ದರೋಡೆ ಮತ್ತು ದನಗಳವು ಮಾಡುತ್ತಿದ್ದ ನಾಟೋರಿಯಸ್ ಗ್ಯಾಂಗ್ ನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಬಜಪೆ ಪೊಲೀಸರು ಬಂಧಿಸಿದ್ದಾರೆ. ಗಂಜಿಮಠ ಕೈಗಾರಿಕಾ ಪ್ರದೇಶದಲ್ಲಿ ದರೋಡೆ ಕೃತ್ಯ ನಡೆಸಲು ಹೊಂಚು ಹಾಕುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ದಾಳಿ ನಡೆಸಿದ್ದು, 5 ಜನ ಆರೋಪಿಗಳು ಕೃತ್ಯಕ್ಕೆ ಬಳಿಸಿರುವ ಪಿಕ್ ಅಪ್ ವಾಹನ 1, ಬೈಕ್ 2, ಕಬ್ಬಿಣದ ಕತ್ತಿ, ಚೂರಿ, ಕಬ್ಬಿಣದ ಹುಕ್ಕು, ಮರದ ದಿಮ್ಮಿ, ಮೆಣಸಿನ ಹುಡಿ ಪ್ಯಾಕೇಟ್ […]

ಗೂಡ್ಸ್ ರೈಲಿಗೆ ತಲೆಕೊಟ್ಟು ಪತಿ ಮತ್ತು ಪತ್ನಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ತಾಲೂಕಿನ ಹಿಂಡಲಗಾ ನಿವಾಸಿ ರಾಕೇಶ್ ಪಾಟೀಲ್ ಮೃತ ದುರ್ದೈವಿ ಆಗಿದ್ದು, ಪತ್ನಿಗೆ ಗಂಭೀರ ಗಾಯವಾಗಿರುವ ಹಿನ್ನೆಲೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬೆಳಗಾವಿ ರೇಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಇನ್ನು ಈ ದಂಪತಿ ಸಾವಿಗೆ ನಿಖರ ಕಾರಣ ಪೊಲೀಸರ ತನಿಖೆಯಿಂದಷ್ಟೇ ತಿಳಿಯಬೇಕಿದೆ. ಇದನ್ನೂ ಓದಿ:ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಚುಣಾವನೆ ಹಿನ್ನೆಲೆ

ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಚುಣಾವನೆ ಹಿನ್ನೆಲೆಯಲ್ಲಿ ಎರಡು ಗುಂಪುಗಳ ಮಧ್ಯ ಗಲಾಟೆ,ಮತ್ತು ಕಲ್ಲು ತೂರಾಟ..!ನಡೆಯುತ್ತಿರುವ ಘಟನೆ ಯಾದಗಿರಿ ಜಿಲ್ಲೆ ವಡಿಗೇರಾ ತಾಲೂಕಿನ ಉಳ್ಳೆಸೂಗುರು ಗ್ರಾಮದಲ್ಲಿ ನಡೆದಿದೆ. ಎರಡು ಗುಂಪುಗಳ ಮಾರಾಮರಿ, 50 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ವಾಹನಗಳ ಮೇಲು ಕಲ್ಲೂ ತೂರಾಟ, ಇಪ್ಪತೈದಕ್ಕೂ ವಾಹನಳು ಜಖಂವಾಗಿದೆ. ಘಟನೆಯಲ್ಲಿ 50 ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.. ಗಾಯಾಳುಗಳನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ […]

ಕೇಂದ್ರದ ವಿವಾದಾತ್ಮಕ ಕೃಷಿ ಕಾಯ್ದೆ ವಿರುದ್ದ ರೈತರ ಪ್ರತಿಭಟನೆಗೆ ತುಮಕೂರು ನಗರದ ಗುಬ್ಬಿ ಗೇಟ್ ಬಳಿ ರಸ್ತೆ ತಡೆ ನಡೆಸಲು ರೈತರು ನಿರ್ಧರಿಸಿದಾರೆ, ಇನ್ನೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ತಮ್ಮ ಆಕೋಶವನ್ನ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಟನಾ ಸ್ಥಳದ ಸುತ್ತ ಪೊಲೀಸ್ ಸರ್ಪಗಾವಲುಮಾಡಿದಾರೆ, ಹೆದ್ದಾರಿ ತಡೆಗೆ ಪೊಲೀಸರಿಂದ ಅಡ್ಡಿ ಹಿನ್ನೆಲೆ ಹಾಗಾಗಿ ನಿಂತಲ್ಲೆ ಪ್ರತಿಭಟಿಸುತ್ತಿರುವ ರೈತರು. ಇದನ್ನೂ ಓದಿ :ಕೃಷಿ ಕಾಯ್ದೆ ಖಂಡಿಸಿ ದೇಶವ್ಯಾಪಿ ಹೆದ್ದಾರಿ ಬಂದ್‌

