ಸಿ. ಎಚ್. ಭಾಗ್ಯ

ನಾನು ಭಾಗ್ಯ ಮೇಡಮ್ ಅವರನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಕಾರ್ಯಕ್ರಮಗಳಲ್ಲಿ ಮತ್ತು ಕನ್ನಡ ಭವನದಲ್ಲಿ ದೂರದಿಂದ ಕಂಡವನು. ಅವರು ಕರ್ನಾಟಕ ಸಾಹಿತ್ಯ ಅಕಾಡಮಿಯ ರಿಜಿಸ್ಟ್ರಾರ್ ಆಗಿದ್ದ ಸಮಯದಲ್ಲಿ ಹಲವು ವರ್ಷಗಳಿಂದ ಘೋಷಣೆ ಆಗದಿದ್ದ ಪ್ರಶಸ್ತಿಗಳು ಪುನಃ ಇತ್ಯರ್ಥಗೊಳ್ಳಲು ಬೇಕಾದ ಅಗತ್ಯ ವ್ಯವಸ್ಥೆ ತಂದವರು. ಅವರು ವ್ಯವಸ್ಥೆಗೊಳಿಸುತ್ತಿದ್ದ ಕಾರ್ಯಕ್ರಮಗಳಲ್ಲಿ ಒಂದು ಅಚ್ಚುಕಟ್ಟು ಕಂಗೊಳಿಸುತ್ತಿತ್ತು.
ಭಾಗ್ಯ ಅವರು ಫೇಸ್ಬುಕ್ ಮೂಲಕ ಪರಿಚಯವಾದ ನಂತರ ಅವರು ಹಿಂದಿ, ಉರ್ದು, ಗುಜರಾಥಿ, ಒಡಿಯಾ, ಬಾಂಗ್ಲಾ, ಇಂಗ್ಲಿಷ್ ಹೀಗೆ ಅನೇಕ ಭಾಷೆಗಳ ಕವಿತೆಗಳನ್ನು ಕನ್ನಡಕ್ಕೆ ತರುತ್ತಿರುವುದನ್ನು ಕಾಣುತ್ತಿದ್ದೇವೆ. ಇತ್ತೀಚೆಗೆ ಉಕ್ರೇನಿನ ನೊಂದ ಹೃದಯದ ಕವಿತೆಯೂ ಕಂಡಿತು. ಈ ಕವಿತೆಗಳಲ್ಲಿ ನೊಂದವರ ಕೂಗು, ಅಳಲಿದೆ. ಅಸಮಾನತೆಯಿಂದ ಸಮಾನತೆಯ ಬೆಳಕಿನೆಡೆಗೆ ಹಾಯುವ ನೋಟವಿದೆ. ಇವೆಲ್ಲದರ ಆಳದಲ್ಲಿ ಮಾನವೀಯತೆಯ ಕಡೆಗೆ ತುಡಿಯುವ ಅಂತರಾಳವಿದೆ.
ಇಂದು ಹುಟ್ಟುಹಬ್ಬ ಆಚರಿಸುತ್ತಿರುವ ಸಿ. ಎಚ್. ಭಾಗ್ಯ ಅವರಂತಹವರ ಉಪಸ್ಥಿತಿ ನಮ್ಮಂತಹವರ ಜೊತೆ ಇರುವುದೇ ನಮ್ಮ ಭಾಗ್ಯ.
ಆತ್ಮೀಯ ಹಿರಿಯರೂ, ಮಾನವೀಯ ಅಂತಃಕರಣದ ಜ್ಞಾನಿಗಳೂ ಆದ ಸಿ. ಎಚ್. ಭಾಗ್ಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಾಂಡವರ ಅಜ್ಞಾತವಾಸದ ಮುಕ್ತಾಯ. ಕೃಷ್ಣನ ಆಗಮನ. ಅಭಿಮನ್ಯುವಿನೊಂದಿಗೆ ಉತ್ತರೆಯ ವಿವಾಹ.

Mon Mar 28 , 2022
ಪಾಂಡವರ ಅಜ್ಞಾತವಾಸದ ಮುಕ್ತಾಯ. ಕೃಷ್ಣನ ಆಗಮನ. ಅಭಿಮನ್ಯುವಿನೊಂದಿಗೆ ಉತ್ತರೆಯ ವಿವಾಹ. ಮರುದಿನದ ಬೆಳಗು ಅತ್ಯಂತ ಸುಂದರವಾಗಿತ್ತು. ಪಾಂಡವರ ಪಾಲಿಗೆ ಅದು ಮಂಗಳದ ಮುಂಬೆಳಗು. ಅವರು ಎದ್ದು ಮಂಗಳಸ್ನಾನ ಮಾಡಿ ಅಲಂಕಾರಗಳೊಂದಿಗೆ ಓಲಗಶಾಲೆಗೆ ಬಂದರು. ಸೇವಕರು ಇವರನ್ನು ಕಂಡು ಅಚ್ಚರಿಗೊಂಡು ದೇವಲೋಕದವರೇ ಬಂದಿರುವರೆಂದು ಬಗೆದು ವಿರಾಟನ ಗಮನಕ್ಕೆ ತಂದರು. ವಿರಾಟನು ಸಕಲ ಪರಿವಾರದೊಂದಿಗೆ ಬಂದು ನೋಡಲು ಉತ್ತರನು ಎಲ್ಲರನ್ನೂ ಪರಿಚಯಿಸಿದನು. ವಿರಾಟ ಧರ್ಮಜನ ಕಾಲಿಗೆ ಬಿದ್ದು ಕ್ಷಮೆ ಕೇಳಿದನು. ಉತ್ತರೆಯನ್ನು ಅರ್ಜುನನಿಗೆ […]

Advertisement

Wordpress Social Share Plugin powered by Ultimatelysocial