ಸದ್ದಿಲ್ಲದೆ ಕಣ್ಮರೆಯಾದ ಚೀನಾದ ಬ್ಯುಸಿನೆಸ್ ದೊರೆಗಳು.

 

 

ಹೂಡಿಕೆ ಬ್ಯಾಂಕ್ (Investment Bank) ಆದ ಚೀನಾ (China) ರಿನೈಸಾನ್ಸ್ ಹೋಲ್ಡಿಂಗ್ಸ್ ಲಿಮಿಟೆಡ್‌ನ (China Renaissance Holdings) ಸ್ಥಾಪಕರಾದ ಬಾವೊ ಫ್ಯಾನ್ (Bao Fan) ದಿಢೀರ್ ಕಣ್ಮರೆಯಾಗಿದ್ದು, ಇದಕ್ಕೆ ಕಾರಣಗಳೇನು ಎಂಬುದು ಇಲ್ಲಿಯವರೆಗೂ ತಿಳಿದುಬಂದಿಲ್ಲ.ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ ದಿಢೀರ್ ಕಣ್ಮರೆ ಹಾಗೂ ಅದಕ್ಕೆ ಕಾರಣಗಳು ತಿಳಿಯದಿರುವುದು ಉದ್ಯಮ ರಂಗದಲ್ಲಿ ದೇಶಾದ್ಯಂತ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಬಾವೊ ಕಣ್ಮರೆಯೊಂದಿಗೆ ಸಂಸ್ಥೆಯ ಷೇರು 50% ಕ್ಕೆ ಕುಸಿದಿದ್ದು ಹೂಡಿಕೆದಾರರಿಗೆ ಮುಂದೇನಾಗಬಹುದು ಎಂಬ ತಲ್ಲಣವನ್ನು ಉಂಟುಮಾಡಿದ್ದು, ಇದು ದೊಡ್ಡ ನಷ್ಟಕ್ಕೆ ಕಾರಣವಾಗಬಹುದೇ ಎಂಬ ಆತಂಕವನ್ನು ಸೃಷ್ಟಿಸಿದೆ.ಬಾವೊ ಅಲ್ಲದೆ ದಿಢೀರ್ ಕಣ್ಮರೆಯಾಗಿರುವ ಚೀನಾದ ಬ್ಯುಸಿನೆಸ್ ದೈತ್ಯರು ಸಾಕಷ್ಟು ಜನರಿದ್ದಾರೆ. ಈ ಕಣ್ಮರೆಗೆ ಕಾರಣಗಳು ತಿಳಿದುಬಂದಿಲ್ಲವಾದರೂ ಒಂದು ರೀತಿಯ ನಿಗೂಢತೆ ಈ ಕಣ್ಮರೆಗಳ ಹಿಂದೆ ಅವಿತಿದೆ. ಕಣ್ಮರೆಯಾದವರ ವಿವರ ಇಲ್ಲಿದೆ.ಕ್ಯು ಡೆಜುನ್ಚೀನಾದ ರಿಯಲ್ ಎಸ್ಟೇಟ್ ಡೆವಲಪರ್ ಸೀಜೆನ್ ಗ್ರೂಪ್‌ನ ಘಟಕವಾದ ಸೀಜೆನ್ ಗ್ರೂಪ್ ಸೀಜೆನ್ ಹೋಲ್ಡಿಂಗ್ಸ್‌ನ ನಿರ್ದೇಶಕ ಹಾಗೂ ಸಹ ಅಧ್ಯಕ್ಷರಾದ ಕ್ಯು ಡೆಜುನ್ ದಿಢೀರ್ ಕಣ್ಮರೆಯಾದರು ಹಾಗೂ ಅವರ ಕಚೇರಿ ವಕ್ತಾರರಿಗೆ ಸಂಪರ್ಕಿಸಲು ಸಾಧ್ಯವಾಗದಂತಹ ರೀತಿಯಲ್ಲಿ ಮಾಯವಾದರು. ಫೆ.16 ರಂದು ಕ್ಯು ಡೆಜುನ್ ವೈಯಕ್ತಿಕ ಕಾರಣಗಳಿಂದ ಸಂಸ್ಥೆಯ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.ರೆನ್ ಝಿಕಿಯಾಂಗ್ರಾಜ್ಯ-ನಿಯಂತ್ರಿತ ಆಸ್ತಿ ಡೆವಲಪರ್ ಹುವಾಯುವಾನ್ ರಿಯಲ್ ಎಸ್ಟೇಟ್ ಗ್ರೂಪ್‌ನ ರೆನ್ ಝಿಕಿಯಾಂಗ್ ಸಾರ್ವಜನಿಕರಿಂದ ದೂರವೇ ಉಳಿದಿದ್ದಾರೆ.ಕೊರೊನಾ ವೈರಸ್ ವಿರುದ್ಧ ಹೋರಾಡಲು ಸರ್ಕಾರದ ಪ್ರಯತ್ನಗಳ ಬಗ್ಗೆ ಫೆಬ್ರವರಿ ಅಂತ್ಯದಲ್ಲಿ ಕ್ಸಿ ಮಾಡಿದ್ದ ಭಾಷಣದ ಕುರಿತು ಅವರನ್ನು ಝಿಕಿಯಾಂಗ್ ವಿದೂಷಕ ಎಂದು ಹಾಸ್ಯ ಮಾಡಿದ್ದರು. ನಂತರ ರೆನ್ ನಾಪತ್ತೆಯಾಗಿದ್ದಾರೆ ಎಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ.

 

Advertisement

Wordpress Social Share Plugin powered by Ultimatelysocial