ಲಾಕ್‌ಡೌನ್‌ನಿಂದ ಜನರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವುದಂತು ಸತ್ಯ. ಬೇರೆ ಊರುಗಳಿಗೆ ಕೂಲಿ ಕೆಲಸಕ್ಕೆ ಬಂದಿದ್ದ ಎಷ್ಟೋ ಕುಟುಂಬಗಳು ಜೀವನ ಸಾಗಿಸಲು ಪರದಾಡುತ್ತಿದ್ದಾರೆ. ರಾಮನಗರ ಜಿಲ್ಲೆ ಕನಕಪುರ ಗ್ರಾಮದ ಚಂದ್ರ ಎಂಬಾತನ ಮಡದಿ ಕವಿತಾ ಅನಾರೋಗ್ಯದಿಂದ ಬಳಲುತ್ತಿದ್ದ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಲಾಕ್‌ಡೌನ್‌ನಿಂದ ಶವ ಸಂಸ್ಕಾರಕ್ಕೆ ಸ್ವಗ್ರಾಮ್‌ಕ್ಕೆ ತೆರಳಲು ಆಗದ ಕಾರಣ ಕುಶಾಲನಗರದ ರುದ್ರಭೂಮಿಯಲ್ಲಿ ಮಹಿಳೆ ಅಂತ್ಯಸAಸ್ಕಾರ ನೇರವೇರಿಸಲಾಯಿತು. ರಕ್ಷಣಾ ವೇದಿಕೆ ಉಮೇಶ್, ಸಂದೀಪ್, ಯೂತ್ ಕಮಿಟ್ ಕಲೀಲ್ ಕ್ರಿಯೇಟಿವ್ ಶವ […]

ಕೊಡಗಿನಲ್ಲಿ ಕೊರೊನಾ ತಕ್ಕ ಮಟ್ಟಿಗೆ ಕಡಿಮೆಯಾಯ್ತಪ್ಪಾ ಅಂದುಕೊಳ್ಳುವುಷ್ಟರಲ್ಲಿಯೇ ಇನ್ನೊಂದು ಮಾಹಾಮಾರಿ ಬಂದು ವಕ್ರಿಸಿದೆ. ಹೌದು ಮಡಿಕೇರಿ ತಾಲೂಕಿನ ಸುಂಟಿಕೊಪ್ಪದ ಇಬ್ಬರಲ್ಲಿ ಡೆಂಗ್ಯೂ ಪ್ರಕರಣ ಕಾಣಿಸಿಕೊಂಡಿದೆ. ಸದ್ಯ ಚಿಕಿತ್ಸೆಯಿಂದ ಇಬ್ಬರು ಚೇತರಿಸಿಕೊಂಡಿದ್ದಾರೆ. ಜನರನ್ನು ಎಚ್ಚೆತ್ತುಕೊಳ್ಳುವಂತೆ ಜಿಲ್ಲಾಡಳಿತ ಮನವಿ ಮಾಡಿದ್ದು, ಜಿಲ್ಲಾದ್ಯಂತ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಡಿಎಚ್‌ಒ ಡಾ. ಮೋಹನ್ ಮಾಹಿತಿ ನೀಡಿದ್ದಾರೆ.

