ಈದ್ಗಾ ಮೈದಾನದಲ್ಲಿ 30 ಗಣೇಶ ವಿಗ್ರಹ ಮಾರಾಟ ಅಂಗಡಿಗಳನ್ನು ತೆರೆಯಲು ಚಿಂತನೆ!

 

ಚಾಮರಾಜಪೇಟೆ ಬಂದ್ ಗೆ   ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆ ತಮ್ಮ ಹೋರಾಟವನ್ನು ಮತ್ತಷ್ಟು ಚುರುಕುಗೊಳಿಸಲು ಚಾಮರಾಜಪೇಟೆ ನಾಗರಿಕರ ಒಕ್ಕೂಟ ಮತ್ತು ವಿಶ್ವ ಸನಾತನ ಪರಿಷತ್ ಮುಂದಾಗಿವೆ. ಬಂದ್ ಮತ್ತು ಹೋರಾಟದ ಮುಂದುವರಿದ ಭಾಗವಾಗಿ ಈದ್ಗಾ ಮೈದಾನದಲ್ಲಿ  30 ಗಣೇಶ ವಿಗ್ರಹ ಮಾರಾಟ ಅಂಗಡಿಗಳನ್ನು   ತೆರೆಯಲು ಸಂಘಟನೆಗಳು ಯೋಚಿಸಿದ್ದು, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ.
ಎರಡು ದಿನಗಳ ಹಿಂದೆ ಸ್ಥಳೀಯ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ , ‘ಶಾಂತಿ ಮತ್ತು ಎಲ್ಲರೂ ಒಳಗೊಳ್ಳುವಿಕೆ’ ಸಭೆ ಮಾಡಿದ್ದರು.
ಚಾಮರಾಜಪೇಟೆ ಬಂದ್ ನಲ್ಲಿ ಎಲ್ಲಾ ಹಿಂದೂ ಕಾರ್ಯಕರ್ತರು ಮತ್ತು ಸುತ್ತಮುತ್ತಲಿನ ವ್ಯಾಪಾರಸ್ಥರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಬಂದ್ ಸ್ವಯಂಪ್ರೇರಿತವಾಗಿದ್ದು, ಯಾವ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿಲ್ಲ. ಆದರೆ ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಸ್ಥಳೀಯ ಶಾಸಕರ ಒತ್ತಡಕ್ಕೆ ಮಣಿಯುತ್ತಿದೆ. ಈ ಕಾರಣದಿಂದ ಅಹೋರಾತ್ರಿ ಬಂದ್ ಆಚರಿಸಲು ತೀರ್ಮಾನಿಸಲಾಗ್ತಿದೆ ಎಂದು ವಿಶ್ವ ಸನಾತ ಪರಿಷತ್ತಿನ ಅಧ್ಯಕ್ಷ ಎಸ್.ಭಾಸ್ಕರನ್ ಹೇಳುತ್ತಾರೆ.
ಗಣೇಶ ಮೂರ್ತಿಗಳ ಮಳಿಗೆ ಆರಂಭಿಸಿಬಾರದು ಯಾಕೆ?
ದಾಖಲೆಗಳ ಪ್ರಕಾರ ಜಮೀನು ಪಾಲಿಕೆಗೆ ಸೇರುತ್ತದೆ. ಈ ಬಗ್ಗೆ ನ್ಯಾಯಾಲಯ ತೀರ್ಮಾನ ಮಾಡಬೇಕಿದೆ. ಸಾರ್ವಜನಿಕರಿಗೆ ಭೂಮಿಯನ್ನು ಇತರ ಚಟುವಟಿಕೆಗಳಿಗೆ ಬಳಸಲು ಅವಕಾಶ ನೀಡೋವರೆಗೂ ಮುಂದುವರಿಯಲಿದೆ. ಈ ಮೈದಾನದಲ್ಲಿ ಬಕ್ರಿದ್ ಅಂಗವಾಗಿ ಕುರಿ, ಮೇಕೆಗಳನ್ನು ಮಾರಾಟ ಮಾಡಲು ಅವಕಾಶ ಇರೋವಾಗ, ನಾವ್ಯಾಕೆ ಗಣೇಶ ಮೂರ್ತಿಗಳ ಮಳಿಗೆ ಆರಂಭಿಸಬಾರದು ಎಂದು ಭಾಸ್ಕರನ್ ಪ್ರಶ್ನೆ ಮಾಡುತ್ತಾರೆ.
ದಾಖಲೆ ಸಲ್ಲಿಸುವಂತೆ ಬಿಬಿಎಂಪಿ ಸೂಚನೆ
ಈ ಹಿಂದೆ ಚಾಮರಾಜಪೇಟೆಯಲ್ಲಿರುವ 2.5 ಎಕರೆ ಜಮೀನಿಗೆ ಯಾವುದೇ ಮಾಲೀಕರಿಲ್ಲ, 1974ರ ಕಂದಾಯ ದಾಖಲೆಗಳ ಪ್ರಕಾರ ಪಾಲಿಕೆಗೆ ಸೇರಿದೆ ಎಂದು ಬಿಬಿಎಂಪಿ ಹೇಳಿತ್ತು. ವಕ್ಫ್ ಬೋರ್ಡ್ ಅಡಿಯಲ್ಲಿನ ಕೇಂದ್ರ ಮುಸ್ಲಿಂ ಅಸೋಸಿಯೇಷನ್ ಜಮೀನು ಮಂಡಳಿಗೆ ಸೇರಿದ್ದು ಅಂತ ​​ಗೆಜೆಟ್ ನೋಟಿಫಿಕೇಶನ್ ನೀಡಿತ್ತು. ಹಾಗಾಗಿ ದಾಖಲೆಗಳ ಸಲ್ಲಿಸುವಂತೆ ಒಂದು ವಾರದ ಸಮಯಾವಕಾಶ ನೀಡಲಾಗಿದೆ. ಎರಡು ದಿನಗಳ ನಂತರ ನಾವು ಮತ್ತೊಮ್ಮೆ ಜ್ಞಾಪನೆ ಕಳುಹಿಸುತ್ತೇವೆ ಎಂದು ಪಶ್ಚಿಮ ವಿಭಾಗದ ಜಂಟಿ ಆಯುಕ್ತ ಎಸ್‌ಎಂ ಶ್ರೀನಿವಾಸ್ ಹೇಳಿದ್ದಾರೆ.
ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಪ್ರಮುಖ ಬೇಡಿಕೆ ಏನು?
ಚಾಮರಾಜಪೇಟೆ ಮೈದಾನ ಬಿಬಿಎಂಪಿ ಸ್ವತ್ತು ಎಂದು ಘೋಷಿಸಬೇಕು. ಮೈದಾನವನ್ನ ಆಟದ ಮೈದಾನವನ್ನಾಗಿಯೇ ಉಳಿಸಬೇಕು. ಚಾಮರಾಜಪೇಟೆ ಮೈದಾನಕ್ಕೆ ಜಯಚಾಮರಾಜೇಂದ್ರ ಮೈದಾನ ಎಂದು ನಾಮಕರಣ ಮಾಡಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ. ಯಾವುದೇ ಕಾರಣಕ್ಕೂ ವಕ್ಫ್ ಬೋರ್ಡ್ ಗೆ ವಹಿಸಬಾರದು. ಜೊತೆಗೆ ಮೈದಾನ ವಿಚಾರವಾಗಿ ಕಾನೂನಾತ್ಮಕವಾಗಿ ಹೋರಾಡಲು ಸಮಿತಿ ರಚನೆಯಾಗಬೇಕು,
ಚಾಮರಾಜಪೇಟೆ ಮೈದಾನದಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನ, ಕನ್ನಡ ರಾಜ್ಯೋತ್ಸವ, ಶಿವರಾತ್ರಿ, ನಾಡಹಬ್ಬ ದಸರಾ ಸೇರಿದಂತೆ ಹಿಂದೂ ಹಬ್ಬಗಳ ಆಚರಣೆಗೆ ಅನುಮತಿ ನೀಡಬೇಕು ಎಂದು ಬೇಡಿಕೆ ಇಟ್ಟಿವೆ.
ಬಂದ್ ಯಶಸ್ವಿ, ಶಾಸಕರಿಗೆ ಇರಿಸು ಮುರಿಸು
ಬಂದ್ ಗೆ ಯಾರ ಬೆಂಬಲವಿಲ್ಲವೆಂದಿದ್ದ ಸ್ಥಳೀಯ ಶಾಸಕ‌ ಜಮೀರ್ ಗೆ ಬಂದ್ ಯಶಸ್ವಿಯಾಗಿರುವುದು ಇರಿಸುಮುರಿಸಿಗೆ ಕಾರಣವಾಗಿದೆ. ಬಂದ್ ಬಳಿಕ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳದೆ ಇದ್ರೆ ಮುಂದಿನ ಹೋರಾಟದ ರೂಪುರೇಷೆ ಸಿದ್ದಗೊಳಿಸಲು ಒಕ್ಕೂಟ ಮುಂದಾಗಿದೆ.
ಚಾಮರಾಜಪೇಟೆ ಬಂದ್ ಹಿನ್ನೆಲೆ ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಬೆಳಗ್ಗೆ 8 ಗಂಟೆ ನಂತರ ಬಂದ್ ಆರಂಭವಾಗಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮಣಿಪುರ:ಹೆಚ್ಚಿದ ಕೊರೋನಾ, ಜುಲೈ 24 ರವರೆಗೆ ಶಾಲೆಗಳು ಬಂದ್

Wed Jul 13 , 2022
  ಇಂಫಾಲ, ಜು.13 – ಕೊರೊನಾ ಸೋಂಕು ಉಲ್ಬಣವಾಗುತ್ತಿರುವುದರಿಂದ ಮಣಿಪುರ ಸರ್ಕಾರವು ಮುಂದಿನ ವಾರದವರೆಗೆ ಎಲ್ಲಾ ಶಾಲೆಗಳನ್ನು ಮುಚ್ಚಲು ಆದೇಶಿಸಿದೆ. ಶಾಲಾ ಶಿಕ್ಷಣ ಆಯುಕ್ತ ಎಚ್.ಜ್ಞಾನ್ ಪ್ರಕಾಶ ಅವರು ಸರ್ಕಾರಿ ಅಧಿಕೃತ ಆದೇಶದಲ್ಲಿ, ರಾಜ್ಯದಲ್ಲಿ ಕರೋನ ಹೆಚ್ಚಾಗುತ್ತಿದೆ ಸರ್ಕಾರಿ, ರಾಜ್ಯ ಅನುದಾನಿತ, ಇತರ ಮಂಡಳಿಗಳಿಗೆ ಸಂಯೋಜಿತವಾಗಿರುವ ಖಾಸಗಿ ಶಾಲೆಗಳು ಸಾರ್ವಜನಿಕ ಹಿತಾಸಕ್ತಿಯಿಂದ ಜುಲೈ 24 ರವರೆಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಚ್ಚುವಂತೆ ತಿಳಿಸಿದ್ದಾರೆ. ಬೇಸಿಗೆ ರಜೆಯ ನಂತರ ಅನೇಕ ಶಾಲೆಗಳು […]

Advertisement

Wordpress Social Share Plugin powered by Ultimatelysocial