ಯುಎಸ್ಎ: ಕೊರೊನಾ ವೈರಸ್ ನಿಂದ ಲಾಕ್ ಡೌನ್ ನಲ್ಲಿಯೂ ಸಹ ಲಾಭ ಪಡೆದಿರುವ ಕಂಪನಿಗಳು ಕೇವಲ ಬೆರಳೆಣಿಕೆಯಷ್ಟೇ. ನೆಟ್ಫ್ಲಿಸ್ ನಲ್ಲಿನ ಹೊಸ ಹಾಗೂ ವಿಭಿನ್ನ ಕಂಟೆಂಟ್ ನಿಂದ ಓವರ್ ದಿ ಟಾಪ್ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಅತಿ ಹೆಚ್ಚು ಚಂದಾದಾರರನ್ನು ಕೇವಲ ಒಂದೇ ತಿಂಗಳಲ್ಲಿ ದುಪ್ಪಟ್ಟಾಗಿಸಿರುವುದು ಅಚ್ಚರಿಯ ವಿಷಯ. ಸುಮಾರು ೭೦ ಲಕ್ಷ ಹೊಸ ಚಂದಾದಾರರು ಸೇರ್ಪಡೆ ಆಗುವುದಾಗಿ  ಅಂದಾಜು ಮಾಡಿದಾರರು ಸಹ ಲಾಕ್ ಡೌನ್ ಪರಿಸ್ಥಿತಿಯಿಂದ ಸುಮಾರು ೧ ಕೋಟಿ […]

ವಾಷಿಂಗ್ಟನ್: ಕೊರೊನಾ ಸೊಂಕಿನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಅಮೆರಿಕ, ಜಗತ್ತಿನಲ್ಲಿಯೇ ಅತ್ಯಧಿಕ ಕೋವಿಡ್-೧೯ ಪ್ರಕರಣಗಳನ್ನು ಹೊಂದಿದೆ. ಕಳೆದ ೨೪ ಗಂಟೆಗಳಲ್ಲಿ ಸೊಂಕಿನಿಂದ ೨,೭೦೦ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಜಾನ್ಸ್ ಹಾಪ್‌ಕಿನ್ಸ್ ಯೂನಿವರ್ಸಿಟಿ ಮಾಹಿತಿ ಪ್ರಕಾರ ಒಂದೇ ದಿನದಲ್ಲಿ ೨,೭೫೧ ಮಂದಿ ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದು, ೪೪,೮೫೪ ಜನ ಸಾವಿಗೀಡಾಗಿದ್ದಾರೆ. ಬಿಎನ್‌ಒ ನ್ಯೂಸ್ ವೆಬ್‌ಸೈಟ್ ಪ್ರಕಾರ, ಜಗತ್ತಿನಾದ್ಯಂತ ೨೪,೭೯,೪೯೮ ಪ್ರಕರಣಗಳು ದಾಖಲಾಗಿದ್ದು, ಸೊಂಕಿನಿಂದ ೧,೭೦,೩೨೨ ಮಂದಿ ಮೃತಪಟ್ಟಿದ್ದಾರೆ. ಹಾಗೂ ೬,೧೨,೬೮೧ ಜನ […]

ನ್ಯೂಯಾರ್ಕ್‌: ಅಮೆರಿಕ ರಾಷ್ಟ್ರೀಯ ವಿಜ್ಞಾನ ಮಂಡಳಿಗೆ ಭಾರತೀಯ ಮೂಲದ ವಿಜ್ಞಾನಿ ಸುದರ್ಶನಂ ಬಾಬು ಅವರನ್ನು ನೇಮಕ ಮಾಡುವಂತೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆದೇಶ ಹೊರಡಿಸಿದ್ದಾರೆ. ಈ ಮೂಲಕ, ವಿಶ್ವವಿಖ್ಯಾತವಾಗಿರುವ ಈ ಮಂಡಳಿಗೆ ಆಯ್ಕೆ ಆಗಿರುವ ಮೂರನೆಯ ಭಾರತೀಯರು ಸುದರ್ಶನಂ ಎನಿಸಿಕೊಂಡಿದ್ದಾರೆ. ಪರಿಸರ ವ್ಯವಸ್ಥೆಯಲ್ಲಿ ಸಂಶೋಧನೆ ಕೈಗೊಳ್ಳುವುದು, ಕೈಗಾರಿಕೆಗಳ ಉತ್ಪಾದನೆಯ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವುದರ ಜತೆಗೆ, ಅದಕ್ಕೆ ಸಂಬಂಧಿಸಿದಂತೆ ಪರಿಹಾರಗಳನ್ನು ಒದಗಿಸುವುದು ಹಾಗೂ ಇಂಧನ ಇಲಾಖೆಯ ಉತ್ಪಾದನಾ ಸಾಮರ್ಥ್ಯದ ಹೆಚ್ಚಳ […]

