ದೆಹಲಿಯಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹೀಗಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇಂದು ಬೆಳಗ್ಗೆ ಲೆಫ್ಟಿನೆಂಟ್​ ಗವರ್ನರ್​​ ಅನಿಲ್​ ಜೈಜಲ್​ ಜೊತೆ ಸಭೆ ನಡೆಸಿದ್ದರು. ಸಭೆ ಬಳಿಕ ದೆಹಲಿಯಾದ್ಯಂತ ಒಂದು ವಾರ ಕಾಲ ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ. ದೇಶದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಇಂದು ಪ್ರಧಾನಿ ನರೇಂದ್ರ ಮೋದಿ ಅಧಿಕಾರಿಗ ಜೊತೆ ಸಭೆ ನಡೆಸುತ್ತಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ […]

  ರಾಜ್ಯದಲ್ಲಿ ಬಡವರು ಹಾಗೂ ಜನಸಾಮಾನ್ಯರು ರೂ. 10 ಲಕ್ಷದೊಳಗೆ ಮನೆ ಕಟ್ಟಲು ಅನುಕೂಲವಾಗುವಂತೆ ಶೀಘ್ರದಲ್ಲೇ ನೂತನ ಉಚಿತ ಮರಳು ನೀತಿಯನ್ನು ಜಾರಿಗೆ ತರಲಿದ್ದೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಶುಕ್ರವಾರ ವಿಧಾನಸಭೆಯಲ್ಲಿ ಘೋಷಿಸಿದರು. ಪ್ರಶ್ನೋತ್ತರ ಸಮಯದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮರಳು ಸಮಸೆಯನ್ನು ನೀಗಿಸುವ ನಿಟ್ಟಿನಲ್ಲಿ ನಮ್ಮ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ಆಶ್ರಯ ಮನೆ ಹಾಗೂ ಗ್ರಾಮಪಂಚಾಯ್ತಿ […]

ಕೊರೊನಾ ವೈರಸ್ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ ಖಾಸಗಿ ವಲಯದ ಯೆಸ್ ಬ್ಯಾಂಕ್ ಡಿಜಿಟಲ್ ಉಳಿತಾಯ ಖಾತೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ ಗ್ರಾಹಕರು ಬ್ಯಾಂಕ್ ಗೆ ಹೋಗಬೇಕಾಗಿಲ್ಲ. ಈ ಖಾತೆಯನ್ನು ಇ-ಕೆವೈಸಿ ಮತ್ತು ವಿಡಿಯೋ ಪರಿಶೀಲನೆಯ ಮೂಲಕ ತೆರೆಯಬಹುದು ಎಂದು ತಿಳಿಸಿದೆ. ಹಾಗೆಯೇ ಡಿಜಿಟಲ್ ಉಳಿತಾಯ ಖಾತೆಯು ವರ್ಚುವಲ್ ಡೆಬಿಟ್ ಕಾರ್ಡ್‌ನೊಂದಿಗೆ ಬರುತ್ತದೆ. ಇದರ ಸಹಾಯದಿಂದ ಗ್ರಾಹಕರಿಗೆ 100 ಕ್ಕೂ ಹೆಚ್ಚಿನ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು […]

ಕೊರೊನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಡ್ಡಿ ಮನ್ನಾ ಕುರಿತಂತೆ ಮೂರು ದಿನಗಳಲ್ಲಿ ವಿವರವಾದ ಉತ್ತರವನ್ನು ಸಲ್ಲಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಪ್ರಕರಣವನ್ನು ಜೂನ್ 17 ರಂದು ಸುಪ್ರೀಂಕೋರ್ಟ್ ವಿಚಾರಣೆಗೆ ನಿಗದಿಪಡಿಸಿದೆ. ದೇಶಾದ್ಯಾಂತ ಲಾಕ್ ಡೌನ್ ಇದ್ದ ಹಿನ್ನೆಲೆಯಲ್ಲಿ ಜನರಿಗೆ ಸಾಲ ಮತ್ತು ಇನ್ನತರೆ ಕಂತು ಕಟ್ಟಲು ಸಂಕಷ್ಟದಲ್ಲಿದ್ದಾಗ ಸಾಲಗಳ ಇಎಂಐ ಕಟ್ಟಲು ಆರ್ ಬಿಐ 6 ತಿಂಗಳು ಮುಂದೂಡಿಕೆ ಅವಕಾಶವನ್ನು ಕೊಟ್ಟಿತ್ತು, ಈ ಕುರಿತು ಇದಕ್ಕೆ […]

ಮಣ್ಣು ವಿಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆಗಾಗಿ ರತನ್ ಲಾಲ್ ಅವರು ಅಮೆರಿಕದ ಪ್ರತಿಷ್ಠಿತ 2020ರ ವಿಶ್ವ ಆಹಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಆಹಾರ ಉತ್ಪಾದನೆಯ ಹೆಚ್ಚಳ ಮತ್ತು ಪೋಷಕಾಂಶಗಳ ಮರುಬಳಕೆ ಕುರಿತು ಸಂಶೋಧನಾ ಕಾರ್ಯದಿಂದ ರತನ್ ಅವರು ಲಕ್ಷಾಂತರ ಸಣ್ಣ ರೈತರಿಗೆ ಸಹಾಯ ಮಾಡಿದ್ದಾರೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದ್ದಾರೆ. ಭಾರತೀಯ ಮೂಲದ ಅಮೆರಿಕನ್ ಮಣ್ಣು ವಿಜ್ಞಾನಿ ರತನ್ ಲಾಲ್ ಅವರು 1.90 ಕೋಟಿ ಪ್ರಶಸ್ತಿಯ ನಗದನ್ನು ಒಳಗೊಂಡಿದೆ. […]

ನವದೆಹಲಿ: ಭಾರತ-ಚೀನಾ ನಡುವೆ ಆಫ್ರಿಕಾದಲ್ಲಿ ಕುತೂಹಲಕಾರಿ ಕದನವೊಂದು ನಡಿತಿದೆ.  ಆಫ್ರಿಕಾ ಖಂಡದಲ್ಲಿನ ಬೈಕ್ ಉದ್ಯಮದಲ್ಲಿ ಈಗ ಎರಡು ಭಾರತೀಯ ಕಂಪನಿಗಳು ಸೇರಿ ಚೀನಾದ ೨೦೦ ಕಂಪನಿಗಳನ್ನು ಸೋಲಿಸಿವೆ. ಬಜಾಜ್ ಆಟೊ, ಟಿವಿಎಸ್ ಆರ್ಭಟಕ್ಕೆ ಬೆಚ್ಚಿಬಿದ್ದ ಚೀನಿ ಕಂಪನಿಗಳು ಒಂದೊAದಾಗಿ ಹಿಂದೆ ಸರಿಯುತ್ತಿವೆ. ೧೦ ವರ್ಷಗಳ ಹಿಂದೆ ಇದ್ದ ೨೦೦ ಕಂಪನಿಗಳು ಈಗ ೪೦ಕ್ಕಿಳಿದಿವೆ. ಅಷ್ಟು ಮಾತ್ರವಲ್ಲ. ಈ ಎರಡು ಭಾರತೀಯ ಕಂಪನಿಗಳೇ ಮಾರುಕಟ್ಟೆಯಲ್ಲಿ ಶೇ.೫೦ರಷ್ಟು ಪಾಲು ಹೊಂದಿವೆ. ೧೦ ವರ್ಷಗಳ […]

ದೇಶದಲ್ಲಿ ಅತಿ ಹೆಚ್ಚು ಸಾಲ ನೀಡಿರುವ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತೊಂದು ಮಹತ್ವದ ಕೆಲಸಕ್ಕೆ ಕೈ ಹಾಕಿದೆ. ಲಾಕ್ ಡೌನ್ ಹಿನ್ನೆಲೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಗ್ರಾಹಕರಿಗೆ ನೆರವಾಗಲು ಎಸಬಿಐ ಬ್ಯಾಂಕ್ ಮುಂದಾಗಿದೆ. ದೇಶದಲ್ಲಿ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ‘SBI ತುರ್ತು ಸಾಲ ಯೋಜನೆ’ಯಡಿ ಅತಿ ಶೀಘ್ರ ಸಮಯದಲ್ಲಿ ಸುಮಾರು 5 ಲಕ್ಷದವೆರೆಗೆ ಸಾಲ ನೀಡಲು ಮುಂದಾಗಿದೆ. ಸದ್ಯ ಲಾಕ್ […]

