ದೇಶದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಗುತ್ತಿದ್ದು, ಕಳೆದ 24 ಗಂಟೆಯಲ್ಲಿ 38,902 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದೆ, ಒಂದೇ ದಿನದಲ್ಲಿ 543 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ದೇಶದಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 10,77,618 ಏರಿಕೆಯಾಗಿದೆ. ದೇಶದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 26,816ಕ್ಕೆ ಏರಿಕೆಯಾಗಿದೆ. ಈ ಮೂಲಕ ದೇಶದಲ್ಲಿ 10,77,618 ಮಂದಿ ಪೈಕಿ 6,77,423 ಕೊರೊನಾದಿಂದ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುದ್ದಾರೆ. ಇನ್ನೂ ಉಳಿದ 3,73,379 ಮಂದಿ […]

ಕೊರೊನಾ ತಡೆಯುವ ಲಸಿಕೆಯನ್ನ ಕಂಡುಹಿಡಿಯುವಲ್ಲಿ ಎಲ್ಲ ದೇಶಗಳು ಸಹ ತಲ್ಲೀನವಾಗಿವೆ ..ವಿವಿಧ ದೇಶಗಳ ೧೪೦ಕ್ಕೂ ಹೆಚ್ಚಿನ ಲಸಿಕೆಗಳು ಪ್ರಯೋಗದಲ್ಲಿದ್ದು….ಭಾರತದ ೨ ಲಸಿಕೆಗಳು ಮಾನವರ ಮೇಲೆ ಪ್ರಯೋಗಕ್ಕೆ ಅಣಿಯಾಗಿವೆ , ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ವ್ಯಾಕ್ಸಿನ್ ಅನ್ನು ಈಗಾಗಲೇ ಇಲಿ ಹಾಗೂ ಮೊಲಗಳ ಮೇಲೆ ಯಶಸ್ವಿ ಪ್ರಯೋಗ ನಡೆಸಲಾಗಿದೆ. ಬಳಿಕ ಈ ವ್ಯಾಕ್ಸಿನ್ ಮಾನವ ಪರೀಕ್ಷೆ ಆರಂಭಗೊAಡಿದೆ. ಈ ವ್ಯಾಕ್ಸಿನ್ ಅನ್ನು ಈಗಾಗಲೇ ಮೂವರ ಮೇಲೆ ಪ್ರಯೋಗ ನಡೆಸಲಾಗಿದ್ದು, ಇದುವರೆಗೆ ಅವರಲ್ಲಿ […]

ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಭರ್ಜರಿಯಾಗಿ ಉಗ್ರರ ಭೇಟೆಯನ್ನ ಮುಂದುವರಿಸಿದ್ದು ಉಗ್ರರ ನುಸುಳುವಿಕೆಯನ್ನ ಪದೇ ಪದೇ ವಿಫಲಗೊಳಿಸುತ್ತಿದೆ.. ಆದರು ಸಹ ಉಗ್ರರ ಒಳನುಸುಳುವಿಕೆಯ ಯತ್ನ ಮಾತ್ರ ಮುಂದುವರೆಯುತ್ತಲೇ ಇದೆ. ಜಮ್ಮು-ಕಾಶ್ಮೀರದಲ್ಲಿ ನಡೆಸಲಾಗಿರುವ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಅಮ್ಶಿಪೊರಾ ಹಳ್ಳಿಯಲ್ಲಿ ಉಗ್ರರು ಅಡಗಿಕುಳಿತ್ತಿದ್ದಾರೆಂಬ ಖಚಿತ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿದ್ದವು. ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ ಶೋಧ […]

ಪ್ರಸಿದ್ದ ಅಮರನಾಥ ಯಾತ್ರೆಯ ಮೇಲೆ ಕರಿನೆರಳು ಬಿದ್ದಿದೆ..ಹೌದು ಅಮರನಾಥ ಯಾತ್ರಿಕರ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಭಾರತ ಸೇನಾ ಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈಗಾಗಲೇ ಜೈಶ್-ಎ-ಮೊಹಮ್ಮದ್ ಕಮಾಂಡರ್ ಸೇರಿದಂತೆ ಮೂವರು ಭಯೋತ್ಪಾದಕರನ್ನು ಗುಂಡಿಕ್ಕಿ ಕೊಂದಿದ್ದು, “ಅಮರನಾಥ ಯಾತ್ರೆಯನ್ನು ಯಾವುದೇ ಅಡೆತಡೆಯಿಲ್ಲದೆ ಶಾಂತಿಯುತವಾಗಿ ನಡೆಸಲಾಗುವುದು ಮತ್ತು ಭದ್ರತಾ ಪರಿಸ್ಥಿತಿ ನಿಯಂತ್ರಣದಲ್ಲಿ ಮುಂದುವರಿಯುತ್ತದೆ ಎಂದು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ” ಎಂದು ಅವರು ಹೇಳಿದರು.

