ಬದಲಾಯಿತು ಇನ್ನೋವೇಟಿವ್ ಫಿಲಂ ಸಿಟಿ ಹೆಸರು…!

ಬಿಡದಿ ಬಳಿಯ ಇನ್ನೋವೇಟಿವ್ ಫಿಲಂ ಸಿಟಿಯನ್ನು ಚೆನ್ನೈನ ಖ್ಯಾತ ನಿರ್ಮಾಪಕ, ನಟ ಹಾಗೂ ಉದ್ಯಮಿ ವೇಲ್ಸ್ ಗ್ರೂಪ್ ನ ಮುಖ್ಯಸ್ಥ ಡಾ.ಐಸಿರಿ ಕೆ. ಗಣೇಶ್ ಖರೀದಿಸಿದ್ದಾರೆ‌.ಇನ್ನು ಮುಂದೆ ವೇಲ್ಸ್‌ ಇನ್ನೋವೇಟಿವ್ ಫಿಲಂ ಸಿಟಿ ಎಂದು ಕರೆಯಲಾಗುವುದು ಎಂದು ವೇಲ್ಸ್ ಇನ್ನೋವೇಟಿವ್ ಫಿಲಂ ಸಿಟಿಯ ಮ್ಯಾನೇಜರ್ ಬಶೀರ್ ಅಹ್ಮದ್ ತಿಳಿಸಿದ್ದಾರೆ‌.ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಶೀರ್ , ಕರ್ನಾಟಕದ ಮೇಲೆ ಅಪಾರ ಪ್ರೀತಿ ಹೊಂದಿರುವ ಗಣೇಶ್‌ ಈ ಜಾಗವನ್ನು ಖರೀದಿಸಿದ್ದು , ಇನ್ನೋವೇಟಿವ್ ಫಿಲಂ ಸಿಟಿಗೆ ನೂತನ ಕಾಯಕಲ್ಪ ನೀಡಲು ಸಜ್ಜಾಗಿದ್ದಾರೆ. ಸದ್ಯ ಇನ್ನೋವೇಟಿವ್ ಫಿಲಂ ಸಿಟಿಗೆ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ. ಫೆಬ್ರವರಿ ಅಂತ್ಯದ ವೇಳೆಗೆ ನೀವು ಈ ಫಿಲಂ ಸಿಟಿಯನ್ನು ಹೊಸರೂಪದಲ್ಲಿ ನೋಡಬಹುದು. ಸದ್ಯದಲ್ಲೇ ಇದರ ಕಾರ್ಯ ಆರಂಭವಾಗಲಿದೆ’ ಎಂದರು.’ರೈಲು ನಿಲ್ದಾಣ ಸೇರಿದಂತೆ ಹಲವು ಸೆಟ್ ನಿರ್ಮಿಸಲಾಗುತ್ತಿದೆ. ಇನ್ನು ಮುಂದೆ ಕನ್ನಡ ಸಿನಿಮಾ ಚಿತ್ರೀಕರಣಕ್ಕೆ ಬೇರೆ ಊರಿಗೆ ಹೋಗದೆ, ಅಲ್ಲಿ ಸಿಗುವ ಎಲ್ಲಾ ಸೌಲಭ್ಯಗಳನ್ನು ಈ ಫಿಲಂ ಸಿಟಿಯಲ್ಲಿ ನೀಡುವ ಉದ್ದೇಶವಿದೆ. ಚಿತ್ರದ ಮುಹೂರ್ತ ಸಮಾರಂಭಕ್ಕೆ ಉಚಿತವಾಗಿ ಅವಕಾಶ ನೀಡಲಾಗುವುದು. ನಮ್ಮ ಸಂಸ್ಥೆ ವೇಲ್ಸ್ ಇನ್ನೋವೇಟಿವ್‌ ಫಿಲಂ ಸಿಟಿಯೊಂದಿಗೆ ವರ್ಕಿಂಗ್ ಪಾರ್ಟ್ನರ್ ಆಗಿ ಕಾರ್ಯ ನಿರ್ವಹಿಸಲಿದೆ.

 

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಜನಿಕಾಂತ್‌ ಆಸ್ಪತ್ರೆಗೆ ದಾಖಲು..!

Fri Oct 29 , 2021
ತಮಿಳು ಚಿತ್ರ ರಂಗದ ಸೂಪರ್‌ ಸ್ಟಾರ್‌ ರಜನಿಕಾಂತ್ ಅವರನ್ನು ಗುರುವಾರ ರಾತ್ರಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿಯಮಿತ ಆರೋಗ್ಯ ತಪಾಸಣೆಗಾಗಿ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ಹೇಳಿವೆ. 2020ರಲ್ಲಿ, ರಜನಿಕಾಂತ್​ ಅವರಿಗೆ ಅನಾರೋಗ್ಯ ಉಂಟಾಗಿ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದರು. ಇದಾದ ಕೆಲವು ದಿನಗಳ ನಂತರ, ಅವರು 2021ರಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ಪ್ರಾರಂಭಿಸಲು ಯೋಜಿಸಿದ್ದ ರಾಜಕೀಯ ಪಕ್ಷ ಆರಂಭಿಸುವುದಿಲ್ಲ […]

Advertisement

Wordpress Social Share Plugin powered by Ultimatelysocial