ನಾಯಿ ಮತ್ತು ಮನುಷ್ಯನ ನಡುವಿನ ಉತ್ತಮ ಸಂಬಂಧವನ್ನು ಮನಮುಟ್ಟುವಂತೆ ತೋರಿದ್ದ ಚಿತ್ರ “777 ಚಾರ್ಲಿ”.

ರಕ್ಷಿತ್ ಶೆಟ್ಟಿ ನಿರ್ಮಿಸಿ, ನಾಯಕರಾಗೂ ನಟಿಸಿರುವ
ಈ ಚಿತ್ರಕ್ಕೆ ದೇಶ – ವಿದೇಶ ಗಳಲ್ಲಿ ಅಪಾರ ಜನಮನ್ನಣೆ ದೊರಕಿದೆ.

ಇದೇ ತಿಂಗಳ 29ರಿಂದ Voot select ನಲ್ಲಿ ಚಾರ್ಲಿ ಚಿತ್ರವನ್ನು ವೀಕ್ಷಿಸಬಹುದು. ಈ ಕುರಿತು ಚಿತ್ರದ ನಿರ್ಮಾಪಕ – ನಾಯಕ ರಕ್ಷಿತ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪರಮ್ ವಾ ಸ್ಟುಡಿಯೋಸ್ ನಿರ್ಮಾಣದ “777 ಚಾರ್ಲಿ” ಚಿತ್ರ Voot select ನಲ್ಲಿ ಇದೇ 29ರಿಂದ ಲಭ್ಯ. ನಮ್ಮ “ಕಿರಿಕ್ ಪಾರ್ಟಿ” ಚಿತ್ರ ಸಹ voot ನಲ್ಲಿದೆ. ಭಾರತವಷ್ಟೇ ಅಲ್ಲದೇ, ವಿದೇಶಗಳಲ್ಲೂ “ಚಾರ್ಲಿ” ಚಿತ್ರವನ್ನು ಮೆಚ್ಚಿಕೊಂಡವರು ಅಪಾರ. ಅದರಲ್ಲೂ ಕರ್ನಾಟಕದಲ್ಲಿ ನಮ್ಮ ಚಿತ್ರಕ್ಕೆ ಭರ್ಜರಿ ಯಶಸ್ಸು ಸಿಕ್ಕಿದೆ. ಈ ಗೆಲುವಿಗೆ ಕಾರಣರಾದ ಸಮಸ್ತರಿಗೂ ನನ್ನ ಧನ್ಯವಾದ. ಚಿತ್ರ ಬಿಡುಗಡೆಯಾಗಿ 47 ದಿನಗಳು ಕಳೆದಿದೆ. 49 ನೇ(ಜುಲೈ29) ದಿನದಿಂದ ನಮ್ಮ ಚಿತ್ರವನ್ನು Voot select ನಲ್ಲಿ ನೋಡಬಹುದು. ಬಹು ಭಾಷೆಗಳಲ್ಲಿ “777 ಚಾರ್ಲಿ” ಬಿಡುಗಡೆಯಾಗಿದೆ. ಆದರೆ ಈಗ Voot select ನಲ್ಲಿ ಕನ್ನಡದ ಚಾರ್ಲಿಯನ್ನು ಮಾತ್ರ ವೀಕ್ಷಿಸಬಹುದು.
ಚಿತ್ರ ಐವತ್ತು ದಿನ ಪೂರೈಸುತ್ತಿದೆ. ಈ ಸಂತೋಷವನ್ನು ಸಂಭ್ರಮಿಸಲು ನಮ್ಮ ನಲವತ್ತು ಜನರ ತಂಡ ಥೈಲ್ಯಾಂಡ್ ಗೆ ಹೋಗುತ್ತಿರುವುದಾಗಿ ರಕ್ಷಿತ್ ಶೆಟ್ಟಿ ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕಾಗವಾಡ್... ಅನಧಿಕೃತ ಆಧಾರ್ ಕಾರ್ಡ್ ಗ್ಯಾಂಗ್ ಮೇಲೆ ದಾಳಿ

Thu Jul 28 , 2022
ಸಾವಿರಾರು ಡೂಪ್ಲಿಕೇಟ್ ಆಧಾರ ಕಾರ್ಡ್ ಮಾಡುತ್ತಿದ್ದ ಕಧಿಮರ ಹೆಡೆ ಮುರಿ ಕಟ್ಟಿದ ಕಾಗವಾಡ್ ತಹಸೀಲ್ದಾರ ಶ್ರೀ ಸಿದ್ದೇಶ್ವರ ಕಂಪ್ಯೂಟರ್ ಹೆಸರಲ್ಲಿ ಅನಧಿಕೃತ ಕಂಪ್ಯೂಟರ್ ಸೆಂಟರ್ಗೆ ಅಧಿಕಾರಿಗಳು ದಾಳಿ ಮಾಡಿ ಅಲ್ಲಿದ್ದ ಸಾಮಾನುಗಳನ್ನು ಪಡೆದುಕೊಂಡಿದ್ದಾರೆ ಚಿಕ್ಕೋಡಿ ತಾಲೂಕಿನ ಲಾಗಿನ್ ಐ ಡಿ ಹೊಂದಿದ್ದ ಈ ವ್ಯಕ್ತಿಯು ಯಾವುದೇ ಲೈಸನ್ಸ್ ಇಲ್ಲದೆ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಫೋರ್ಜರಿ ಸಹಿ ಮಾಡುವ ಮೂಲಕ ಹಲವಾರು ಡುಪ್ಲಿಕೇಟ್ ಆಧಾರ್ ಕಾರ್ಡ್ ಇನ್ನಿತರ ಕಾನೂನುಬಾಹಿರ ಚಟುವಟಿಕೆ […]

Advertisement

Wordpress Social Share Plugin powered by Ultimatelysocial