ನವಿ ಮುಂಬೈನ  ಕ್ವಾರಂಟೈನ್‌  ಕೇಂದ್ರವೊಂದರಲ್ಲಿ 40 ವರ್ಷದ  ವಿವಾಹಿತ  ಮಹಿಳೆ  ಮೇಲೆ  ಅತ್ಯಾಚಾರ ಎಸಗಲಾಗಿದೆ  ಎಂದು  ಮಹಾರಾಷ್ಟ್ರ  ಪೊಲೀಸರು  ತಿಳಿಸಿದ್ದಾರೆ. ಅತ್ಯಾಚಾರಕ್ಕೆ  ಒಳಗಾದ  ಮಹಿಳೆಯು ಪನ್ವೇಲ್‌  ಪೊಲೀಸ್  ಠಾಣೆಯಲ್ಲಿ  ದೂರು  ದಾಖಲಿಸಿದ್ದು, ಆರೋಪಿಯನ್ನು  25 ವರ್ಷದ  ಶುಭಮ್  ಖಾಟು ಎಂದು  ಗುರುತಿಸಲಾಗಿದೆ. ಇಂಡಿಯಾ  ಬುಲ್ಸ್‌ ಹೆಸರಿನ  ಕ್ವಾರಂಟೈನ್‌  ಕೇಂದ್ರದ  ಐದನೇ  ಮಹಡಿಯಲ್ಲಿ ಮಹಿಳೆಯನ್ನು  ಇರಿಸಲಾಗಿತ್ತು.  ಎರಡನೇ  ಮಹಡಿಯಲ್ಲಿ  ಆರೋಪಿ  ಇದ್ದನೆಂದು  ತಿಳಿದುಬಂದಿದೆ.ತಾನು  ವೈದ್ಯನೆಂದು  ಹೇಳಿಕೊಂಡು  ಮಹಿಳೆ  ವಾಸವಿದ್ದ  ಕೋಣೆಯನ್ನು  ಪ್ರವೇಶಿಸಿರುವ […]

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 34,884 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ದೇಶದಲ್ಲಿ ಒಟ್ಟು 10.38 ಲಕ್ಷಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಒಂದೇ ದಿನದಲ್ಲಿ ಕೊರೊನಾ ವೈರಸ್ ಗೆ 671 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಮೃತಪಟ್ಟವರ ಸಂಖ್ಯೆ 26,273ಕ್ಕೆ ಏರಿಕೆಯಾಗಿದೆ. 10,38,716 ಮಂದಿ ಸೋಂಕಿತರ ಪೈಕಿ ಒಟ್ಟು ಗುಣಮುಖರಾದವರ ಸಂಖ್ಯೆ 6,53,751ಕ್ಕೆ ತಲುಪಿದೆ. ಪ್ರಸ್ತುತ ದೇಶದಲ್ಲಿನ್ನೂ 3,58,692 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಎಂದು ಆರೋಗ್ಯ ಮತ್ತು ಕುಟುಂಬ […]

ಕೊರೊನಾ ಸಂಕಷ್ಟದಲ್ಲಿ ಭಾಗಿಯಾಗಿ ರೋಗಿಗಳ ಸೇವೆ ಮಾಡುತ್ತಿರುವ ಆಯುಷ್ ವೈದ್ಯರಿಗೆ ೨೦ ಸಾವಿರ , ಅಲೋಪತಿ ವೈದ್ಯರಿಗೆ ೬೦ ಸಾವಿರ ವೇತನ ತಾರತಮ್ಯವನ್ನ ಸರ್ಕಾರ ಕೂಡಲೇ ಬಗೆಹರಿಸಬೇಕು ಎಂದು ಕುಮಾರಸ್ವಾಮಿ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದರೆ. ಈ ಕುರಿತಂತೆ ಟ್ಟೀಟ್ ಮಾಡಿರುವ ಅವರು ಸರ್ಕಾರ ಎಲ್ಲ ವೈದ್ಯರುಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ಸೂಕ್ತ ಕ್ರಮಗಳನ್ನ ತೆಗೆದುಕೊಳ್ಳಬೇಕು ೨೦೦೦ ಆಯಷ್ ವೈದ್ಯರು ರಾಜೀನಾಮೆಯನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದ್ದಾರೆ.

