ರಣರಂಗವಾದ ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’: ಪರಸ್ಪರ ನಿಂದಿಸಿಕೊಂಡು ಕಿತ್ತಾಡಿದ ‘ನಿರ್ಮಾಪಕರು’

ಬೆಂಗಳೂರು: ಕರ್ನಾಟಕ ಫಿಲ್ಮ್ ಛೇಂಬರ್ ಚುನಾವಣೆ ನಡೆದು ಮೂರು ವರ್ಷಗಳಾಗಿವೆ. ಚುನಾವಣೆ ನಡೆಸುವಂತೆ ಸಂಬಂಧ ಪಟ್ಟಂದ ಇಲಾಖೆಯಿಂದ ಆದೇಶಿಸಲಾಗಿದ್ದರೂ, ಇದುವರೆಗೆ ಚುನಾವಣೆ ನಡೆಸಿಲ್ಲ. ಈ ಹಿನ್ನಲೆಯಲ್ಲಿ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆವರಣದಲ್ಲಿ ನಿರ್ಮಾಪಕರಿಬ್ಬರು ಕಿತ್ತಾಡಿಕೊಳ್ಳುವ ಮೂಲಕ ರಣರಂಗವಾಗಿತ್ತು.ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆವರಣದಲ್ಲಿ ನಿರ್ಮಾಪಕರಾದಂತ ಭಾ ಮಾ ಹರೀಶ್, ಎನ್ ಎಂ ಸುರೇಶ್ ಹಾಗೂ ಎ ಗಣೇಶ್ ಅವರು ಚುನಾವಣೆ ಸಂಬಂಧ ಪರಸ್ಪರ ನಿಂದಿಸಿಕೊಂಡು ಕಿತ್ತಾಡಿಕೊಂಡಿದ್ದಾರೆ. ಅಲ್ಲದೇ ಕೈ ಕೈ ಮಿಲಾಯಿಸೋ ಹಂತಕ್ಕೂ ವಾಗ್ವಾದ ನಡೆದಿದೆ ಎನ್ನಲಾಗಿದೆ.ಇದಷ್ಟೇ ಅಲ್ಲದೇ ಮೂರು ವರ್ಷ ಕಳೆದ್ರೂ ಚುನಾವಣೆ ನಡೆಸದಂತ ಎನ್ ಎಂ ಸುರೇಶ್ ಬಗ್ಗೆ ವಾಗ್ದಾಳಿ ನಡೆಸಿದಂತ ನಿರ್ಮಾಪಕ ಭಾ ಮಾ ಹರೀಶ್, ಫಿಲ್ಮ ಛೇಂಬರ್ ಚುನಾವಣೆ ನಡೆಸದೇ ಇದ್ದರೇ ಅಹೋರಾತ್ರಿ ಧರಣಿ, ಪ್ರತಿಭಟನೆ ನಡೆಸುವಂತ ಎಚ್ಚರಿಕೆಯನ್ನು ನೀಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

2022 ರ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರು ಮೋದಿಯವರ ಬಿಜೆಪಿಗೆ ಏಕೆ ಮತ ಹಾಕಿದರು?

Tue Mar 15 , 2022
ಭಾರತೀಯ ಚುನಾವಣೆಗಳು ಸಾಂಪ್ರದಾಯಿಕವಾಗಿ ಪುರುಷರಿಗಿಂತ ಕಡಿಮೆ ಮಹಿಳೆಯರು ಮತ ಚಲಾಯಿಸುವುದನ್ನು ನೋಡಿದ್ದಾರೆ, ಆದರೆ ಕಳೆದ ಒಂದು ದಶಕದಿಂದ ಈ ಅಂತರವು ಕ್ರಮೇಣ ಕುಗ್ಗುತ್ತಿದೆ. ಮಾರ್ಚ್ 10 ರಂದು ಪ್ರಕಟವಾದ ಇತ್ತೀಚಿನ ವಿಧಾನಸಭೆ ಚುನಾವಣೆಯ ಫಲಿತಾಂಶಗಳಲ್ಲಿ-ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರದ ಐದು ರಾಜ್ಯಗಳ ಪೈಕಿ ನಾಲ್ಕರಲ್ಲಿ ಮಹಿಳೆಯರ ಮತದಾನದ ಶೇಕಡಾವಾರು ಪುರುಷರಿಗಿಂತ ಹೆಚ್ಚಿದೆ – ವ್ಯತ್ಯಾಸವು ಅತ್ಯಲ್ಪವಾಗಿದೆ. ಪಂಜಾಬ್ಇದು ಏಕೆ ಗಮನಾರ್ಹವಾಗಿದೆ ಐತಿಹಾಸಿಕವಾಗಿ, ಮಹಿಳೆಯರು ತಮ್ಮ ಫ್ರ್ಯಾಂಚೈಸ್ ಅನ್ನು […]

Advertisement

Wordpress Social Share Plugin powered by Ultimatelysocial