10 ಮತ್ತು 12ನೆ ತರಗತಿಯ ವಾರ್ಷಿಕ ಎರಡನೆ ಅವಧಿಯ ಪರೀಕ್ಷೆ ಇಂದಿನಿಂದ ದೇಶಾದ್ಯಂತ ಆರಂಭವಾಗಿದೆ.

ಬೆಂಗಳೂರು, ಏ.26- ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್‍ಇ) 10 ಮತ್ತು 12ನೆ ತರಗತಿಯ ವಾರ್ಷಿಕ ಎರಡನೆ ಅವಧಿಯ ಪರೀಕ್ಷೆ ಇಂದಿನಿಂದ ದೇಶಾದ್ಯಂತ ಆರಂಭವಾಗಿದೆ.

10ನೆ ತರಗತಿ ಪರೀಕ್ಷೆಯು ಇಂದಿನಿಂದ ಮೇ 14ರ ವರೆಗೆ ನಡೆಯಲಿದೆ. 12ನೆ ತರಗತಿಯ ಪರೀಕ್ಷೆಯು ಇಂದಿನಿಂದ ಜೂ.15ರ ವರೆಗೆ ನಡೆಯಲಿದೆ.

10ನೆ ತರಗತಿಯ 75 ವಿವಿಧ ವಿಷಯಗಳಿಗೆ ಹಾಗೂ 12ನೆ ತರಗತಿಯ 114 ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. 10ನೆ ತರಗತಿಯ 22,732 ಶಾಲೆಗಳ 21,16,209 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೊಂದಾಯಿಸಿಕೊಂಡಿದ್ದಾರೆ.

ದೇಶಾದ್ಯಂತ 7406 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಹಾಗೆಯೇ 12ನೆ ತರಗತಿಯ 15,080 ಶಾಲೆಗಳ 14,54,370 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೊಂದಾಯಿಸಿಕೊಂಡಿದ್ದಾರೆ.

ಒಟ್ಟು 6720 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಕೋವಿಡ್ ಮಾರ್ಗಸೂಚಿಯ ನಿಯಮಗಳನ್ನು ಪರೀಕ್ಷೆ ಸಂದರ್ಭದಲ್ಲಿ ಕಡ್ಡಾಯವಾಗಿ ಪಾಲಿಸುವಂತೆ ಪರೀಕ್ಷಾ ಮಂಡಳಿ ಸೂಚನೆ ನೀಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಅಲ್ಪಸಂಖ್ಯಾತ ಶಾಲೆಗಳಲ್ಲಿ ಧರ್ಮ ಬೋಧನೆ ನಿಷೇಧಕ್ಕೆ ಕ್ರಮ:

Tue Apr 26 , 2022
  ಬೆಂಗಳೂರು: ಅಲ್ಪಸಂಖ್ಯಾತ ಶಾಲೆಯಲ್ಲಿ ಧರ್ಮದ ಬೋಧನೆ ನಿಷೇಧಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಮೇಲೆ ನಿಗಾ ಇಡಲಾಗುವುದು. ಎಲ್ಲ ಬಿಇಓಗಳಿಗೆ ಈ ಬಗ್ಗೆ ಪರಿಶೀಲಿಸಲು ಸೂಚಿಸುವುದಾಗಿ ವಿಧಾನಸೌಧದಲ್ಲಿ ತಮ್ಮನ್ನು ಭೇಟಿ ಮಾಡಿ ಸುದ್ದಿಗಾರರಿಗೆ ತಿಳಿಸಿದರು. ಅಡ್ಮಿಷನ್ ವೇಳೆ ಬೈಬಲ್​ಗೆ ಒಪ್ಪಿಗೆ ಇದೆಯೇ ಎಂದು ಕೇಳುತ್ತಿರುವ ಮಾಹಿತಿ ಇದೆ. ಒಪ್ಪಿಗೆ ಇಲ್ಲ ಅಂದರೆ […]

Advertisement

Wordpress Social Share Plugin powered by Ultimatelysocial