ಭಾರತದಲ್ಲಿ 2022ರ Audi Q7 ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ ̤

 

ಆಡಿ ಇಂಡಿಯಾ  ಕಂಪನಿಯು ಹೊಸ ಕ್ಯೂ7 ಫೇಸ್‌ಲಿಫ್ಟ್ ಎಸ್‍ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಆಡಿ ಕ್ಯೂ7 ಫೇಸ್‌ಲಿಫ್ಟ್ ( ಕ್ಯೂ7 ) ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.79.99 ಲಕ್ಷವಾಗಿದೆ.ಆಡಿ ಕಂಪನಿಯು 2022ರ ಕ್ಯೂ7 ಫೇಸ್‌ಲಿಫ್ಟ್ ಎಸ್‍ಯುವಿಯ ಖರೀದಿಗಾಗಿ ಈಗಾಗಲೇ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ, ಈ ಐಷಾರಾಮಿ ಎಸ್‍ಯುವಿಯನ್ನು ಖರೀದಿಸಲು ಬಯಸುವವರು ಟೋಕನ್ ಮೊತ್ತ ರೂ,5 ಲಕ್ಷ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು.ಆಡಿ ಕ್ಯೂ7 ಫೇಸ್‌ಲಿಫ್ಟ್ ಅನ್ನು ಪ್ರೀಮಿಯಂ ಪ್ಲಸ್ ಮತ್ತು ಟೆಕ್ನಾಲಜಿ ಸೇರಿದಂತೆ ಎರಡು ರೂಪಾಂತರಗಳಲ್ಲಿ ನೀಡಲಾಗುತ್ತದೆ. ಇದು ಸಂಪೂರ್ಣವಾಗಿ ನಾಕ್ಡ್ ಡೌನ್ ( ಸಿ ಕೆ ಡಿ) ಯುನಿಟ್ ಆಗಿ ಭಾರತಕ್ಕೆ ಬರುತ್ತದೆ ಮತ್ತು ಇದನ್ನು ಔರಂಗಾಬಾದ್‌ನಲ್ಲಿರುವ ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ   ಸ್ಥಾವರದಲ್ಲಿ ತಯಾರಿಸಲಾಗುವುದು.ಈ ಎರಡು ರೂಪಾಂತರಗಳಲ್ಲಿ ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನಗಳನ್ನು ಒಳಗೊಂಡಿರುತ್ತದೆ. ನವೀಕರಿಸಿದ ಎಸ್‍ಯುವಿಯಲ್ಲಿ 3.0-ಲೀಟರ್, ಟ್ವಿನ್-ಟರ್ಬೋಚಾರ್ಜ್ಡ್, ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 335 ಬಿಹೆಚ್‍ಪಿ ಪವರ್ ಮತ್ತು 500 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ̤ಈ ಎಂಜಿನ್ ನೊಂದಿಗೆ 8-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಹೊಸ ಕ್ಯೂ5 ನಂತೆ ಕ್ಯೂ7 ಕೂಡ ಮೈಲ್ಡ್ -ಹೈಬ್ರಿಡ್ ಸಿಸ್ಟಂ ಅನ್ನು ಪಡೆಯುತ್ತದೆ, ಇದು 48-ವೋಲ್ಟ್ ಎಲೆಕ್ಟ್ರಿಕ್ ಮೋಟಾರು, ಲಿಥಿಯಂ-ಐಯಾನ್ ಬ್ಯಾಟರಿ ಮತ್ತು ಬೆಲ್ಟ್ ಆಲ್ಟರ್ನೇಟರ್ ಸ್ಟಾರ್ಟರ್ ( ಬಸ್) ಅನ್ನು ಒಳಗೊಂಡಿರುತ್ತದೆ. ಇನ್ನು ಈ ಹೊಸ ಆಡಿ ಕ್ಯೂ7 ಫೇಸ್‌ಲಿಫ್ಟ್ ಎಸ್‍ಯುವಿಯು 250 ಕಿಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ, ಬ್ರ್ಯಾಂಡ್‌ನ ಕ್ವಾಟ್ರೊ ಆಲ್-ವೀಲ್-ಡ್ರೈವ್ ಸಿಸ್ಟಂ ಸಹ ಈ ಎಸ್‍ಯುವಿಯಲ್ಲಿ ನೀಡಲಾಗಿದೆ.ಈ ಹೊಸ ಆಡಿ ಕ್ಯೂ7 ಫೇಸ್‌ಲಿಫ್ಟ್‌ನ ಎಂಟ್ರಿ ಲೆವೆಲ್ ಪ್ರೀಮಿಯಂ ಪ್ಲಸ್ ರೂಪಾಂತರವು 19-ಇಂಚಿನ ಅಲಾಯ್ ವ್ಹೀಲ್ ಗಳು, ಎಂಟು ಏರ್‌ಬ್ಯಾಗ್‌ಗಳು, ಪನರೋಮಿಕ್ ಸನ್‌ರೂಫ್, ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಅಡಾಪ್ಟಿವ್ ಏರ್ ಸಸ್ಪೆನ್ಷನ್, ಆಂಬಿಯೆಂಟ್ ಲೈಟಿಂಗ್ ಮತ್ತು ಎಲೆಕ್ಟ್ರಿಕಲಿ-ಹೊಂದಾಣಿಕೆ ಸ್ಟೀರಿಂಗ್ ವ್ಹೀಲ್ ಅನ್ನು ಒಳಗೊಂಡಿದೆ.ಇದರೊಂದಿಗೆ ನಾಲ್ಕು- ಮುಂಭಾಗದ ಸೀಟುಗಳಿಗೆ ಲಂಬೂರ್ ಸಂಪೂರ್ಟ್, ಪಾರ್ಕಿಂಗ್ ಅಸಿಸ್ಟ್ ಜೊತೆಗೆ ಕ್ರೂಸ್ ಕಂಟ್ರೋಲ್, ಫ್ಹೋರ್ ಜೋನ್ ಕಂಟ್ರೋಲ್, ಪವರ್-ಹೊಂದಾಣಿಕೆ ಮುಂಭಾಗದ ಸೀಟುಗಳು ಮತ್ತು ಡ್ರೈವರ್ ಸೀಟ್‌ಗಾಗಿ ಮೆಮೊರಿ ಫಂಕ್ಷನ್, ವರ್ಚುವಲ್ ಕಾಕ್‌ಪಿಟ್ ಮತ್ತು ಲೇನ್ ಡಿಪರ್ಚರ್ ಎಕ್ಸಿಟ್ ಅನ್ನು ಹೊಂದಿದೆ .

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಿಜನಾ..ಅಪ್ಪು ಜೇಮ್ಸ್‌ ಬಿಡುಗಡೆ ಟೈಮ್ನಲ್ಲಿ ಪರಭಾಷಾ ಸಿನಿಮಾಗಳಿಗಿಲ್ವಾ ಎಂಟ್ರಿ ?|Appu | Snk|

Thu Feb 3 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://plಇay.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial