ಸಿಡಿ ಲೇಡಿಯಿಂದ ಡಿಕೆಶಿ, ಸಿದ್ದು ಹೆಸರು ಉಲ್ಲೇಖ..! |ಸಿಡಿ‌ ಲೇಡಿಯಿಂದ ಮತ್ತೊಂದು ವೀಡಿಯೋ ರಿಲೀಸ್

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣದಲ್ಲಿ ಜಾರಕಿಹೊಳಿ ದೂರು ಕೊಟ್ಟ ಬೆನ್ನಲ್ಲೆ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಸಿಡಿ ಲೇಡಿ ಇದೀಗ ಮತ್ತೆ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, ಎಸ್ ಐಟಿ ಮೇಲೆನೇ ಗಂಭೀರ ಆರೋಪ ಮಾಡಿದ್ದಾಳೆ. ಮಾರ್ಚ್ 12 ರಂದೇ ತಾನು ಎಸ್ ಐಟಿ ಗೆ ದೂರು ನೀಡಿದ್ದೇ. ಆದರೆ ರಮೇಶ್ ಜಾರಕಿಹೊಳಿ ದೂರು ನೀಡಿದ ಬಳಿಕ ಅರ್ಧ ಗಂಟೆಯಲ್ಲೇ ತಮ್ಮ ದೂರಿನ ವಿಡಿಯೋ ಬಿಡುಗಡೆ ಮಾಡಲಾಗಿದೆ ಎಂದು ಯುವತಿ ದೂರಿದ್ದಾಳೆ. ಎಸ್ ಐಟಿಯವರು ತಮ್ಮ ಮೇಲೆ ಯಾಕೆ ವಿರುದ್ಧ ತನಿಖೆಗೆ ಮುಂದಾಗಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ ಎಂದಿರುವ ಯುವತಿ, ಸದ್ಯಕ್ಕೆ ತಾನು ಎಸ್ ಐಟಿ ಮುಂದೆ ಬರುವುದಿಲ್ಲ ಎಂದಿದ್ದಾಳೆ..!
ಇನ್ನು ಇಂದು ಬಿಡುಗಡೆಯಾದ 2ನೇ ವಿಡಿಯೋದಲ್ಲಿಯೂ ತಮ್ಮ ಪೋಷಕರ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸಿಡಿ ಲೇಡಿ, ಅಸಲಿಗೆ ತಮ್ಮ ತಂದೆ ತಾಯಿಗಳಿಂದ ಬಲವಂತವಾಗಿ ಕಿಡ್ನ್ಯಾಪ್ ಕೇಸ್ ದಾಖಲಿಸಲಾಗಿದೆ ಎಂದು ದೂರಿದ್ದಾಳೆ. ಅವರು ಎಲ್ಲಿದ್ದಾರೆ ಎಂದು ತಮಗೆ ಗೊತ್ತಿಲ್ಲ. ಅವರ ಸುರಕ್ಷತೆ ತಮಗೆ ಮುಖ್ಯ ಎಂದಿದ್ದಾಳೆ..!

 

Please follow and like us:

Leave a Reply

Your email address will not be published. Required fields are marked *

Next Post

ಸಿಡಿ ಲೇಡಿ ವಿಚಾರದಲ್ಲಿ ನಾನು ಇಂಟರ್ಫಿಯರ್ ಆಗಲ್ಲ.!

Thu Mar 25 , 2021
ಸಿಡಿ ಸಂತ್ರಸ್ಥೆ ರಿಲೀಸ್ ಮಾಡಿರುವ 2ನೇ ವಿಡಿಯೋ ಬಗ್ಗೆ ಗೃಹ ಸಚಿವ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ನಾನು ಎಸ್ಐಟಿ ತನಿಖೆಯಲ್ಲಿ ಇಂಟರ್ ಫಿಯರ್ ಆಗಲ್ಲ, ಎಸ್.ಐ.ಟಿ ಮುಖ್ಯಸ್ಥ ಸೋಮೇಂದು ಮುಖರ್ಜಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ, ಸದ್ಯ ರಮೇಶ್ ಜಾರಕಿಹೊಳಿ ಹೇಳಿಕೆ ಪಡೆದುಕೊಂಡಿದ್ದೇವೆ, ಯುವತಿಯ ಅಪೇಕ್ಷೆಯಂತೆ  ಯುವತಿಗೂ ಅವರ ಪೋಷಕರಿಗೂ ರಕ್ಷಣೆ ಕೊಡುವುದಾಗಿ ಬೊಮ್ಮಾಯಿ ತಿಳಿಸಿದ್ದಾರೆ. ಇದನ್ನೂ ಓದಿ: ಸಿಡಿ ಲೇಡಿಯಿಂದ ಡಿಕೆಶಿ, ಸಿದ್ದು ಹೆಸರು ಉಲ್ಲೇಖ..! |ಸಿಡಿ‌ […]

Advertisement

Wordpress Social Share Plugin powered by Ultimatelysocial