಮಾಡುತ್ತಿದ್ದರು ಎನ್ನಲಾಗಿದೆ. ಆ ವೇಳೆ ಕಟ್ಟಡ ಕುಸಿದು ಬಿದ್ದಿದೆ. ಪರಿಣಾಮ ಕಾರ್ಮಿಕರು ಅವಶೇಷಗಳ ಅಡಿ ಸಿಲುಕಿದ್ದಾರೆ. 6 ಮಂದಿ ಕಾರ್ಮಿಕರು ಮೃತಪಟ್ಟಿರಬಹುದು ಅಂತ ಶಂಕಿಸಲಾಗಿದೆ. ಜೊತೆಗೆ ಹಲವರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯೂ ಇದೆ.ಘಟನೆ ಹೇಗೆ ಸಂಭವಿಸಿತು?
ಕಬ್ಬಿಣದ ಸ್ಲಾಬ್ ಸುರಿಯುವಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ಸ್ಲಾಬ್ ಹಾಕಲು ಕಬ್ಬಿಣದ ಸರಳುಗಳಿಂದ ಜಾಲರಿಯನ್ನು ತಯಾರಿಸಲಾಗಿತ್ತು. ಕಾರ್ಮಿಕರು ಬಲೆಯ ಆಸರೆಯಲ್ಲಿ ನಿಂತು ಕೆಲಸ ಮಾಡುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಕುಸಿತವಾಗಿ ಕಾರ್ಮಿಕರ ಮೇಲೆಯೇ ಬಿದ್ದಿದೆ. ಕಬ್ಬಿಣದ ಸರಳುಗಳು ಕಾರ್ಮಿಕರ ದೇಹಕ್ಕೆ ನುಗ್ಗಿವೆ. ಕೆಲವರು ಸ್ಲಾಬ್ ಸಮೇತ ಕೆಳಕ್ಕೆ ಬಿದ್ದಿದ್ದಾರೆ.
ಘಟನೆ ಕುರಿತು ಮಾಹಿತಿ ಲಭಿಸಿದ ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಟರ್‌ಗಳ ಸಹಾಯದಿಂದ ಬಲೆಯಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಹೊರಕ್ಕೆ ತೆಗೆದಿದ್ದಾರೆ. ಅವರನ್ನೆಲ್ಲ ಹತ್ತಿರದ ಸಾಸೂನ್ ಆಸ್ಪತ್ರೆಗೆ ದಾಖಲಿಸಲಾಯ್ತು. ಆದರೆ ಚಿಕಿತ್ಸೆ ಫಲಿಸದೇ 6 ಮಂದಿ ಸಾವನ್ನಪ್ಪಿದ್ದಾರೆ ಅಂತ ವರದಿಯಾಗಿದೆ. ಗಾಯಾಳುಗಳಿಗೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.ತನಿಖೆ ಆರಂಭಿಸಿದ ಪೊಲೀಸರು ̤
ಕಟ್ಟಡ ಕುಸಿತದ ಸಂಬಂಧ ಯರವಾಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕೂಲಿಕಾರರು ಎಲ್ಲಿಂದ ಬಂದಿದ್ದರು ಮತ್ತು ಅವರು ಇಲ್ಲಿ ಹೇಗೆ ಕೆಲಸ ಮಾಡುತ್ತಿದ್ದರು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಕಟ್ಟಡದ ಮಾಲೀಕರನ್ನು ವಿಚಾರಣೆ ನಡೆಸುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.ಟ್ವಿಟ್ಟರ್‌ನಲ್ಲಿ ಪ್ರಧಾನಿ ಮೋದಿ ಸಂತಾಪ
ಘಟನೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ ಅಂತ ಪ್ರಾರ್ಥಿಸಿದ್ದಾರೆ. ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಕೊಡಲಿ ಅಂತ ಪ್ರಾರ್ಥಿಸಿ ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಐತಿಹಾಸಿಕ ಸುಕ್ಷೇತ್ರ ಮೈಲಾರ ಜಾತ್ರೆಯ ಕಾರ್ಣಿಕೋತ್ಸವಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ

Fri Feb 4 , 2022
ಕೊರೊನಾ ಹಿನ್ನೆಲೆಯಲ್ಲಿ ನಿರ್ಬಂಧ ಹೇರಿ ಆದೇಶವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರ ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ್ ಪಿ. ಶ್ರವಣ್ ಆದೇಶ ಮೈಲಾರ ಕಾರ್ಣಿಕೋತ್ಸವಕ್ಕೆ ವಿಜಯನಗರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ. ಫೆ.8 ರಿಂದ 19 ರವರೆಗೆ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ ಮತ್ತು ಫೆ.25 ರಿಂದ ಮಾರ್ಚ್ 3 ರ ವರೆಗೆ ಕುರುವತ್ತಿಯ ಶ್ರೀ ಮಲ್ಲಿಕಾರ್ಜುನಸ್ವಾಮಿ ಮತ್ತು ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನಗಳಲ್ಲಿ ದೇವರ ದರ್ಶನ […]

Advertisement

Wordpress Social Share Plugin powered by Ultimatelysocial