ಕ್ಯಾಪ್ಟನ್ಸಿ ಫೈಟ್ ಬಿಸಿಸಿಐಗೆ ನುಂಗಲಾರದ ತುತ್ತಾಗಿದೆ

ಕ್ಯಾಪ್ಟನ್ಸಿ ಫೈಟ್ ಬಿಸಿಸಿಐಗೆ ನುಂಗಲಾರದ ತುತ್ತಾಗಿದೆ

ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಅನ್ನುವುದಕ್ಕೆ ಒಂದೊಂದೇ ಉದಾಹರಣೆಗಳು ಸಿಗುತ್ತಿವೆ. ರೋಹಿತ್ ಮತ್ತು ವಿರಾಟ್ ಕೊಹ್ಲಿ ನಡುವೆ ಭಿನ್ನಾಭಿಪ್ರಾಯ ಇತ್ತು ಅನ್ನುವ ಸುದ್ದಿ ಹಲವು ವರ್ಷಗಳಿಂದ ಇತ್ತು. ಆದರೆ ಇಬ್ಬರು ಆಟಗಾರರು ಆ ಬಗ್ಗೆ ತುಟಿಪಿಟಕ್ ಅಂದಿರಲಿಲ್ಲ.

ಆದರೆ ಈಗ ಕ್ಯಾಪ್ಟನ್ಸಿ ಶಿಫ್ಟ್ ಆದಮೇಲೆ ಭಾರತ ಕ್ರಿಕೆಟ್ ತಂಡದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ.

 ಆದರೆ, ರೋಹಿತ್ ಇಂಜುರಿಯಿಂದಾಗಿ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ನಾಯಕನಾಗಿ ಉತ್ತಮ ದಾಖಲೆ ಹೊಂದಿದ್ದರೂ ತನ್ನನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಕೊಹ್ಲಿಗೆ ಬೇಸರ ಉಂಟು ಮಾಡಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಹೀಗಾಗಿ ವೈಯಕ್ತಿಕ ಕಾರಣಗಳನ್ನು ನೀಡಿ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ವಿರಾಟ್ ಕೊಹ್ಲಿ ಹೊರಗುಳಿದಿದ್ದಾರೆ.

ಈ ಹಿಂದೆ ನಾಯಕನ ಸ್ಥಾನದಿಂದ ಕೆಳಗಿಳಿಯಿರಿ ಎಂದು ಬಿಸಿಸಿಐ ಕೊಹ್ಲಿ ಅವರಿಗೆ 48 ಗಂಟೆಗಳ ಕಾಲಾವಕಾಶ ನೀಡಿತ್ತು ಎಂದು ಹೇಳಲಾಗಿತ್ತು. ಆದರೆ ವಿರಾಟ್ ಇದಕ್ಕೆ ಪ್ರತಿಕ್ರಿಯೆ ನೀಡದ ಕಾರಣ ಮುಂದಿನ ಅವಧಿಯಲ್ಲೇ ಹೊಸ ನಾಯಕನ ಘೋಷಣೆ ಆಗಿತ್ತು. ಇದು ಕೊಹ್ಲಿಗೆ ಬೇಸರ ತರಿಸಿದೆ ಎಂದು ಹೇಳಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ಸಮಯದಲ್ಲಿ ವಹಿಸಬೇಕಾದ ಮುನ್ನೇಚ್ಚರಿಕಾ ಕ್ರಮಗಳ ಬಗ್ಗೆ ಶಾಲಾ ಮಕ್ಕಳಿಗೆ ಸೂಚನೆ

Fri Dec 17 , 2021
ಶತಮಾನದ ಅಭಿಮಾನ ಬೆಳವಾಡಿ ಶಾಲೆಗೆ ಕಾಂಗ್ರೆಸ್ ಮುಖಂಡರು ಮತ್ತು ಖ್ಯಾತ ಮಕ್ಕಳ ತಜ್ಞರಾದ ಡಾಕ್ಟರ್ ದಿನೇಶ್ ಭೈರೇಗೌಡ ಭೇಟಿನೀಡಿ , ಮಕ್ಕಳ ಮನೆಯ ಪುಟಾಣಿಗಳಿಗೆ ಕಪ್ಪು-ಬಿಳುಪು VKC ಶೂಗಳು ಹಾಗೂ‌ ಓಆರ್ ಸ್‌ ಉಡುಗೊರೆಯಾಗಿ ನೀಡಿದರು.ಶಾಲೆಯ ಕಾರ್ಯಚಟುವಟಿಕೆಗಳ ಮತ್ತು ಪ್ರಗತಿ ಸಂಬಂಧಿಸಿದಂತೆ ಶಾಲಾ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಮತ್ತು ಹಳೆಯ ವಿದ್ಯಾರ್ಥಿಗಳೊಂದಿಗೆ ಸುದೀರ್ಘ ಸಂವಾದ ನಡೆಸಿದ ಅವರು, ಕೊರೋನಾದ ಈ ಕಾಲದಲ್ಲಿ ಮಕ್ಕಳು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಮನದಟ್ಟಾಗುವಂತೆ ಸರಳವಾಗಿ […]

Advertisement

Wordpress Social Share Plugin powered by Ultimatelysocial