ಚಳಿಗಾಲದಲ್ಲಿ ಶೀತ, ತಲೆನೋವು ಮತ್ತು ಜ್ವರಕ್ಕೆ ಇಲ್ಲಿದೆ ಮನೆಮದ್ದು

ಚಳಿಗಾಲದಲ್ಲಿ ಶೀತ, ತಲೆನೋವು ಮತ್ತು ಜ್ವರಕ್ಕೆ ಇಲ್ಲಿದೆ ಮನೆಮದ್ದು

ಋತು ಬದಲಾದಂತೆ ಶೀತ ಮತ್ತು ಜ್ವರದಂತ ಅನಾರೋಗ್ಯಕ್ಕೆ ತುತ್ತಾಗುವುದು ಸಾಮಾನ್ಯ. ಈ ಅನಾರೋಗ್ಯ ಸಮಸ್ಯೆಗಳಿಂದ ಹೊರಬರಲು ಕೆಲವು ಮನೆಮದ್ದುಗಳನ್ನು ಬಳಸಬಹುದು.

ಮೂಗು ಕಟ್ಟುವುದು, ಪದೇಪದೇ ಸೀನುವುದು ಮತ್ತು ಕೆಮ್ಮುವುದು ಚಳಿಗಾಲದಲ್ಲಿ ಕಾಡುವ ಸಮಸ್ಯೆ.

ಕೊರೊನಾ ಪ್ರಕರಣಗಳೂ ಹೆಚ್ಚಾಗ್ತಿರುವ ಕಾರಣ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಬಹಳ ಮುಖ್ಯ. ಶೀತ ಅಥವಾ ಜ್ವರದ ಲಕ್ಷಣಗಳು ಕಂಡುಬಂದರೆ ಶುಂಠಿಯ ಸೇವನೆ ಮಾಡಿ. ಶುಂಠಿ ಚಹಾ ಮತ್ತು ಶುಂಠಿ ಹಾಲು ಇಂತಹ ಸಮಸ್ಯೆಗಳಿಗೆ ರಾಮಬಾಣ. ಶುಂಠಿಯನ್ನು ಒಂದು ಕಪ್ ಬಿಸಿ ನೀರು ಅಥವಾ ಹಾಲಿಗೆ ಹಾಕಿ ಚೆನ್ನಾಗಿ ಕುದಿಸಬೇಕು. ಈ ವಿಧಾನ ಶೀತ ಮತ್ತು ಸಾಮಾನ್ಯ ಜ್ವರದಿಂದ ಬೇಗ ಪರಿಹಾರವನ್ನು ನೀಡುತ್ತದೆ.

ಅರಿಶಿನ ಹಾಲು ಶೀತಕ್ಕೆ ಪರಿಹಾರವನ್ನು ನೀಡುವುದಷ್ಟೇ ಅಲ್ಲದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬಿಸಿ ಹಾಲಿಗೆ ಒಂದು ಚಮಚ ಅರಿಶಿನವನ್ನು ಹಾಕಿ ಕುದಿಸಿ ಕುಡಿಯಬೇಕು. ಇದರಿಂದ ಶೀತಕ್ಕೆ ಶೀಘ್ರ ಪರಿಹಾರ ದೊರೆಯುತ್ತದೆ. ಅರಿಶಿನವು ಆಯಂಟಿಬಯೋಟಿಕ್ ಗುಣಗಳನ್ನು ಹೊಂದಿದೆ. ಸೂರ್ಯನ ಬೆಳಕು ದೇಹಕ್ಕೆ ಅಗತ್ಯ. ಸ್ವಲ್ಪ ಸಮಯದವರೆಗೆ ಬಿಸಿಲಿನಲ್ಲಿ ಕುಳಿತುಕೊಳ್ಳಬೇಕು.

ಚಳಿಗಾಲದಲ್ಲಿ ನೀರಿನ ಬಳಕೆ ಹೆಚ್ಚು ಮಾಡಿ. ಚಳಿಗಾಲದಲ್ಲಿ ದೇಹ ಬೆವರುವುದು ಕಡಿಮೆ. ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ದೇಹದ ನೀರಿನಂಶ ಸಮತೋಲನದಲ್ಲಿಡಲು ಬಿಸಿ ನೀರು ಅಥವಾ ಬೆಚ್ಚಗಿನ ನೀರನ್ನು ಸಾಧ್ಯವಾದಷ್ಟು ಕುಡಿಯಬೇಕು. ತರಕಾರಿಯ ಬಿಸಿ ಸೂಪ್ ಕೂಡ ಉತ್ತಮ ಮನೆಮದ್ದಾಗಿದೆ. ಗಂಟಲು ಉರಿ ಅಥವಾ ನಾಲಿಗೆ ರುಚಿಸದೆ ಇರುವಾಗ ಬಿಸಿ ಸೂಪ್ ಕುಡಿಯಿರಿ. ಸ್ವಲ್ಪ ಬ್ಲ್ಯಾಕ್ ಪೆಪ್ಪರ್ ಹಾಕಿ ಮಾಡಿದ ಸೂಪ್ ಸೇವಿಸುವುದರಿಂದ ಗಂಟಲು ಉರಿ ಮತ್ತು ಶೀತ ಬಹುಬೇಗ ಕಡಿಮೆ ಆಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಗತ್ತನ್ನು ಸಂಕಷ್ಟಕ್ಕೆ ದೂಡಿರುವ 'ಸೂಪರ್ ಬಗ್ಸ್'

Thu Jan 6 , 2022
ಹಲವು ವರ್ಷಗಳಿಂದ ಪ್ರಪಂಚವನ್ನು ಆವರಿಸಿರುವ ಕಾಯಿಲೆಗಳಿಗೆ ಮುಖ್ಯ ಕಾರಣವೆಂದರೆ ಸೂಕ್ಷ್ಮಜೀವಿಗಳು. ಹಿಂದೆಂದೂ ಕೇಳದ ಅರಿಯದ ಈ ಜೀವಿಗಳು ಜನಜೀವನವನ್ನು ಅಸ್ಥಿರಗೊಳಿಸಿದೆ. ಆಧುನಿಕ ವೈದ್ಯಕೀಯ ವಿಜ್ಞಾನವು ಮುಂದುವರಿದಂತೆ ಈ ರೋಗಾಣುಗಳ ವಿರುದ್ಧ ಔಷಧಿಗಳನ್ನು ಆವಿಷ್ಕರಿಸಿ ಅನೇಕ ಜನರ ಪ್ರಾಣವನ್ನು ಉಳಿಸಿವೆ. ಆದರೆ ಈ ಸೂಕ್ಷ್ಮಜೀವಿಗಳು ಸಹ ತಾವೇನು ಕಡಿಮೆಯಿಲ್ಲವೆಂಬಂತೆ ತಮ್ಮ ಯುದ್ಧವನ್ನು ಮುನುಷ್ಯರ ಮೇಲೆ ಸಾಧಿಸುತ್ತಿವೆ. ಆಧುನಿಕ ವಿಜ್ಞಾನವು ಆವಿಷ್ಕರಿಸಿದ ಔಷಧಿಗಳಿಗೆ ತಾವುಗಳು ಸೋಲುವುದಿಲ್ಲ ಎಂಬ ಪ್ರತ್ಯುತ್ತರ ನೀಡುತ್ತಿವೆ. ಇಂತಹ ಸೂಕ್ಷ್ಮಜೀವಿಗಳನ್ನು […]

Advertisement

Wordpress Social Share Plugin powered by Ultimatelysocial