ಕೊರೊನಾ ವೈರಸ್‌ನ ಓಮಿಕ್ರಾನ್ ರೂಪಾಂತರವು ಯುನೈಟೆಡ್ ಸ್ಟೇಟ್ಸ್ನಲ್ಲಿ ಹೆಚ್ಚು ವೇಗವಾಗಿ ಹರಡಲಿದೆ ಮತ್ತು ತೀವ್ರ ಅನಾರೋಗ್ಯ ಮತ್ತು ಸಾವಿನ ಚಳಿಗಾಲವು ಲಸಿಕೆ ಹಾಕದವರಿಗೆ ಕಾಯುತ್ತಿದೆ ಎಂದು ಯುಎಸ್ ಅಧ್ಯಕ್ಷ ಜೋ ಬಿಡೆನ್ ಗುರುವಾರ ಎಚ್ಚರಿಸಿದ್ದಾರೆ.ಲಸಿಕೆ ಹಾಕದವರಿಗೆ ನಾವು ತೀವ್ರ ಅನಾರೋಗ್ಯ ಮತ್ತು ಸಾವಿನ ಚಳಿಗಾಲವನ್ನು ನೋಡುತ್ತಿದ್ದೇವೆ ಎಂದು ಹೇಳಿದರು.ಕನಿಷ್ಠ 36 ರಾಜ್ಯಗಳು ಒಮಿಕ್ರಾನ್ ಪ್ರಕರಣಗಳನ್ನು ದೃಢಪಡಿಸಿವೆ ಎಂದು ರೋಗ ನಿಯಂತ್ರಣ ಕೇಂದ್ರದ ಅಧಿಕಾರಿಗಳು ಬುಧವಾರ ತಿಳಿಸಿದರು.ನೀವು ಲಸಿಕೆಯನ್ನು ಹೊಂದಿದ್ದರೆ ಮತ್ತು […]

ರಾಜ್ಯದಲ್ಲಿ ಹೊಸದಾಗಿ 4.11 ಲಕ್ಷ ಪಡಿತರ ಚೀಟಿಗಳನ್ನು ಮಂಜೂರು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು. ‘2.66 ಲಕ್ಷ ಆದ್ಯತಾ ವಲಯದ  ಮತ್ತು 1.45 ಎಪಿಎಲ್ ಪಡಿತರ ಚೀಟಿಗಳಿಗೆ ಅನುಮೋದನೆ ನೀಡಿದ್ದೇನೆ. ಇದರಿಂದ 4.11 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ’ ಎಂದು ಹೇಳಿದರು.

ಭ್ರಷ್ಟಾಚಾರ ನಿರ್ಮೂಲನೆ ಜಾಗೃತಿ ಸಪ್ತಾಹ ಕಾರ್ಯಕ್ರಮವನ್ನು ಚಾಮರಾಜನಗರ  ಜಿಲ್ಲೆ ಯಳಂದೂರಿನಲ್ಲಿ  ಆಯೋಜಿಸಲಾಯಿತು ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ನೀಲಕಂಠಸ್ವಾಮಿ  ಮಾತನಾಡಿ ಇಂದು ನಮ್ಮ ಕಾಲೇಜಿನ ವತಿಯಿಂದ ದಿನನಿತ್ಯ ನಡೆಯುವ ಲಂಚ ರಹಿತ ಆಡಳಿತಾತ್ಮಕ ನಿಲುವು ತರುವ ಮಟ್ಟದಲ್ಲಿ ನಮ್ಮ ಕಾಲೇಜು ಶಿಕ್ಷಣ ಇಲಾಖೆ ಪ್ರತಿವರ್ಷ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಭ್ರಷ್ಟಾಚಾರ ನಿರ್ಮೂಲನ ಜಾಥ ಕಾರ್ಯಕ್ರಮವನ್ನು ಮಾಡಲಾಗುತ್ತದೆ ಎಂದು ಹೇಳಿದರು.

ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್​​ನಲ್ಲಿರುವ ಸರ್ದಾರ್​ ಮೊಹಮ್ಮದ್​ ದೌದ್​ ಖಾನ್​ ಮಿಲಿಟರಿ ಆಸ್ಪತ್ರೆ ಸಮೀಪ ಗುಂಡಿನ ಸದ್ದು ಕೇಳಿ ಬಂದಿದೆ ಹಾಗೂ ಕನಿಷ್ಟ ಎರಡು ಸ್ಫೋಟ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ.ಸ್ಫೋಟ ನಡೆದ ಸ್ಥಳದ ಬಳಿ ವಾಸವಿದ್ದ ನಿವಾಸಿಗಳು ದಟ್ಟ ಹೊಗೆಯಿಂದ ಆವೃತವಾದ ಫೋಟೋಗಳನ್ನು ಶೇರ್​ ಮಾಡುತ್ತಿದ್ದಾರೆ.ಈ ಸ್ಫೋಟದ ಸಂಬಂಧ ತಾಲಿಬಾನ್​ ಸರ್ಕಾರ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಇಲ್ಲಿಯವರೆಗೆ ಯಾವುದೇ ಸಂಘಟನೆಗಳು ಸ್ಫೋಟದ ಹೊಣೆಯನ್ನು ಹೊತ್ತಿಲ್ಲ ಎಂದು ತಿಳಿದುಬಂದಿದೆ.

  ಇತ್ತಿಚಿನ ದಿನಗಳಲ್ಲಿ ಎಲ್ಲಾ ಬಾಷೆಯಲ್ಲಿ ಹಲವು ಆಲ್ಬಮ್ ಸಾಂಗ್ಸ್ ಬರುವುದು ಕಾಮನ್ ಆಗಿದೆ.ಆದರೆ ಕನ್ನಡದಲ್ಲೂ ಆಲ್ಬಂ ಸಾಂಗ್ ಗೆ ಎನು ಕಮ್ಮಿ ಇಲ್ಲಾ ಗುರು ಎಂಬತೆ ಈ ಜನನದಂಪತಿಗಳು ಇದೀಗ ಹೊಸ ಹಾಡನ್ನ ಎಲ್ಲೆಡೆ ಪರಿಚಯಿಸಿದ್ದಾರೆ.ಇನ್ನು ಸಾಂಡಲ್ ವುಡ್ ನಲ್ಲಿ ಚಂದನ ಶೆಟ್ಟಿ ಅವರ ಹಲವು ಹಿಟ್ rap ಹಾಡುಗಳು ಇವೆ .ಆದರೆ ಅದೇ ರೀತಿಯ ಹಾಡುಗಳಿಗೆ ಜೋಶ ನಿಡಲು ಇದೀಗ ಮತ್ತೊಬ್ಬ ಗಾಯಕಿ ಸಿಕ್ಕಿರುವುದು ಹೆಮ್ಮೆಯ ವಿಚಾರ […]

ಮೈಸೂರು, ನವೆಂಬರ್ 1: 2021ರ ಮೈಸೂರು ದಸರಾ ಮಹೋತ್ಸವಕ್ಕೆ ಸರ್ಕಾರ 6 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಇದರಲ್ಲಿ 5,42,07,679 ರೂ. ಖರ್ಚಾಗಿದ್ದು, 57 ಲಕ್ಷ ರೂಪಾಯಿಗೂ ಹೆಚ್ಚು ಹಣ ಉಳಿತಾಯವಾಗಿದೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಖರ್ಚು- ವೆಚ್ಚಗಳ ಮಾಹಿತಿ ಬಿಡುಗಡೆ ಮಾಡಿದರು.ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಇತಿಹಾಸದಲ್ಲಿ ಎರಡನೇ ಬಾರಿಗೆ ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ಅನುದಾನದ ಖರ್ಚು- ವೆಚ್ಚಗಳ ಸಂಪೂರ್ಣ ಮಾಹಿತಿಯನ್ನು […]

ಪಾಕಿಸ್ತಾನದ ಭಯೋತ್ಪಾದಕನೊಬ್ಬನನ್ನ ರಾಷ್ಟ್ರ ರಾಜಧಾನಿಯ ಲಕ್ಷ್ಮಿ ನಗರದಲ್ಲಿ ದೆಹಲಿ ಪೊಲೀಸರ ವಶಕ್ಕೆ ಸಿಕ್ಕಿದ್ದಾನೆ. ಬಂಧಿತ ಭಯೋತ್ಪಾದಕ 40 ವರ್ಷದ ಮೊಹಮ್ಮದ್ ಅಸ್ರಾಫ್ ಎಂದು ಗುರುತಿಸಲಾಗಿದ್ದು. ಇವನು ಹಬ್ಬದ ಸಮಯದಲ್ಲಿ ದೊಡ್ಡ ಭಯೋತ್ಪಾದಕ ದಾಳಿಗೆ ಪ್ಲಾನ್ ಮಾಡಿದ್ದ ಎಂದು ವರದಿಯಾಗಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನರೋವಲ್ ನಿವಾಸಿ ಪಾಕಿಸ್ತಾನಿ ಭಯೋತ್ಪಾದಕ ನಕಲಿ ಗುರುತಿನ ಚೀಟಿ ಅಡಿಯಲ್ಲಿ 10 ವರ್ಷಗಳಿಗಿಂತ ಹೆಚ್ಚು ಕಾಲ ಭಾರತದಲ್ಲಿ ವಾಸಿಸುತ್ತಿದ್ದ ಮತ್ತು ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದ […]