ಗಡಿಯಲ್ಲಿ ಭದ್ರತಾ ಪಡೆಗಳು ಉಗ್ರರನ್ನ ನಿಯಂತ್ರಿಸುವ ಕಾರ್ಯಚರಣೆಯನ್ನ ಭರ್ಜರಿಯಾಗಿಯೆ ನಡೆಸುತ್ತಿದ್ದಾರೆ.. ಹೌದು ಸತತವಾಗಿ ಉಗ್ರರ ಉಪಟಳವನ್ನ ಭೇದಿಸುತ್ತಲೇ ಇರುವ ಭಾರತೀಯ ಸೇನಾ ಪಡೆ ಮತ್ತೆ ಮೂವರು ಉಗ್ರರನ್ನ ಹತ್ಯೆ ಮಾಡಿದೆ. ಕುಲ್ಗಾಮ್ ನಾಗ್ನಾಡ್ ಚಿಮ್ಮರ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು ಮೂವರು ಉಗ್ರರನ್ನು ಹೊಡೆದುರುಳಿಸಿದೆ. ಉಗ್ರರ ಬಳಿಯಿದ್ದ ಅಪಾರ ಪ್ರಮಾಣದ ಶಸ್ತಾçಸ್ತçವನ್ನ ವಶಪಡಿಸಿಕೊಂಡಿದ್ದಾರೆ ಎನ್ನುವ ಮಹಿತಿ ಲಭ್ಯವಾಗ್ತಾಯಿದೆ.

ದಿನಗಳು ಕಳೆದರು ಭಾರತ ಮತ್ತು ಚೀನಾ ಗಡಿ ವಿವಾದ ಮಾಸದೇ ಹೆಚ್ಚುತ್ತಲೇ ಇದೆ ಇದರ ಬೆನ್ನಲ್ಲೇ ಇತ್ತೀಚೆಗೆ ಪ್ರಧಾನಿ ಮೋದಿ ಅವರು ಲೇಹ್‌ಗೆ ಬೇಟಿ ನಿಡಿದ್ದರು ಇದಾದ ಸ್ವಲ್ಪ ದಿನಗಳ ನಂತರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಡಾಕ್ ಮತ್ತು ಜಮ್ಮು-ಕಾಶ್ಮೀರಕ್ಕೆ ಎರಡು ದಿನಗಳ ಭೇಟಿಯನ್ನ ನೀಡಿದ್ದಾರೆ. ಭಾರತ ಮತ್ತು ಚೀನಾ ಗಡಿ ಮಧ್ಯೆ ಪೂರ್ವ ಲಡಾಕ್ ನಲ್ಲಿ ಮುಂದುವರಿದಿರುವ ಸಮಸ್ಯೆ ಮಧ್ಯೆ ಸವಿಸ್ತಾರವಾಗಿ ಅಲ್ಲಿನ ಭದ್ರತೆ, […]

ಬಾಲಾಜಿ ದೇವಸ್ಥಾನವನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ದೇವರ ದರ್ಶನವನ್ನು ನಿಲ್ಲಿಸುವುದಿಲ್ಲ ಎಂದು ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್​ (ಟಿಟಿಡಿ) ಶುಕ್ರವಾರ ಸ್ಪಷ್ಟಪಡಿಸಿದೆ.ದೇಗುಲದ 15 ಪ್ರಮುಖ ಅರ್ಚಕರು ಸೇರಿ 140ಕ್ಕೂ ಹೆಚ್ಚು ಸಿಬ್ಬಂದಿ ಕರೋನಾ ಸೋಂಕಿಗೆ ಒಳಗಾಗಿದ್ದಾರೆ. ಆದರೂ ದೇಗುಲವನ್ನು ಮತ್ತೊಮ್ಮೆ ಮುಚ್ಚಿ, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಾರದಂತೆ ತಡೆಯುವುದಿಲ್ಲ ಎಂದು ಟಿಟಿಡಿಯ ಚೇರ್​ಪರ್ಸನ್​ ವೈ.ವಿ. ಸುಬ್ಬಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.ಮಾರ್ಚ್​ನಲ್ಲಿ ದೇಶಾದ್ಯಂತ ಲಾಕ್​ಡೌನ್​ ಘೋಷಣೆಯಾದ ಹಿನ್ನೆಲೆಯಲ್ಲಿ ವಿಶ್ವಪ್ರಸಿದ್ಧ ತಿರುಪತಿ ದೇಗುಲವನ್ನು ಕೂಡ ಮುಚ್ಚಲಾಗಿತ್ತು. […]

Advertisement

Wordpress Social Share Plugin powered by Ultimatelysocial