ಭಾರತ –ಚೀನಾ ಗಡಿ ಸಂಘರ್ಷ ನಡೀತಾ ಇದ್ದು, ನಮ್ಮ ಯೋಧರು ಚೀನಾ ಯೋಧರನ್ನ ಹಿಮ್ಮೆಟ್ಟಿಸಿದ್ದಾರೆ. ನಮ್ಮ ಸೈನಿಕರಿಗೆ ಗಂಭೀರವಾದ ಗಾಯಗಳಾಗಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ನಮ್ಮ ಗಡಿಯೊಳಗೆ ಚೀನೀ ಸೈನಿಕರ ಉಲ್ಲಂಘನೆಯ ಪ್ರಯತ್ನವನ್ನು ನಿಲ್ಲಿಸಲು ನಮ್ಮ ಸಶಸ್ತ್ರ ಪಡೆಗಳು ಯಾವಾಗಲೂ ಸಿದ್ಧವಾಗಿವೆ. ನಮ್ಮ ಸಶಸ್ತ್ರ ಪಡೆಗಳು ನಮ್ಮ ದೇಶದ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಬದ್ಧವಾಗಿವೆ, ನಮ್ಮ ಸಶಸ್ತ್ರ ಪಡೆಗಳ ಸಾಮರ್ಥ್ಯ, ಶೌರ್ಯ ಮತ್ತು ಬದ್ಧತೆಯನ್ನು ದೇಶದ […]

ಮುರುಘಾ ಮಠಕ್ಕೆ    ಹೊಸ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್ ವಸ್ತ್ರದ್ ಅವರನ್ನ ಮುರುಘಾ ಮಠಕ್ಕೆ ಆಡಳಿತಾಧಿಕಾರಿಯಾಗಿ ನೇಮಿಸಿ ರಾಜ್ಯ ಸರ್ಕಾರ ಉಪಕಾರ್ಯದರ್ಶಿ ಟಿಸಿ ಕಾಂತರಾಜ್ ಆದೇಶ ಹೊರಡಿಸಿದ್ದಾರೆ. ಮುರುಘ ಮಠದ ಲೆಕ್ಕಪತ್ರ,  ಹಣಕಾಸು ನಿರ್ವಹಣೆ ಮುರುಘ ಮಠದ ಚರ, ಸ್ಥಿರಾಸ್ತಿ, ಟ್ರಸ್ಟ್ , ಶಿಕ್ಷಣ ಸಂಸ್ಥೆ ಜವಾಬ್ದಾರಿ ಹಣಕಾಸು ದುರುಪಯೋಗ ತಡೆಯಲು ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

ಮಾಜಿ ಸಚಿವ, ಕಾಂಗ್ರೆಸ್‌ ಲೀಡರ್‌, ರಾಜಾ ಪಟೇರಿಯಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.ಪವಾಯಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡುವ ವೇಳೆ ಸಂವಿಧಾನವನ್ನು ಉಳಿಸಲು ಮೋದಿಯನ್ನು ಕೊಲ್ಲಲು ಸಿದ್ಧರಾಗಿರಿ ಎಂದು ಹೇಳುವ ಮೂಲಕ ರಾಜಾ ಪಟೇರಿಯಾ ವಿವಾದ ಸೃಷ್ಟಿಸಿದ್ದರು. ಈ ಹೇಳಿಕೆ ಬೆನ್ನಲ್ಲೇ ವಿಶೇಷ ಪೊಲೀಸ್ ತಂಡ ದಾಮೋಹ್ ಜಿಲ್ಲೆಯ ಹಟಾ ಪಟ್ಟಣದಲ್ಲಿರುವ ಪಟೇರಿಯಾ ಅವರ ನಿವಾಸಕ್ಕೆ ಹೋಗಿ ಅವರನ್ನು ಬಂಧಿಸಿದೆ. ಇನ್ನು ಹೇಳಿಕೆಗೆ ಸಂಬಂಧಪಟ್ಟಂತೆ  ರಾಜ್ಯ ಕಾಂಗ್ರೆಸ್‌ ನಾಯಕರು, ಪಟೇರಿಯಾ ಹೇಳಿಕೆಗೂ ನಮಗೂ […]

ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಬಿಜೆಪಿ ಪಕ್ಷದ ವತಿಯಿಂದ ಸಂಭ್ರಮಾಚಾರಣೆ , ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದ ಕಾರ್ಯಕ್ರಮ, ಭಾರತದ ಪ್ರಧಾನಿಗಳಿಗೆ ಹಾಗೂ ಬಿಜೆಪಿ ಪಕ್ಷಕ್ಕೆ ಜೈಕಾರ ಕೂಗುತ್ತ ಸಂಭ್ರಮಾಚಾರಣೆ, ಶ್ರೀನಿವಾಸಪುರ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಎಸ್ ಎಲ್ ಎನ್ ಮಂಜುನಾಥ್ ನೇತೃತ್ವ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಭರ್ಜರಿ ಜಯಗಳಿಸಲಿದೆ, ಭಾರತದ ಪ್ರಧಾನಿಗಳು ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳ ಆಡಳಿತವನ್ನು ಜನರು ಮೆಚ್ಚಿದ್ದಾರೆ, ಪಟ್ಟಣದಲ್ಲಿ […]

ಗುಜರಾತ್‌ನಲ್ಲಿ ಬಿಜೆಪಿ ಗೆಲುವಿನ ಹಾದಿಯಲ್ಲಿದ್ದು, ಈ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಬೀರಲ್ಲ ಎಂದು ಕಾಂಗ್ರೆಸ್‌ ಶಾಸಕ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ಯಾಕಂದ್ರೆ 2013 ರಲ್ಲಿ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಆಗ ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು. ಈಗಲೂ ಅಷ್ಟೇ ಗುಜರಾತ್‌ನಲ್ಲಿ ಬಿಜೆಪಿ ಗೆದ್ದ ಮಾತ್ರಕ್ಕೆ ಮುಂಬರುವ ನಮ್ಮ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬರುತ್ತೆ ಅನ್ನೋದು ಭ್ರಮೆ ಎಂದು ಗೆಲುವಿನ ಸಂಭ್ರಮದಲ್ಲಿರುವ ಬಿಜೆಪಿಗರಿಗೆ ಟಾಂಗ್‌ ನೀಡಿದರು. […]

ಇಂದು ಹಿಮಾಚಲ ಪ್ರದೇಶದ ಫಲಿತಾಂಶ ಹೊರಬೀಳಲಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಬಲವಾದ ಪೈಪೋಟಿ ನಡೀತಾ ಇದೆ. ಹಿಮಾಚಲ ಪ್ರದೇಶದ ಹಾಲಿ ಸಿಎಂ ಜೈರಾಂ ಠಾಕೂರ್‌ ಗೆಲುವಿನ ನಗೆ ಬೀರಿದ್ದಾರೆ. ರಾಜ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೈರಾಮ್ ಠಾಕೂರ್, 24,425 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಸದ್ಯಕ್ಕೆ ಬಿಜೆಪಿ 31 ಕ್ಷೇತ್ರ ಹಾಗೂ ಕಾಂಗ್ರೆಸ್‌ 34 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಇತರೆ ಅಭ್ಯರ್ಥಿಗಳು 3 ಕ್ಷೇತ್ರಗಳಲ್ಲಿ […]

  ಹಿಂದೂಗಳ ಪವಿತ್ರಗ್ರಂಥ ಭಗವದ್ಗೀತೆಯನ್ನ ಶಿಕ್ಷಣದಲ್ಲಿ ಸೇರಿಸಲು ಸರ್ಕಾರ ತುರ್ತುಕ್ರಮ ಕೈಗೊಳ್ಳಬೇಕು ಎಂದು, ಶಿರಸಿ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಒತ್ತಾಯಿಸಿದರು. ಶ್ರೀ ಭಗವದ್ಗೀತಾ ಅಭಿಯಾನದ ರಾಜ್ಯಮಟ್ಟದ ಮಹಾ ಸಮರ್ಪಣಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದ ಅವರು,  “ಇಂದಿನ ವಾತಾವರಣದಲ್ಲಿ, ವಿದ್ಯಾರ್ಥಿ ಮತ್ತು ಯುವಕರಲ್ಲಿ ಸಂಸ್ಕೃತಿಯ ಕೊರತೆ ಇದೆ. ಬಹಳ ಚಿಕ್ಕ ವಯಸ್ಸಿನಲ್ಲಿ, ಅವರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಭಗವದ್ಗೀತೆಯನ್ನು ಬೋಧಿಸುವುದರಿಂದ ಅನೇಕ […]

