‘777 ಚಾರ್ಲಿ’ ರನ್ನಿಂಗ್: 19 ದಿನಗಳಲ್ಲಿ ರಕ್ಷಿತ್ ಶೆಟ್ಟಿ ಸಿನಿಮಾ ದೋಚಿದ್ದೆಷ್ಟು?

ರಕ್ಷಿತ್ ಶೆಟ್ಟಿ ‘777 ಚಾರ್ಲಿ’ ಸಿನಿಮಾ ಮೂಲಕ ಬಾಕ್ಸಾಫೀಸ್‌ನಲ್ಲಿ ಗೆದ್ದಿದ್ದಾಗಿದೆ. ಐದೂ ಭಾಷೆಯಲ್ಲೂ ಸಿನಿಮಾ ಮೆಚ್ಚುಗೆ ಗಳಿಸಿದೆ. ಬಿಡುಗಡೆಯಾದ ದಿನದಿಂದಲೂ ‘777 ಚಾರ್ಲಿ’ ಅಬ್ಬರಿಸುವುದನ್ನು ನಿಲ್ಲಿಸಿಲ್ಲ. ಇನ್ನೊಂದು ಕಡೆ ಕೆಲವೇ ದಿನಗಳಲ್ಲಿ ಸಿನಿಮಾ 25 ದಿನಗಳನ್ನು ಪೂರೈಸಲಿದೆ.

‘777 ಚಾರ್ಲಿ’ ಜೂನ್ 10 ಗ್ರ್ಯಾಂಡ್ ಆಗಿ ಐದು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಚಾರ್ಲಿ ಹಾಗೂ ರಕ್ಷಿತ್ ಶೆಟ್ಟಿ ಕಾಂಬಿನೇಷನ್ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಬರುವಲ್ಲಿ ಗೆದ್ದಿದ್ದು, ಕಲೆಕ್ಷನ್ ವಿಚಾರದಲ್ಲೂ ಭೇಷ್ ಎನಿಸಿಕೊಂಡಿದೆ.

ಈ ಪ್ಯಾನ್ ಇಂಡಿಯಾ ಸಿನಿಮಾ 15 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ ಎನ್ನಲಾಗಿದ್ದು, ಸಿನಿಮಾ ಕಲೆಕ್ಷನ್ ಯಾವ ಬ್ಲಾಕ್ ಬಸ್ಟರ್ ಸಿನಿಮಾಗಳಿಗೂ ಕಮ್ಮಿಯಿಲ್ಲ. ಇಷ್ಟು ಕಡಿಮೆ ಬಜೆಟ್‌ನಲ್ಲಿ ತೆಗೆದ ಸಿನಿಮಾ ಸುಮಾರು ಆರೇಳು ಪಟ್ಟು ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಅಷ್ಟಕ್ಕೂ ಟ್ರೇಡ್ ಅನಲಿಸ್ಟ್‌ಗಳು ನೀಡಿರುವ ಕಲೆಕ್ಷನ್ ರಿಪೋರ್ಟ್ ಏನು ಅನ್ನುವ ಮಾಹಿತಿ ಇಲ್ಲಿದೆ ನೋಡಿ.