ಕೋವಿಡ್-೧೯ ಹಿನ್ನೆಲೆ ಬಿಬಿಎಂಪಿ ವ್ಯಾಪ್ತಿಯ ನಾಗರೀಕರು ವೈದ್ಯರೊಂದಿಗೆ ನಿಖರ ಮಾಹಿತಿ ಮತ್ತು ಸಲಹೆ ಪಡೆಯುವ ಉದ್ದೇಶದಿಂದ ಪಾಲಿಕೆಯು ಬ್ಲೂಮ್ ರ‍್ಗ್ ಫಿಲಾಂಥ್ರಪಿಸ್ ಹಾಗೂ ವೈಟಲ್ ಸ್ಟ್ರಾಟಜೀಸ್ ಸಹಯೋಗದಲ್ಲಿ “ಬಿಬಿಎಂಪಿ ಟೆಲಿ ಹೆಲ್ತ್ ಲೈನ್” ಸೇವೆಗೆ ಮಹಾಪೌರರು ಹಾಗೂ ಆಯುಕ್ತರು ಅಧಿಕೃತ ಚಾಲನೆ ನೀಡಿದರು. ಕೋವಿಡ್-೧೯ ಹಿನ್ನೆಲೆ ನಗರದ ನಾಗರೀಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಬಿಬಿಎಂಪಿಯು ಟೆಲಿ ಹೆಲ್ತ್ ಲೈನ್” ಆರಂಭಿಸಲಾಗಿದ್ದು, ೦೭೪೪೭೧೧೮೯೪೯ಗೆ ಉಚಿತವಾಗಿ ಕರೆ ಮಾಡಿ ಅಗತ್ಯ ಮಾಹಿತಿಯನ್ನು […]

ಬಳ್ಳಾರಿ: ಕೊರೊನಾದತ್ತಲೇ ಎಲ್ಲರ ಗಮನ ಇರುವಾಗ, ಗೊತ್ತೇ ಆಗದೆ ಡೆಂಗ್ಯೂ ಕಾಲಿಟ್ಟಿದೆ. ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ತಗ್ಗಿತು ಎಂದು ನಿಟ್ಟುಸಿರುಬಿಡುವಷ್ಟರಲ್ಲಿ ಇದೀಗ ಡೆಂಗ್ಯೂ ತಾಂಡವವಾಡುತ್ತಿದೆ. ಕೊರೊನಾ ಭೀತಿ ಜೊತೆಜೊತೆಗೆ ಡೆಂಗ್ಯೂ ಶುರುವಾಗಿದ್ದು, ಜನರು ಆತಂಕಗೊಂಡಿದ್ದಾರೆ.  ಬಳ್ಳಾರಿ ಜಿಲ್ಲೆಯಾದ್ಯಂತ ೧೧೦ಕ್ಕೂ ಹೆಚ್ಚು ಡೆಂಗ್ಯೂ ಪಾಸಿಟಿವ್ ಪ್ರಕರಣಗಳು ದಾಖಲಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ. ಒಂದು ವರ್ಷದ ಅವಧಿಗೆ ಬರುತ್ತಿದ್ದ ಪ್ರಕರಣಗಳು ಮೂರು ತಿಂಗಳಲ್ಲೇ ಪತ್ತೆಯಾಗಿವೆ. ಕೊರೊನಾದೊಂದಿಗೆ ಡೆಂಗ್ಯೂ ಕೂಡ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗುತ್ತಿದೆ. ಬಳ್ಳಾರಿ, […]

ನವದೆಹಲಿ: ೨೪ ಗಂಟೆಯಲ್ಲಿ ದೇಶದಲ್ಲಿ ೧೮,೬೦೧ ಕೋವಿಡ್ ಸೋಂಕು ಪ್ರಕರಣಗಳ ಪೈಕಿ ೩,೨೫೧ ಮಂದಿ ಗುಣಮುಖರಾಗಿದ್ದಾರೆ. ವಿವಿಧ ರಾಜ್ಯಗಳಲ್ಲಿ ೧೪,೭೫೯ ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ೫೯೦ ಮಂದಿ ಮೃತಪಟ್ಟಿದ್ದಾರೆ. ಮಹಾರಾಷ್ಟದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದ್ದು, ಒಟ್ಟು ೪,೬೬೬ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ. ಹಾಗೆಯೇ ದೆಹಲಿಯಲ್ಲಿ ೨,೦೮೧ ಪ್ರಕರಣಗಳು, ೪೭ ಮಂದಿ ಸಾವನ್ನಪ್ಪಿದ್ದು, ತಮಿಳುನಾಡಿನಲ್ಲಿ ೧,೫೭೬ ಪ್ರಕರಣಗಳು, ೧೭ ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ […]