ಕೃಷಿ ಕಾಯ್ದೆಗಳನ್ನು ಖಂಡಿಸಿ ಶನಿವಾರ ಕರ್ನಾಟಕ ಸಹಿತ ದೇಶವ್ಯಾಪಿಯಾಗಿ ರೈತ ಸಂಘಟನೆಗಳು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಬಂದ್‌ ನಡೆಸಲಿವೆ. ರಾಷ್ಟ್ರ ಮಟ್ಟದಲ್ಲಿ ಕಿಸಾನ್‌ ಮೋರ್ಚಾ ಸೇರಿ ಹಲವು ರೈತ ಸಂಘಟನೆಗಳು ಹೆದ್ದಾರಿ ಬಂದ್‌ನಲ್ಲಿ ಭಾಗಿ ಆಗಲಿದ್ದು, ರಾಜ್ಯದಲ್ಲಿ ಸಂಯುಕ್ತ ಹೋರಾಟ -ಕರ್ನಾಟಕ ವೇದಿಕೆ ಕಾರ್ಯಕರ್ತರು, ರೈತರ ಜತೆಗೂಡಿ ಹಲವು ಕಡೆ ರಸ್ತೆ ತಡೆ ನಡೆಸಲಿದ್ದಾರೆ. ಇನ್ನೂ ಉತ್ತರ, ಮಧ್ಯ ಕರ್ನಾಟಕ ಸಹಿತ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೆದ್ದಾರಿ ತಡೆ […]

ಇಂದು ದೆಹಲಿ ರೈತರ ಹೋರಾಟ ಬೆಂಬಲಿಸಿ ರಾಜ್ಯದಲ್ಲಿಯೂ ಸಹ ಹಲವು ರೈತ ಸಂಘಟನೆಗಳು ಹೆದ್ದಾರಿ ತಡೆ ಮಾಡಲು ಸಜ್ಜಾಗಿವೆ. ವಿವಿಧ ರೈತ ಸಂಘಟನೆಗಳು ಮತ್ತು ಇತರೆ ಸಂಘಟನೆಗಳು ಈ ಹೆದ್ದಾರಿ ತಡೆಗೆ ಬೆಂಬಲ ನೀಡಿವೆ. ಮಧ್ಯಾಹ್ನ 12ರಿಂದ 3 ಗಂಟೆವರೆಗೆ ಹೆದ್ದಾರಿ ತಡೆದು ಬಂದ್ ಮಾಡಲಿದ್ದಾರೆ. ಹೀಗಾಗಿ ರಾಜ್ಯ ರಾಜಧಾನಿಯಲ್ಲಿ ಖಾಕಿ ಪಡೆ ನಿಗಾ ವಹಿಸಿದೆ. ದೆಹಲಿಯಲ್ಲಿ ನಡೆದ ರೈತರ ದಂಗೆಯಂತೆ ಇಲ್ಲಿ ಯಾವುದೇ ಸಣ್ಣ ಘಟನೆಯೂ ನಡೆಯದಂತೆ ಕಟ್ಟುನಿಟ್ಟಿನ […]

ಆತನನ್ನು ನೋಡಿದ್ರೆ ಅಯ್ಯೋ ಪಾಪ ಅಂತ ಅನ್ನಿಸುತ್ತೆ ! ಲಂಚ ಕಾಸಿನ ವಿಚಾರಕ್ಕೆ ಬಂದ್ರೆ ಐದು ಪೈಸೆಯೂ ಬಿಡಲ್ಲ, ಯಾರನ್ನೂ ನಂಬಲ್ಲ ! ಇವತ್ತು 20 ಲಕ್ಷ ಲಂಚ ಸ್ವೀಕರಿಸಿ ಎಸಿಬಿ ಕೈಗೆ ಸಿಕ್ಕಿಬಿದ್ದಿದ್ದಾನೆ. ಬಿಬಿಎಂಪಿಯಲ್ಲಿ ಕುಂಟಣ್ಣ ಎಂದೇ ಖ್ಯಾತಿ ಪಡೆದಿರುವ ಬೊಮ್ಮನಹಳ್ಳಿ ವಲಯ ಕಚೇರಿ ನಗರ ಯೋಜನೆ ಸಹಾಯಕ ನಿರ್ದೇಶಕ ದೇವೆಂದ್ರಪ್ಪ ಎಸಿಬಿ ಬೆಲೆಗೆ ಬಿದ್ದ ವಿವರವಿದು. ವಾಣಿಜ್ಯ ಕಟ್ಟಡಕ್ಕೆ ಒಸಿ ನೀಡಲು 20 ಲಕ್ಷ ರೂ. ಲಂಚ […]

ಇಂದಿನಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಕಣಕ್ಕಿಳಿಯಲಿದೆ.ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಮೊದಲ ಎರಡು ಟೆಸ್ಟ್ ಪಂದ್ಯಗಳು ನಡೆಯಲಿದ್ದು ಮೊದಲ ಪಂದ್ಯ ಪ್ರೇಕ್ಷಕರಿಲ್ಲದೆ ನಡೆಯಲಿದೆ. ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಮರಳಿರುವುದರಿಂದ ತಂಡದ ಬ್ಯಾಟಿಂಗ್ ಬಲ ಹೆಚ್ಚಿದೆ. ಇನ್ನು ಇಂಗ್ಲೆಂಡ್ ತಂಡವೂ ಕೂಡ ಲಂಕರನ್ನ ವೈಟ್ ವಾಶ್ ಮಾಡಿ ಆತ್ಮವಿಶ್ವಾಸ ಹೆಚ್ಚಿಸಿ ಕೊಂಡಿದೆ. ಭಾರತ ಈ ಸರಣಿಯಲ್ಲಿ ಗೆದ್ದರೆ ಚೊಚ್ಚಲ ವಿಶ್ವ […]

ಇನ್ಮುಂದೆ ಮೈಸೂರಿನಲ್ಲಿ ಅಪ್ರಾಪ್ತರಿಗೆ ಪೆಟ್ರೋಲ್, ಡೀಸೆಲ್ ಹಾಕದಂತೆ ಪೊಲೀಸರು ಪೆಟ್ರೋಲ್ ಬಂಕ್ ಮಾಲೀಕರಿಗೆ ಮನವಿ ಮಾಡಿದ್ದಾರೆ. ಮೈಸೂರು ಡಿಸಿಪಿ ಗೀತಾ ಪ್ರಸನ್ನ ಅವರು, ಅಪ್ರಾಪ್ತರು ಪೆಟ್ರೋಲ್ ಹಾಕಿಸಿಕೊಳ್ಳಲು ಬಂದರೆ ಮಾಹಿತಿ ನೀಡಿ ಸಿಸಿ ಟಿವಿಯಲ್ಲಿ ನೋಂದಣಿ ಸಂಖ್ಯೆ ಅಪ್ರಾಪ್ತನ ಫೋಟೋ ತೆಗೆದುಕೊಂಡು ಪೊಲೀಸರಿಗೆ ಮಾಹಿತಿ ನೀಡಿ ಎಂದು ಸೂಚನೆ ನೀಡಿದ್ದಾರೆ.ಅಪ್ರಾಪ್ತರ ಬೈಕ್ ರೈಡ್ ನಿಂದ ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿವೆ. ಈ ಎಲ್ಲಾ ಬೆಳವಣಿಗೆಯಿಂದ ಎಚ್ಚೆತ್ತ ಮೈಸೂರು ಪೊಲೀಸರು ಹೊಸ […]

ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಸಕಲೇಶಪುರ ಅರೆಹಳ್ಳಿ 12ವರ್ಷದ ಸುಹಾನ ಎಂಬಾಕೆಯನ್ನು ಪುತ್ತೂರಿನಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್ ನಲ್ಲಿ ವೈದೇಹಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. 15 ದಿನಗಳಿಂದ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿಗೆ ಲಿಂಗ್ಸ್ ಟ್ರಾನ್ಸ್ಪೋರ್ಟ್ ಮಾಡುವಂತೆ ವೈದ್ಯರು ಸೂಚಿಸಿದರು… ಮಹಾವೀರ ಆಸ್ಪತ್ರೆಯ ವೈದ್ಯರಾದ ಸುರೇಶ್ ಪುತ್ತೂರಾಯರು ಇವರ ನೇತೃತ್ವದಲ್ಲಿ ಯುವತಿಯನ್ನು ಶಿಫ್ಟ್ ಮಾಡಲಾಯಿತು… ಇದನ್ನೂ ಓದಿ :ಕನಕಪುರ ಗ್ರಾಮಾಂತರ ಪೊಲೀಸರ ಭರ್ಜರಿ ಕಾರ್ಯಾಚರಣೆ

Advertisement

Wordpress Social Share Plugin powered by Ultimatelysocial