ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ವಿಚಾರ ತಾರ್ಕಿಕ ಅಂತ್ಯವಂತೂ ಕಂಡಿಲ್ಲ.

ಬೆಂಗಳೂರು, ಜುಲೈ01: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ವಿಚಾರ ತಾರ್ಕಿಕ ಅಂತ್ಯವಂತೂ ಕಂಡಿಲ್ಲ. ಈದ್ಗಾ ಮೈದಾನ ವಕ್ಫ್ ಮಂಡಳಿ ಆಸ್ತಿ ಎಂದರೂ ನೀಡಿರುವ ದಾಖಲೆ ಪೂರಕವಾಗಿಲ್ಲ. ಇದರಿಂದಾಗಿ ಪೂರಕ ದಾಖಲೆಯನ್ನು ನೀಡುವಂತೆ ಬಿಬಿಎಂಪಿ ವಕ್ಛ್ ಬೋರ್ಡ್‌ಗೆ ಮತ್ತೊಂದು ನೋಟಿಸ್ ನೀಡಿದೆ.

ಬಿಬಿಎಂಪಿ ಪಶ್ಚಿಮ ವಿಭಾಗದ ಜಂಟಿ ಆಯುಕ್ತರು ನೋಟಿಸ್ ನೀಡಿದ್ದಾರೆ. ಚಾಮರಾಜಪೇಟೆ ಮೈದಾನ ವಕ್ಛ್ ಬೋರ್ಡ್ ಸ್ವತ್ತು ಎಂದ ಇಂಡೀಕರಣ ಮಾಡಿಕೊಡುವಂತೆ ಮಾಡಿದ್ದ ವಕ್ಛ್ ಬೋರ್ಡ್ ಮನವಿಯನ್ನು ಮಾಡಿತ್ತು. ಇದಕ್ಕಾಗಿ ಮತ್ತಷ್ಟು ದಾಖಲೆಗಳನ್ನು ನೀಡಿ ಅಂತಾ ನೋಟಿಸ್ ನೀಡಲಾಗಿದೆ.

ಬಿಬಿಎಂಪಿ 7 ದಿನಗಳ ಒಳಗೆ ಈ ಕೆಳಗಿನ ದಾಖಲೆಗಳನ್ನು ನೀಡಿ ಅಂತಾ ವಕ್ಛ್ ಬೋರ್ಡ್‌ಗೆ ನೋಟಿಸ್ ಜಾರಿ ಮಾಡಲಾಗಿದೆ. ಎಂಟು ದಾಖಲೆಗಳನ್ನು‌ ನೀಡುವಂತೆ ನೋಟಿಸ್ ನೀಡಿ, ಯಾವ ದಾಖಲೆಗಳನ್ನು ನೀಡಬೇಕು ಎಂದು ಪಟ್ಟಿಯನ್ನು ಸಹ ಮಾಡಿ ಕಳುಹಿಸಿದೆ. ಇದರಿಂದಾಗಿ ಚಾಮರಾಜಪೇಟೆ ಆಟದ ಮೈದಾನ ಅಥವಾ ಈದ್ಗಾ ಮೈದಾನದ ವಿವಾದಕ್ಕೆ ತೆರೆ ಬೀಳುವ ಲಕ್ಷಣವಂತು ಕಾಣುತ್ತಿಲ್ಲ. ಅಸ್ಪಷ್ಟ ದಾಖಲೆಗಳಿಂದಾಗಿ ಗೊಂದಲವಿನ್ನು ಮುಂದುವರೆದಿದೆ.

ವಕ್ಫ್ ಬೋರ್ಡ್‌ನಿಂದ ಕೇಳಿರುವ ದಾಖಲೆಗಳೇನು

ನ್ಯಾಯಾಲಯದಿಂದ ಆದೇಶದ ದೃಢಿಕರಣ ಪತ್ರ.

ನ್ಯಾಯಾಲಯದಿಂದ ಅಧಿಕೃತ ಪ್ರತಿ

ಸ್ವತ್ತಿನ‌ ಮೂಲಪತ್ರ/ ಕ್ರಯಪತ್ರ ದೃಢೀಕರಣ ಪತ್ರಿ

ಸ್ವತ್ತಿನ‌ ಪಹಣಿ 1968 ರಿಂದ ತಹಲ್ ವರೆವಿಗೂ ತಹಶೀಲ್ದಾರ ಅವರಿಂದ ದೃಢೀಕರಣ ಪತ್ರ

ಬೆಂಗಳೂರು ಡೆವೆಲಪ್ಮೆಂಟ್ ಬೋರ್ಡ್ ಅವರ ರಚಿಸಿರುವ ಲೇಔಟ್ ನಕ್ಷೆ ದೃಢೀಕರಣ ಪತ್ರ

ಖೇತವಾರು ಪತ್ರಿಕೆ/ ಪೈಸಲ್ ಪತ್ರಿಕೆ‌ ತಹಶಿಲ್ದಾರ ಅವರಿಂದ ದೃಢೀಕರಣ ಪ್ರತಿ

ಸರ್ಕಾರದಿಂದ ಬಂದಿರುವ ಆಸ್ತಿಪ್ರಕಟಣ ಪತ್ರ ಭೂಮಾಪನ ಇಲಾಖೆಯಿಂದ ದೃಢೀಕರಣ ಪ್ರತಿ

ಇಸಿ ಫಾರಂ 15 ರ 1968 ರಿಂದ ಈ ತಹಲ್ ವರೆವಿಗೂ ದೃಢೀಕರಣ ಪ್ರತಿ

ಈ ದಾಖಲೆಗಳನ್ನು ಒದಗಿಸುವಂತೆ ಬಿಬಿಎಂಪಿ ವಕ್ಫ್ ಮಂಡಳಿಗೆ ನೊಟೀಸ್ ನೀಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗಡಿ ದಾಟಿ ಭಾರತಕ್ಕೆ ಬಂದ 3 ವರ್ಷದ ಪಾಕಿಸ್ತಾನಿ ಬಾಲಕ!

Sat Jul 2 , 2022
ಭಾರತೀಯ ಸೇನೆಯ ಮಾನವೀಯ ಮುಖವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ. ಪಂಜಾಬ್‌ನ ಅಂತರರಾಷ್ಟ್ರೀಯ ಗಡಿಯನ್ನು (IB) ಅಜಾಗರೂಕತೆಯಿಂದ ಅರಿವಿಲ್ಲದೇ ದಾಟಿದ ಮೂರು ವರ್ಷದ ಪಾಕಿಸ್ತಾನಿ ಬಾಲಕನನ್ನು   ಗಡಿ ಭದ್ರತಾ ಪಡೆ (BSF) ಪಾಕಿಸ್ತಾನಿ ರೇಂಜರ್‌ಗಳಿಗೆ ಹಸ್ತಾಂತರಿಸಿದೆ ಎಂದು ಭಾರತೀಯ ಸೇನೆಯ (Indian Army) ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಫಿರೋಜ್‌ಪುರ ಸೆಕ್ಟರ್‌ನಲ್ಲಿ ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಐಬಿ ಬೇಲಿ ಬಳಿ ಮಗು ಅಳುತ್ತಿರುವುದನ್ನು […]

Advertisement

Wordpress Social Share Plugin powered by Ultimatelysocial