ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಮಾತು ನೇರಾ ನೇರ. ಮನಸ್ಸಿಗೆ ಅನಿಸಿದ್ದನ್ನು ಫಿಲ್ಟರ್ ಇಲ್ಲದೆ ಮಾತಾಡುತ್ತಾರೆ.

ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಮಾತು ನೇರಾ ನೇರ. ಮನಸ್ಸಿಗೆ ಅನಿಸಿದ್ದನ್ನು ಫಿಲ್ಟರ್ ಇಲ್ಲದೆ ಮಾತಾಡುತ್ತಾರೆ. ಇದು ಇವತ್ತಿನ ದಾಟಿಯಲ್ಲ. ಹಲವು ದಿನಗಳಿಂದ ದರ್ಶನ್ ನಡೆ,ನುಡಿ ಎಲ್ಲವೂ ಹೀಗೆ ಇರುತ್ತೆ.

ಕೆಲವೊಮ್ಮೆ ದರ್ಶನ್ ಇಂತಹ ನೇರ ನುಡಿಗಳಿಂದಲೇ ಪೇಚಿಗೆ ಸಿಲುಕಿದ್ದೂ ಇದೆ.

ಬೇಡ ಅಂದರೂ ವಿವಾದಗಳು ಇವರನ್ನು ಹಿಂಬಾಲಿಸಿಕೊಂಡು ಬರುತ್ತವೆ. ಕೆಲವು ದಿನಗಳಿಂದ ಚಾಲೆಂಜಿಂಗ್‌ ಸ್ಟಾರ್ ಸುದ್ದಿಯಲ್ಲಿದ್ದಾರೆ.

ಹೊಸಪೇಟೆಯಲ್ಲಿ ಚಪ್ಪಲಿ ಎಸೆದ ಪ್ರಕರಣದ ಬಳಿಕ ದರ್ಶನ್ ಇದೇ ಮೊದಲ ಬಾರಿಗೆ ಮನಬಿಚ್ಚಿ ಮಾತಾಡಿದ್ದಾರೆ. ನಿರೂಪಕ ಆರ್‌ ಜೆ ಮಯೂರ್ ಸಂದರ್ಶನದಲ್ಲಿ ದರ್ಶನ್ ಮುಕ್ತವಾಗಿ ಕೆಲವು ವಿಷಯಗಳ ಬಗ್ಗೆ ಮಾತಾಡಿದ್ದಾರೆ. ಯಾರು ನೆಮ್ಮದಿಯಾಗಿ ನಿದ್ದೆ ಮಾಡುತ್ತಿದ್ದರೋ ಅವರ ನಿದ್ದೆ ಕೆಡಿಸಿದ್ದೀನಿ ಅಂದಿದ್ದಾರೆ. ಈ ಸಂದರ್ಶನದ ಸಾರಾಂಶ ಇಲ್ಲಿದೆ.

‘ದರ್ಶನ್‌ನಿಂದ ಅವರ ನಿದ್ದೆ ಕೆಡುತ್ತಿದೆ'”ಒಂದು ಖುಷಿ ಪಡುತ್ತೇನೆ. ನೀವೆಲ್ಲಾ ಟಾರ್ಗೆಟ್ ಅನ್ನುತ್ತಿದ್ದೀರಲ್ಲ.. ಯಾರು ಯಾರು ನೆಮ್ಮದಿಯಾಗಿ ಬದುಕುತ್ತಿದ್ದಾರಲ್ಲ, ಅವರ ನಿದ್ದೆ ಕೆಡಿಸಿದ್ದೀನಿ ಅನ್ನೋದೊಂದು ನನಗೆ ಅಭ್ಯಾಸ. ನನ್ನ ಬಗ್ಗೆ ನನಗೆ ಹೆಮ್ಮೆಯಿದೆ. ದರ್ಶನ್‌ನಿಂದ ಅವರ ನಿದ್ದೆ ಕೆಡುತ್ತಿದೆಯಾ? ಮಾಡಿಕೊಳ್ಳಿ. ನಾನಂತೂ ನೆಮ್ಮದಿಯಾಗಿ ನಿದ್ದೆ ಮಾಡುತ್ತಿದ್ದೇನೆ.” ಎಂದು ದರ್ಶನ್ ಹೇಳಿದ್ದಾರೆ.

‘ನನ್ನ ದುಡ್ಡಿಂದ ನಾನು ಹೀರೊ ಆಗಿಲ್ಲ’

“ಪ್ರೊಡಕ್ಷನ್ ಹೌಸ್‌ನಿಂದ ಸಿನಿಮಾ ಮಾಡುತ್ತಿರೋದು ದೊಡ್ಡ ವಿಷಯವೇನಲ್ಲ. ಆಮೇಲೆ ನನ್ನ ಪ್ರೊಡಕ್ಷನ್‌ ಹೌಸ್‌ನಲ್ಲಿ ನಾನೇ ಸಿನಿಮಾ ಮಾಡುವುದಕ್ಕೆ ಆಗುವುದಿಲ್ಲ. ನಾನು ಇನ್ನೊಬ್ಬರ ದುಡ್ಡಿನಿಂದ ತಾನೇ ಹೀರೊ ಆಗಿರೋದು. ನನ್ನ ದುಡ್ಡಿಂದ ನಾನು ಹೀರೊ ಆಗಿಲ್ಲ. ಇಲ್ಲ ನನ್ನ ಅಪ್ಪನ ಮನೆಯಿಂದ ತದು ಹಾಕಿಲ್ಲ.ಬೇರೆ ನಿರ್ಮಾಪಕರಿಗೂ ನಾನು ಡೇಟ್ಸ್ ಕೊಡಬೇಕು. ಅವರೂ ಕೆಲಸ ಮಾಡಬೇಕು. ನಮ್ಮ ಪ್ರೊಡಕ್ಷನ್ ಹೌಸ್‌ನಲ್ಲಿ ಇವತ್ತಿಲ್ಲ ಇನ್ನೊಂದು ದಿನ ಮಾಡಿಕೊಳ್ಳಬಹುದು.”