ಬೆಂಗಳೂರು : ಕನ್ನಡ ರಾಜ್ಯೋತ್ಸವದಂದು ಕನ್ನಡಿಗರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, ಕೌಶಲ್ಯಯ ಮತ್ತು ಅರೆಕೌಶಲ್ಯ ವಲಯದಲ್ಲಿ ಕನ್ನಡಿಗರಿಗೆ ಶೇ. 75 ರಷ್ಟು ಉದ್ಯೋಗಗಳನ್ನು ದೊರಕಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ರಾಜ್ಯದಲ್ಲಿ ಔದ್ಯೋಗಿಕ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು. ಖಾಸಗಿ ಕ್ಷೇತ್ರದಲ್ಲಿ ಹೂಡಿಕೆಯಾಗುವ ಬಂಡವಾಳದಿಂದ ಸೃಷ್ಟಿಯಾಗುವ ಉದ್ಯೋಗಾವಕಾಶಗಳಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗಗಳು ದೊರಕುವಂತೆ ಮಾಡಲಾಗುವುದು. ಸರ್ಕಾರಿ […]

ಬೆಂಗಳೂರು  ಸುಮಾರು 25  ಲಕ್ಷಕ್ಕೂ ಅಧಿಕ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ಅವರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಸವಾಲುಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ ಕರ್ನಾಟಕ ಪೊಲೀಸ್  ಇಲಾಖೆಗೆ ಧನ್ಯವಾದ ಹೇಳಲೇಬೇಕು. ಸಿಎಂ ಬಸವರಾಜ ಬೊಮ್ಮಾಯಿ ಗೃಹ ಸಚಿವ ಆರಗ ಜ್ಞಾನೇಂದ್  ಡಿಜಿ/ಐಜಿಪಿ ಪ್ರತಿಯೊಬ್ಬ ಪೊಲೀಸ್ ಅಧಿಕಾರಿಗಳನ್ನು ಅಭಿನಂದಿಸಿದ್ದಾರೆ.ನಿರಂತರ 48 ಗಂಟೆ ಭದ್ರತೆ ನೀಡಿದ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ಯವಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಮಾಡಿದ ಸಿಬ್ಬಂದಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಬೆಂಗಳೂರು ನಗರದ […]

ಮೊನ್ನೆ ಮೊನ್ನೆ ಡ್ರಗ್ ಕೇಸ್‌ನಲ್ಲಿ ವಿಚಾರಣೆಗೊಳಪಟ್ಟು ಅತ್ತು ಕರೆದಿದ್ದ ಅನುಶ್ರೀ ಇದೀಗ ಯಾರನ್ನೋ ಮುದ್ದಿಸುವಾಗ ಕ್ಯಾಮರ ಕಣ್ಣಿಗೆ ಬಿದ್ದಿದ್ದಾರೆ! ಆಕೆಯ ಜೊತೆಗಿದ್ದವರು ಯಾರು? ಹಿಂದೆಲ್ಲ ಆ್ಯಂಕರ್ ಅನುಶ್ರೀ ಅಂದರೆ ಅರುಳು ಹುರಿದಂಥಾ ಸೊಗಸಾದ ಮಾತು, ಮುಖದಿಂದ ಎಂದೂ ಮಾಯವಾಗದ ಚೆಂದದ ನಗುವೇ ನೆನಪಾಗುತ್ತಿತ್ತು. ಫ್ಯಾಶನೇಬಲ್ ಉಡುಗೆಗಳು, ಮಸ್ತ್ ಅನ್ನಬಹುದಾದ ಡ್ಯಾನ್ಸ್, ಸುಂದರಿ ಅಂತ ಖಚಿತವಾಗಿ ಹೇಳುವಷ್ಟು ಸೌಂದರ್ಯ. ಎಲ್ಲವೂ ಸೇರಿ ಅನುಶ್ರೀ ಅಂದ್ರೆ ಹಳ್ಳಿಮಂದಿಯೂ ಪಕ್ಕದ್ಮನೆ ಹುಡುಗಿಯೇನೋ ಅಂತ ಭಾವಿಸ್ತಿದ್ರು.ಅದಕ್ಕೆ […]

Advertisement

Wordpress Social Share Plugin powered by Ultimatelysocial