19ನೇ ದಿನದ ಕಲೆಕ್ಷನ್ ಎಷ್ಟು?
‘777 ಚಾರ್ಲಿ’ ಸಿನಿಮಾ ವೀಕೆಂಡ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ವೀಕ್ ಡೇಸ್‌ನಲ್ಲಿ ಗಳಿಕೆಯಲ್ಲಿ ಕೊಂಚ ಇಳಿಕೆ ಕಂಡಿದ್ದರೂ, ವಾರಾಂತ್ಯದಲ್ಲಿ ಕಲೆಕ್ಷನ್ ಜೋರಾಗಿಯೇ ಇದೆ. ಹಾಗಂತ 19ನೇ ದಿನವೂ ಸಿನಿಮಾದ ಗಳಿಕೆಯಲ್ಲಿ ಅಷ್ಟೇನು ವ್ಯತ್ಯಾಸ ಆಗಿಲ್ಲ. ‘777 ಚಾರ್ಲಿ’ 19ನೇ ದಿನವೂ ಬಾಕ್ಸಾಫೀಸ್‌ನಲ್ಲಿ ಸೂಪರ್ ಕಲೆಕ್ಷನ್ ಮಾಡಿದೆ. ಹೆಚ್ಚು ಕಡಿಮೆ 1 ಕೋಟಿ ರೂ. ಅಷ್ಟು ಕಲೆಕ್ಷನ್ ಮಾಡಿದೆ ಎಂದು ಟ್ರೇಡ್ ಅನಲಿಸ್ಟ್ ಹೇಳುತ್ತಿದ್ದಾರೆ.

19 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

ರಕ್ಷಿತ್ ಶೆಟ್ಟಿಯ ‘777 ಚಾರ್ಲಿ’ ಸಿನಿಮಾ ಬಗ್ಗೆ ಇಡೀ ದೇಶವೇ ಮಾತಾಡುತ್ತಿದೆ. ಈ 19 ದಿನಗಳಲ್ಲಿ ಸಿನಿಮಾ ಕಲೆಕ್ಷನ್ ಸುಮಾರು 74 ರಿಂದ 75 ಕೋಟಿ ರೂ. ಕಲೆಕ್ಷನ್ ಆಗಿರಬಹುದು ಎಂದು ಟ್ರೇಡ್ ಅನಲಿಸ್ಟ್‌ಗಳು ಅಂದಾಜು ಮಾಡಿದ್ದಾರೆ. ಅದರಲ್ಲೂ ಕರ್ನಾಟಕ ಹಾಗೂ ಕೇರಳದಲ್ಲಿ ಈ ಸಿನಿಮಾಗೆ ಸೂಪರ್‌ ರೆಸ್ಪಾನ್ಸ್ ಸಿಕ್ಕಿದ್ದು, ಕಲೆಕ್ಷನ್ ವಿಚರದಲ್ಲೂ ಈ ಸಿನಿಮಾ ಹಿಂದೆ ಬಿದ್ದಿಲ್ಲ.

ಕೇರಳದಲ್ಲೂ ಸೂಪರ್ ರೆಸ್ಪಾನ್ಸ್

‘777 ಚಾರ್ಲಿ’ ಸಿನಿಮಾ ಕರ್ನಾಟಕದಲ್ಲಿಯೇ ಸುಮಾರು 55 ಕೋಟಿ ರೂ. ಮೇಲೆ ಕಲೆಕ್ಷನ್ ಮಾಡಿದೆ. ಇನ್ನೊಂದು ಕಡೆ ಕೇರಳದಲ್ಲೂ ಸಿನಿಮಾದಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸುಮಾರು 17 ದಿನಗಳಿಗೆ ‘777 ಚಾರ್ಲಿ’ ಸಿನಿಮಾ 4.05 ಕೋಟಿ ರೂ. ಕಲೆಕ್ಷನ್ ಮಾಡಿದೆ. 12 ದಿನಗಳಿಗೆ 3 ಕೋಟಿ ರೂ. ಹಾಗೂ ಇನ್ನು ಉಳಿದ 5 ದಿನಗಳಿಗೆ 1.1 ಕೋಟಿ ರೂ. ಕಲೆಕ್ಷನ್ ಆಗಿದ್ದು, ಇದು ಕೇರಳ ಒರಿಜಿನಲ್ ಸಿನಿಮಾಗಳಿಗೇ ಟಕ್ಕರ್ ಕೊಡುತ್ತಿದೆ ಎಂದು ವರದಿಯಾಗಿದೆ.

