ಕುಡುಕರ ಮಲಗುವ ತಾಣವಾದ ಯಳಂದೂರು ಬಸ್ ನಿಲ್ದಾಣ.

ಯಳಂದೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕೂರುವ ಸ್ಥಳದಲ್ಲಿ ಕುಡಿದು ಮಲಗಿರುವ ಕುಡುಕರು. ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು, ಮಹಿಳೆಯರು, ವಯಸ್ಕರು ಹಾಗೂ ವಿವಿಧ ಗ್ರಾಮಗಳಿಗೆ ತೆರಳಲು ಸಾರ್ವಜನಿಕರು ಕುಳಿತುಕೊಳ್ಳಲು ಜಾಗವಿಲ್ಲದೆ ಬಸ್ ಬರುವವರೆಗೂ ನಿಂತುಕೊಂಡು ಆಯಾಸ ಪಡುವ ಪರಿಸ್ಥಿತಿ ಇದೆ ಎಂದು ಪ್ರಯಾಣಿಕರು ಮಾಧ್ಯಮಕ್ಕೆ ಮಾಹಿತಿ ನೀಡಿದರು ಪ್ರತಿ ದಿನ ಕುಡಿದು ಬಸ್ ನಿಲ್ದಾಣದಲ್ಲಿ ಮಲಗುವವರ ಸಂಖ್ಯೆ ಹೆಚ್ಚಾಗಿದ್ದು ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ ಎಂದು ಮಳಿಗೆ ಮಾಲೀಕರು ತಿಳಿಸಿದರು.ಬಸ್ ನಿಲ್ದಾಣದಲ್ಲಿ ವಾಹನಗಳನ್ನು ಅಡ್ಡದಿಡ್ಡಿ ನಿಲ್ಲಿಸುತ್ತಾರೆ ಬಸ್ ಗಳನ್ನು ರಸ್ತೆ ಮಧ್ಯದಲ್ಲಿಯೇ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿ, ಹತ್ತಿಸಿಕೊಳ್ಳುತ್ತಾರೆ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಆಗಾಗಿ ಬಸ್ ನಿಲ್ದಾಣಕ್ಕೆ ಪೊಲೀಸರನ್ನು ನೇಮಿಸಿ ಪ್ರಯಾಣಿಕರ ಸಮಸ್ಯೆ ಬಗೆಹರಿಸಿ ಎಂದು ಪ್ರಯಾಣಿಕರು ಮಾಧ್ಯಮದ ಮೂಲಕ ಮನವಿ ಮಾಡಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಂದು ವಾರ ದಟ್ಟ ಮಂಜು, ಚಳಿ ಇರಲಿದೆ.

Wed Jan 18 , 2023
ಬೆಂಗಳೂರು, ಜನವರಿ 18: ರಾಜ್ಯ ರಾಜಧಾನಿಯಲ್ಲಿ ಅತ್ಯಂತ ಕನಿಷ್ಠ ತಾಪಮಾನ ವರದಿಯಾದ ಬೆನ್ನಲ್ಲೆ ಇದೀಗ ಚಳಿ ಜೊತೆಗೆ ತೀವ್ರ ಮಂಜಿನ ವಾತಾವರಣ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಒಂದು ವಾರ ಪೂರ್ತಿ ಕಂಡು ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಎರಡು ದಿನ ಅತಿ ಕನಿಷ್ಠ 13 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಉಳಿದ ಕೆಲವು ಭಾಗಗಳಲ್ಲಿ ಮಂಜು ದಟ್ಟವಾಗಿತ್ತು. ಈ ಚಳಿ ಹಾಗೂ ಮಂಜು ಕವಿದ ವಾತಾವರಣ […]

Advertisement

Wordpress Social Share Plugin powered by Ultimatelysocial