ನವದೆಹಲಿ:  ಕೊರೊನಾ ವೈರಸ್ ಸೋಂಕಿನಿಂದ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಅಮೆರಿಕದ ನಾಗರಿಕರ ಉದ್ಯೋಗ ರಕ್ಷಣೆಗಾಗಿ ವಲಸಿಗರ ಪ್ರವೇಶಕ್ಕೆ ಡೊನಾಲ್ಟ್ ಟ್ರಂಪ್ ನಿರ್ಬಂಧ ಹೇರಲು ನಿರ್ಧರಿಸಿದ್ದಾರೆ. ಕೊವಿಡ್‌ನ ದಾಳಿ ಎದುರಿಸುತ್ತಿರುವ ಸಮಯದಲ್ಲಿ ನಮ್ಮ ಅಮೆರಿಕಾದ ಪ್ರಜೆಗಳ ಉದ್ಯೋಗ ಕಾಪಾಡುವುದು ಅವಶ್ಯವಾಗಿದೆ. ಅಮೆರಿಕಕ್ಕೆ ವಲಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸುವ ಕಾರ್ಯದ ಆದೇಶಕ್ಕೆ ಸಹಿ ಮಾಡಲಿದ್ದೇನೆ ಎಂದು ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ. ಕಳೆದ ತಿಂಗಳಿನಿಂದ ೨.೨ ಕೋಟಿ ಅಮೆರಿಕನ್ನರು ನಿರುದ್ಯೋಗ ಸೌಲಭ್ಯಗಳನ್ನು ಬಯಸಿದ್ದಾರೆ. ೧೦ ಲಕ್ಷಜನರು […]

ಪುಟಾಣಿ ಮಕ್ಕಳಿಂದ ಹಿಡಿದು ವೃದ್ಧರು ಕೂಡ ತುಂಬ ಖುಷಿ ಖುಷಿಯಿಂದ ನೋಡುತ್ತಿದ್ದ ಟಾಮ್ ಅಂಡ್ ಜರ‍್ರಿ ಕಾಮಿಡಿ ಸಿರೀಸ್  ನಿರ್ದೇಶಕ ಜೆನಿ ಡಿಚ್,  ಅಮೆರಿಕಾದಲ್ಲಿ ಮೃತಪಟ್ಟಿದ್ದಾರೆ. ಇಬ್ಬರು ಪತ್ನಿಯರು, ಮೂರು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ. ಇವರು ಆನಿಮೇಶನ್‌ನಲ್ಲಿ ಡಿಚ್ ಆಸ್ಕರ್ ಪ್ರಶಸ್ತಿ ಪಡೆದಿದ್ದರು.  

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಜನರಿಗೆ ಇಂದು ಭಾನುವಾರ ಅಚ್ಚರಿ ಕಾದಿತ್ತು. ಪ್ರಯಾಣಿಕರನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದವರಿಗೆ ನಿಜಕ್ಕೂ ಪರಮಾಶ್ಚರ್ಯ. ಇಂದು ಐಶ್ವರ್ಯಾ ರೈ ಬಚ್ಚನ್ ಹಾಗೂ ಪತಿ ಅಭಿಷೇಕ್ ಬಚ್ಚನ್ ಮಂಗಳೂರಿಗೆ ಆಗಮಿಸಿದ್ದರು. ಮಂಗಳೂರು ಮೂಲದವರಾಗಿರುವ ಐಶ್ವರ್ಯಾ ರೈ ತನ್ನ ಚಿಕ್ಕಪ್ಪನ ಶ್ರಾದ್ಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಂಗಳೂರಿಗೆ ಆಗಮಿಸಿದ್ದಾರೆ.

Advertisement

Wordpress Social Share Plugin powered by Ultimatelysocial