ಮ್ಯಾಡ್ರಿಡ್: ಕೋವಿಡ್ ಕಾರಣದಿಂದ ಈ ವರ್ಷ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆಶೇ. ೬೦ರಿಂದ ೮೦ರಷ್ಟು ಇಳಿಕೆಯಾಗಬಹುದು ಎಂದು ವಿಶ್ವ ಪ್ರವಾಸೋದ್ಯಮ ಸಂಸ್ಥೆ ಅಭಿಪ್ರಾಯಪಟ್ಟಿದೆ. ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಜಗತ್ತಿನಾದ್ಯಂತ ಪ್ರಯಾಣ ನಿರ್ಬಂಧಗಳು, ವಿಮಾನ ನಿಲ್ದಾಣಗಳ ಚಟುವಟಿಕೆಗಳ ಸ್ಥಗಿತ ಹಾಗೂ ಗಡಿಗಳನ್ನೂ ಮುಚ್ಚಲಾಗಿದೆ. ಇಂಥ ಸಂಕಷ್ಟ ೧೯೫೦ರ ಬಳಿಕ ಬಂದಿರಲಿಲ್ಲ ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ. ಈ ವರ್ಷದ ಮೊದಲ ಮೂರು ತಿಂಗಳಲ್ಲಿ ಶೇ. ೨೨ರಷ್ಟು ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. […]

ದಾವಣಗೆರೆ, ಸೆಪ್ಟೆಂಬರ್ 29: “ಯಡಿಯೂರಪ್ಪ ಅವರು ನಮ್ಮ ಬೆಂಬಲಕ್ಕೆ ನಿಂತಿದ್ದಕ್ಕೆ ವೀರಶೈವ ಸಮಾಜ ಉಳಿಯಿತು” ಎಂದು ಹೇಳುವ ಮೂಲಕ ಕಾಂಗ್ರೆಸ್ ನ ಪ್ರಭಾವಿ ಮುಖಂಡ, ಶಾಸಕ ಹಾಗೂ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆದ ಶಾಮನೂರು ಶಿವಶಂಕರಪ್ಪ ಅವರು ಅಚ್ಚರಿ ಮೂಡಿಸಿದ್ದಾರೆ. ಆ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದ್ದಾರೆ. ದಾವಣಗೆರೆಯಲ್ಲಿ ಭಾನುವಾರ ನಡೆದ ದಸರಾ ಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮಾಜವನ್ನು ದುರುಪಯೋಗ ಪಡಿಸಿಕೊಳ್ಳುವಾಗ […]

ದಾವಣಗೆರೆ, ಸೆಪ್ಟೆಂಬರ್ 30: ಮೊಬೈಲ್ ಕಳೆದುಹೋದದ್ದಕ್ಕೆ ಮನೆಯವರು ಬೈಯುತ್ತಾರೆ ಎಂದು ಹೆದರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆಯ ನಿಟ್ಟುವಳ್ಳಿ ನಿವಾಸಿ ಸಿದ್ದೇಶ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ದಾವಣಗೆರೆಯ ಡಿಸಿಎಂ ಟೌನ್ ಶಿಪ್ ಬಳಿ ಈ ಘಟನೆ ನಡೆದಿದ್ದು, ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೆಪ್ಟೆಂಬರ್ 29ರಂದು ಭಾನುವಾರ ತಮ್ಮ ಪಕ್ಕದ ಮನೆಯವರ ಮೊಬೈಲನ್ನು ಪಡೆದುಕೊಂಡಿದ್ದ ಸಿದ್ದೇಶ್ ಅಂದೇ ಅದನ್ನು ಕಳೆದುಕೊಂಡಿದ್ದ. ವಿಷಯ […]

Advertisement

Wordpress Social Share Plugin powered by Ultimatelysocial