25 ದಿನಗಳತ್ತ ಮುನ್ನಗ್ಗುತ್ತಿದೆ ‘777 ಚಾರ್ಲಿ’

‘777 ಚಾರ್ಲಿ’ 25 ದಿನಗಳತ್ತ ಮುನ್ನುತ್ತಿದೆ. ಈ ಸಿನಿಮಾ ರಿಲೀಸ್ ಆಗಿ ಇಂದಿಗೆ ( ಜೂನ್ 29) 20 ದಿನಗಳನ್ನು ಪೂರೈಸಲಿದೆ. ಮುಂದಿನ ಸೋಮವಾರ ( ಜುಲೈ 4) ದಂದು ‘777 ಚಾರ್ಲಿ’ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಲಿದೆ. ಅಲ್ಲದೆ ಸಿನಿಮಾ ಸುಮಾರು 1800 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿತ್ತು. ಈಗಲೂ 1500 ಸ್ಕ್ರೀನ್‌ಗಳಲ್ಲಿ ಸಿನಿಮಾವಿದೆ. ಅಲ್ಲದೆ ಕರ್ನಾಟಕದಲ್ಲಿ 330 ಸ್ಕ್ರೀನ್ ಹಾಗೂ ಕೇರಳದಲ್ಲಿ 125 ಸ್ಕ್ರೀನ್‌ಗಳಲ್ಲಿ ಸಿನಿಮಾ ರನ್ನಿಂಗ್‌ನಲ್ಲಿದೆ ಎಂದು ತಂಡದಿಂದಲೇ ಮಾಹಿತಿ ಸಿಕ್ಕಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಾಲಿವುಡ್‌ನಲ್ಲಿ 'ಭಯೋಗ್ರಫಿಗಳ ಶಕೆ' ಶುರುವಾಗಿದೆ.ಅಟಲ್ ಬಿಹಾರಿ ವಾಜಪೇಯಿ ಜೀವನ, ಸಾಧನೆ

Wed Jun 29 , 2022
  ಬಾಲಿವುಡ್‌ನಲ್ಲಿ ‘ಭಯೋಗ್ರಫಿಗಳ ಶಕೆ’ ಶುರುವಾಗಿದೆ. ಒಂದರಹಿಂದೊಂದರಂತೆ ಜೀವನ ಆಧರಿತ ಸಿನಿಮಾಗಳು, ವೆಬ್ ಸರಣಿಗಳು ತೆರೆಗೆ ಬರುತ್ತಿವೆ. ಇವುಗಳಲ್ಲಿ ಹಲವು ಸಿನಿಮಾಗಳು ಹಿಟ್ ಸಹ ಆಗುತ್ತಿವೆ. ಭೂಗತ ಪಾತಕಿಗಳ ಕತೆಗಳು ಹಿಂದೆ ಸರಿದು ಇತ್ತೀಚೆಗೆ ಸಾಧಕರ ಕತೆಗಳು ಸಿನಿಮಾಗಳಾಗುತ್ತಿರುವುದು ಸಮಾಧಾನಕರ ಸಂಗತಿ. ಅದರಲ್ಲಿಯೂ ಕ್ರೀಡಾಪಟುಗಳ, ಬ್ಯುಸಿನೆಸ್‌ಮೆನ್‌ಗಳ ಕತೆಗಳ ಮೇಲೆ ಬಾಲಿವುಡ್ ನಿರ್ದೇಶಕರು ಹೆಚ್ಚಾಗಿ ಕಣ್ಣು ಹಾಕಿದ್ದಾರೆ. ಇದರ ಜೊತೆಗೆ ರಾಜಕಾರಣಿಗಳ ಜೀವನ ಸಹ ಸಿನಿಮಾಗಳಾಗುತ್ತಿವೆ. ಆದರೆ ಇವಕ್ಕೆ ತುಸು ಬೇರೆಯದೇ […]

Advertisement

Wordpress Social Share Plugin powered by Ultimatelysocial