ಚೇತನ್ ಕುಮಾರ್ ನಿರ್ದೇಶನದ ಮುಂದಿನ ಚಿತ್ರಕ್ಕೆ ಇಶಾನ್ ನಾಯಕ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ “ಜೇಮ್ಸ್”.
ಈ ಚಿತ್ರವನ್ನು ಖ್ಯಾತ ನಿರ್ದೇಶಕ ಹಾಗೂ ಗೀತರಚನೆಕಾರ ಚೇತನ್ ಕುಮಾರ್ (ಬಹದ್ದೂರ್) ನಿರ್ದೇಶಿಸಿದ್ದರು.

” ಜೇಮ್ಸ್” ಸಿನಿಮಾವನ್ನು ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ದೊಡ್ಡಮಟ್ಟದ ಯಶಸ್ಸು ಮಾಡಿದ್ದು ಎಲ್ಲರಿಗೂ ತಿಳಿದ ಸಂಗತಿ.

“ಜೇಮ್ಸ್” ನಂತರ ನಿರ್ದೇಶಕ ಚೇತನ್ ಕುಮಾರ್ ಅವರ ಮುಂದಿನ ಸಿನಿಮಾ ಯಾವುದು? ಎಂಬ ಕುತೂಹಲ ಎಲ್ಲರಲ್ಲೂ ಇತ್ತು.
ಆ ಕುತೂಹಲ ಕ್ಕೆ ಈಗ ತೆರೆ ಬಿದ್ದಿದೆ.
ಸದ್ಯದಲ್ಲೇ ಚೇತನ್ ಕುಮಾರ್ ನಿರ್ದೇಶನದ ಚಿತ್ರವೊಂದು ಆರಂಭವಾಗಲಿದೆ. “ರೆಮೋ” ಚಿತ್ರದ ಹಾಡುಗಳು, ಟೀಸರ್ ಮೂಲಕ ಈಗಾಗಲೇ ಎಲ್ಲರ ಗಮನ ಸೆಳೆದಿರುವ ಸುರದ್ರೂಪಿ ನಟ ಇಶಾನ್ ಈ ಚಿತ್ರದ ನಾಯಕನಾಗಿ ನಟಿಸಲಿದ್ದಾರೆ.

“ರೆಮೋ” ಚಿತ್ರದ ಬಿಡುಗಡೆ ನಂತರ ಈ ಚಿತ್ರ ಆರಂಭವಾಗಲಿದೆ. ಶೀಘ್ರದಲ್ಲೇ ಈ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡುವುದಾಗಿ ಚೇತನ್ ಕುಮಾರ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ತ್ಯಾಗ ಬಲಿದಾನಕ್ಕೆ ಮತ್ತೊಂದು ಹೆಸರೇ ಬಿಜೆಪಿ ಪಕ್ಷ " ಡಾ"ಸಂದೀಪಕುಮಾರ ಕೆ, ಸಿ,

Wed Jul 20 , 2022
ತ್ಯಾಗ ಬಲಿದಾನದಕ್ಕೆ ಮತ್ತೊಂದು ಹೆಸರೇ ಬಿಜೆಪಿ ಪಕ್ಷ ಎಂದು ರಾಜ್ಯಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಡಾ “ಸಂದೀಪಕುಮಾರ, ಕೆ,ಸಿ ಹೇಳಿದರು. ಅವರು ಲಕ್ಷ್ಮೇಶ್ವರ ಪಟ್ಟಣದ ಬಾಳಿಹಳ್ಳಿಮಠ ಕಲ್ಯಾಣ ಮಂಟಪ ದಲ್ಲಿ ನಡೆದ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಣಿ ಸಭೆ ಕಾರ್ಯಕಾರಣಿ ಉದ್ಘಾಟನೆ ಮಾಡಿ ಮಾತನಾಡುತ್ತ ಯುವ ಮೋರ್ಚಾದ ಕಾರ್ಯವೈಖರಿ, ಅವಲೋಕನ ನಡೆಸುವುದೇ ಕಾರ್ಯಕಾರಣಿ ಉದ್ದೇಶ ವಾಗಿದ್ದು ಯುವಕರ ನೇತೃತ್ವವನ್ನು ಯುವಕರೆ ರಾಷ್ಟ್ರಸೇವೆಯಲ್ಲಿ ತೊಡಗಿಸುವ ಪಕ್ಷ ಇದೆ ಅಂದ್ರೆ ಅದು […]

Advertisement

Wordpress Social Share Plugin powered by Ultimatelysocial