ನವದೆಹಲಿ: ನವದೆಹಲಿಯಲ್ಲಿರುವ ರಾಷ್ಟ್ರಪತಿ ಭವನದ ೧೦೦ಕ್ಕೂ ಅಧಿಕ ಸಿಬ್ಬಂದಿಗಳಿಗೆ ಕ್ವಾರಂಟೈನ್‌ನಲ್ಲಿರಲು ಸೂಚನೆ ನೀಡಲಾಗಿದೆ. ನಾಲ್ಕು ದಿನಗಳ ಹಿಂದೆ ಇಲ್ಲಿನ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ರಾಷ್ಟ್ರಪತಿ ಭವನದ ಸ್ವಚ್ಛತೆಯ ಕಾರ್ಯ ನಿರ್ವಹಣೆ ಮಾಡುವ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಇದರಿಂದಾಗಿ ಸ್ವಚ್ಛತೆಯ ಕೆಲಸ ಮಾಡುತ್ತಿದ್ದ ಎಲ್ಲರಿಗೂ ಕೇಂದ್ರ ದೆಹಲಿಯ ಪ್ರದೇಶದಲ್ಲಿ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗಿದೆ. ಕಾರ್ಯದರ್ಶಿ ಹಂತದ ಅಧಿಕಾರಿಗಳು, ಅವರ ಕುಟುಂಬ ಸದಸ್ಯರಿಗೆ ಹೋಂ ಕ್ವಾರಂಟೈನ್‌ನಲ್ಲಿರಲು ಸೂಚನೆ ನೀಡಲಾಗಿದೆ. […]

ಇಟಲಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ತರಲು ಅಲ್ಲಿನ ಸರ್ಕಾರ ಹರ ಸಾಹಸಪಟ್ಟಿತು. ಮಾ.13ರಂದು ತಿರುವನಂತಪುರದ ಕೇರಳಕ್ಕೆ ಭೇಟಿ ಕೊಟ್ಟಿದ್ದರು. ಆಗ ಅವರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ಆದರೆ, ಟೋನಿಜ್  ಈಗ ಕೊರೊನಾ  ಸೋಂಕಿನಿಂದ  ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.  ಅವರನ್ನು ಸೋಮವಾರ ಆಸ್ಪತ್ರೆಯ ಸಿಬ್ಬಂದಿ ಮತ್ತು ಕೇರಳ ಸರ್ಕಾರ ಸನ್ಮಾನ ಮಾಡಿ ಬೀಳ್ಕೊಟ್ಟಿದೆ. ಅವರು ಬೆಂಗಳೂರಿಗೆ ತೆರಳಲು ಕೇರಳ ಸರ್ಕಾರವೇ ಸಹಾಯ ಮಾಡಿದೆ.

ಬೆಂಗಳೂರು : ರಾಜ್ಯದಲ್ಲಿ ಮಾರಕ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಜನತೆ ತಲ್ಲಣಗೊಂಡಿದ್ದಾರೆ. ದಿನೇ ದಿನೇ ಸೋಂಕು ಪೀಡಿತರ ಸಂಖ್ಯೆ ಹೆಚ್ಚುತ್ತಿರುವುದು ಮತ್ತಷ್ಟು ಆತಂಕ ತಂದೊಡ್ಡಿದೆ. ರಾಜ್ಯದಲ್ಲಿ ಇಂದು ಮತ್ತೆ ಐವರಲ್ಲಿ ಕೊರೊನಾ ಸೋಂಕು ಪಾಸಿಟಿವ್ ಬಂದಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 395ಕ್ಕೆ ಏರಿಕೆಯಾಗಿದೆ. ಈ ಕುರಿತು ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ನಿಂದ ತಿಳಿದು ಬಂದಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 395ಕ್ಕೆ ಏರಿಕೆಯಾಗಿದೆ. ಈ […]

Advertisement

Wordpress Social Share Plugin powered by Ultimatelysocial