ಚಾಮರಾಜನಗರದ ಸುಭ್ರಮಣ್ಯ ಸ್ವಾಮಿ ದೇವಸ್ಥಾನಲ್ಲಿ 5 ನೇ ವರ್ಷದ ಆರಾಧನಾ ಮಹೋತ್ಸವ

ಚಾಮರಾಜನಗರದ ಗೂಳಿಪುರ ಗ್ರಾಮದ ಸುಭ್ರಮಣ್ಯ ಸ್ವಾಮಿ ದೇವಸ್ಥಾನಲ್ಲಿ 5 ನೇ ವರ್ಷದ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು….ಗ್ರಾಮದಲ್ಲಿ ಸುಭ್ರಮಣ್ಯ ಸ್ವಾಮಿಯ ಉತ್ಸವವನ್ನು ನಡೆಸಿ. ನಂತರ ಅನ್ನ ಸಂತರ್ಪಣೆಯನ್ನು ಗ್ರಾಮಸ್ಥರು ಏರ್ಪಡಿಸಿದರು..ಆರಾಧನಾ ಮಹೋತ್ಸವಕ್ಕೆ ಹೊಂಡರಬಾಳು ಮಠದ ನೀಲಕಂಠಶಿವಾಚಾರ್ಯ ಸ್ವಾಮೀಜಿಗಳು ಚಾಲನೆ ನೀಡಿ ಮಾತನಾಡಿದರು..ಗ್ರಾಮಸ್ಥರು 3 ವರ್ಷಗಳಿಂದ ಈ ಅನ್ನ ಸಂತರ್ಪಣೆ ಮಾಡಿಕೊಂಡು ಬರುತ್ತಿದ್ದು, ದೇವಸ್ಥಾನದ ಭಕ್ತರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಭಿವೃದ್ಧಿ ಆಗಲಿ ಎಂದು ಆರೈಸಿದರು…ಕೋವಿಡ್ ಕಾರಣದಿಂದ ಭಕ್ತರು ಎಲ್ಲಾ ರಂಗಗಳಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ.ಇದೇ ಕಾರಣದಿಂದ ಈ ವರ್ಷ ಆರಾಧನೆಯನ್ನು ಸರಳ ರೂಪದಲ್ಲಿ ಆಚರಿಸಲ ನಿರ್ಧರಿಸಲಾಗಿತ್ತು. ‌ಆದರೂ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು, ಭಕ್ತಾದಿಗಳು ಮುಂಜಾನೆಯಿಂದಲೇ ಸಾಲುಗಟ್ಟಿ ನಿಂತು ಹೂವು, ತೆಂಗಿನಕಾಯಿ, ನೈವೇದ್ಯ ಅರ್ಪಿಸಿ, ದೇವರ ದರ್ಶನ ಪಡೆದರು…ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸುಬ್ರಮಣ್ಯ ಸ್ವಾಮಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು,ಗ್ರಾಮದ ಎಲ್ಲಾ ಭಕ್ತರು ದೇವಾಲಯಕ್ಕೆ ಬಂದು ದೇವರ ದರ್ಶನ ಪಡೆದು,ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಲ್ಯಾಪ್‌ ಟಾಪ್‌ ಅವ್ಯವಹಾರವನ್ನು ಎಬಿವಿಪಿ ಖಂಡಿಸಿ ಮಂಗಳೂರು ವಿವಿಯ ಆಡಳಿತ ಸೌಧದ ಎದುರು ಪ್ರತಿಭಟನೆ

Mon Dec 20 , 2021
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಂಗಳೂರು ವಿವಿಯು ಲ್ಯಾಪ್ ಟಾಪ್ ನೀಡಲು ಖರೀದಿಯನ್ನು ನಡೆಸಿದ್ದು, ಈ ಖರೀದಿಯಲ್ಲಿ ಅವ್ಯವಹಾರವು ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಈಗಾಗಲೇ ಪತ್ರಿಕೆಗಳಲ್ಲಿ ಈ ವಿಷಯವು ಪ್ರಕಟಗೊಂಡಿದೆ. ಈ ಅವ್ಯವಹಾರವನ್ನು ಎಬಿವಿಪಿ ಖಂಡಿಸಿ ಮಂಗಳೂರು ವಿವಿಯ ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಿತು.ರಾಷ್ಟ್ರದಾದ್ಯಂತ ಉತ್ತಮ ಹೆಸರನ್ನು ಹೊಂದಿರುವ ಮಂಗಳೂರು ವಿ.ವಿ ಈ ರೀತಿಯ ಭ್ರಷ್ಟಚಾರದ ಹಾಗೂ ಅವ್ಯವಹಾರದಿಂದ ಕೂಡಿದ ನಡೆಗಳಿಂದ ತನ್ನ ಘನತೆಯನ್ನು ಕಳೆದು […]

Advertisement

Wordpress Social Share Plugin powered by Ultimatelysocial