ಎರಡು ಕೈಯಿಂದ ತಾನೇ ಚಪ್ಪಾಳೆ?

ಫ್ಯಾನ್ಸ್ ವಾರ್ ಬಗ್ಗೆ ಕೇಳಿದ ಪ್ರಶ್ನೆಗೆ ದರ್ಶನ್ ಮನಬಿಚ್ಚಿ ಮಾತಾಡಿದ್ದಾರೆ. “ಎರಡು ಕೈಯಿಂದ ತಾನೇ ಚಪ್ಪಾಳೆ. ಒಬ್ಬರು ಮಾತ್ರ ಆಟ ಆಡೋದಿಲ್ಲ ಅಲ್ವಾ? ನೀವು ಸುಮ್ಮನಿದ್ದರೆ, ಅವರೂ ಸುಮ್ಮನಿರುತ್ತಾರೆ. ಒಬ್ಬರಿಗೆ ಒಬ್ಬರು ಬೇಕೇ ಬೇಕು. ಇದನ್ನು ಮಾಡಬೇಕು. ಮಾಡಬಾರದು ಅಂತ ಹೇಳಲ್ಲ. ಅಲ್ಲೇ ಕಾಣಿಸುತ್ತಿದೆ ಅದು ಏನು ಅಂತ. ಅದು ಹುಚ್ಚು ಅಭಿಮಾನ. ನಮ್ಮವನಿಗೆ ಹೀಗಂದ ಅಂದರೆ, ಅವರೆಇಗೂ ಹೀಗಂದೇ ಅನ್ನುತ್ತೇವೆ. ಇಲ್ಲಿವರೆಗೂ ನಾನು ತೆಡೆಯುತ್ತಿದ್ದೆ. ಆದರೆ ಮೊನ್ನೆಯಿಂದ ನಾನು ಸುಮ್ಮನಾದೆ. ಮಾತಾಡುವುದಕ್ಕೆ ಹೋದಾಹ ನನಗೆ ಬೈಗುಳ ಬಂತು. ಸುಮ್ಮನೆ ಇದ್ದುಬಿಡಣ್ಣ. ನಾವು ನೋಡಿಕೊಳ್ಳುತ್ತೇನೆ ಅಂದ್ರು.” ಎಂದು ಅಭಿಮಾನಿಗಳ ಬಗ್ಗೆ ಮಾತಾಡಿದ್ದಾರೆ.

‘ತಂಗಳು ತಿಂದುಕೊಂಡು ಇರುತ್ತೆ'”ನಾನು ತುಂಬಾ ಸರ್ವೆ ಸಾಧಾರಣ ಮನುಷ್ಯ. ಪ್ರತಿದಿನ ವರ್ಕ್‌ಔಟ್ ಮಾಡುತ್ತೇನೆ. ನಿನ್ನೆ ಮೊನ್ನೆಯದು ಹಳಕು-ಪಳುಕು ತಂಗಳು ತಿಂದುಕೊಂಡು ಇರುತ್ತೇನೆ. ನನಗೆ ಫ್ರೆಶ್‌ ಬೇಕು ಅಂತಾನೇ ಇಲ್ಲ. ನಿನ್ನೆ ಏನೋ ತಿಂದಿರುತ್ತೇನೆ. ಅದನ್ನೇ ಎತ್ತಿಟ್ಟಿರು ಬೆಳಗ್ಗೆನೂ ತಿನ್ನುತ್ತೇನೆ ಎನ್ನುತ್ತೇನೆ.” ಎಂದು ತಾನೆಷ್ಟು ಸಿಂಪಲ್ ಅನ್ನೋದನ್ನು ಈ ಸಂದರ್ಶನದಲ್ಲಿ ಹೇಳಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.

Tue Jan 17 , 2023
  ಇಂದಿನ ಯುವ ಪೀಳಿಗೆ ತಮ್ಮಲ್ಲಿರುವ ಕೌಶಲ್ಯವನ್ನು ಬಳಸಿಕೊಂಡು ಉತ್ತಮ ಶಿಕ್ಷಣ ಪಡೆಯುವುದರ ಮೂಲಕ ಉದ್ಯೋಗವಂತರಾಗುವುದರೊಂದಿಗೆ ದೇಶದ ಅಭಿವೃದ್ದಿ ಕೈ ಜೋಡಿಸಬೇಕು ಎಂದು ತಹಶಿಲ್ದಾರ ಪರಶುರಾಮ ಸತ್ತಿಗೇರಿ ಕರೆ ನೀಡಿದರು. ನಗರದ ತಾಯಿ ಪಾರ್ವತಿ ಬಳಗ ಕಲಾ ಮತ್ತು ವಾಣಿಜ್ಯ ಬಾಲಕಿಯರ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಇವರ ಸಹಯೋಗದಲ್ಲಿ ರಾಷ್ಟ್ರೀಯ ಯುವ ಜನೋತ್ಸವ ಮತ್ತು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ […]

Advertisement

Wordpress Social Share Plugin powered by Ultimatelysocial