ರೆಡ್ಡಿ ಶ್ರೀರಾಮುಲು ಆಪ್ತತೆ ಬಗ್ಗೆ ಇಡೀ ನಾಡಿನ ಜನತೆಗೆ ಗೊತ್ತಿದೆ. ರಾಜಕೀಯವಾಘಿ ಅವರಿಬ್ಬರೂ ಎಷ್ಟು ಬಲಿಷ್ಠ ಸ್ಬೇಹಿತರು ಅನ್ನೋದಕ್ಕೆ 2008ರಲ್ಲಿ ಗಣಿನಾಡಿನಲ್ಲಿ ಕಮಲ ಅರಳಿಸಿದ್ದೇ ಸಾಕ್ಷಿ. ಬಿಜೆಪಿ ಗೆದ್ದು ಬರೋದಕ್ಕೆ ರೆಡ್ಡಿ ಬ್ರದರ್ಸ್ ಕಾರಣ ಅನ್ನೋದು ಗೊತ್ತಿರುವ ವಿಚಾರ. ಇಷ್ಟು ಆಪ್ತರಾಗಿದ್ದ ಈ ಇಬ್ಬರು ಪ್ರಾಣ ಸ್ನೇಹಿತರ ಮಧ್ಯೆ ಬಿರುಕು ಮೂಡಿದ್ಯಾ ಅನ್ನೋ ಪ್ರಶ್ನೆ ಮೂಡಿದೆ . ಇದಕ್ಕೆ ಬಲವಾದ ಸಾಕ್ಷಿ ಎಂದರೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಗಣಿ ಉದ್ಯಮಿ […]

ಇಂದು ಗುಜರಾತ್ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೀತಾ ಇದೆ.  ಪ್ರಧಾನಿ ಮೋದಿಯವರೂ ಕೂಡ ಅಹಮದಾಬಾದ್ ನ ಸಬರಿಮತಿ ಕ್ಷೇತ್ರದ ರಾಣಿಪ್ ಮತಗಟ್ಟೆಗೆ ಹೋಗಿ ಮತ ಚಲಾವಣೆ ಮಾಡಿದರು. ಮತಚಲಾವಣೆ ಬಳಿಕ  ಮಾತನಾಡಿದ ಪ್ರಧಾನಿ ಮೋದಿ – ದೇಶದಾದ್ಯಂತ ಚುನಾವಣೆಗಳು ನಡೀತಾ ಇದೆ. ಜೊತೆಗೆ ಸದ್ಯದಲ್ಲಿಯೇ ಸಾಕಷ್ಟು ಚುನಾವಣೆ ಎದುರಾಗ್ತಿದೆ. ಎಲ್ಲಾ ಚುನಾವಣೆಯಲ್ಲೂ ಮತದಾರರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಮತ ಚಲಾಯಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು. ಜೊತೆಗೆ […]

ಚುನಾವಣಾ ಆಯೋಗವು ರೋಡ್‌ಶೋಗಳು, ‘ಪಾದಯಾತ್ರೆಗಳು’, ಸೈಕಲ್ ಮತ್ತು ವಾಹನ ರ್ಯಾಲಿಗಳ ಮೇಲಿನ ನಿಷೇಧವನ್ನು ವಿಸ್ತರಿಸಿದೆ ಆದರೆ ಐದು ರಾಜ್ಯಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳಿಗಾಗಿ ಒಳಾಂಗಣ ಮತ್ತು ಹೊರಾಂಗಣ ರಾಜಕೀಯ ಸಭೆಗಳಿಗೆ ನಿರ್ಬಂಧಗಳನ್ನು ಸಡಿಲಿಸಿದೆ. ದೇಶದಲ್ಲಿನ ಕರೋನವೈರಸ್ ಸಾಂಕ್ರಾಮಿಕ ಪರಿಸ್ಥಿತಿಯನ್ನು ನಿರ್ಣಯಿಸಲು ಸಮಿತಿಯು ಶನಿವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿಯೊಂದಿಗೆ ಸಭೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. “ಹೊರಾಂಗಣ ಸಭೆ, ಒಳಾಂಗಣ ಸಭೆಗಳು, ರ್ಯಾಲಿಗಳಿಗೆ ಸಂಬಂಧಿಸಿದ ನಿರ್ಬಂಧಗಳನ್ನು […]

Advertisement

Wordpress Social Share Plugin powered by Ultimatelysocial