ಚಿಲಿಯ ಅತ್ಯಂತ ಕಿರಿಯ ಅಧ್ಯಕ್ಷರಾಗಿ ಗೇಬ್ರಿಯಲ್ ಬೋರಿಕ್ ನೇಮಕ

ಚಿಲಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಗೇಬ್ರಿಯಲ್ ಬೋರಿಕ್ ಚಿಲಿ ಅವರು ಮುಂದಿನ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಅತ್ಯಂತ ಕಿರಿಯ ಅಧ್ಯಕ್ಷ ಎಂಬ ಖ್ಯಾತಿ ಗಳಿಸಿದ್ದಾರೆ.35 ವರ್ಷದ ಗೇಬ್ರಿಯಲ್ ಬೋರಿಕ್ ಅವರು ಶೇ.56 ರಷ್ಟು ಮತಗಳನ್ನು ಪಡೆದುಕೊಳ್ಳುವ ಮೂಲಕ ಶೇ. 44 ರಷ್ಟು ಮತಗಳನ್ನು ಗಳಿಸಿದ ಸಂಪ್ರದಾಯವಾದಿ ಎದುರಾಳಿ ಜೋಸ್ ಆಂಟೋನಿಯೊ ಕಾಸ್ಟ್ ಅವರನ್ನು ಸೋಲಿಸಿದ್ದಾರೆ.ಜೋಸ್ ಆಂಟೋನಿಯೊ ಕಾಸ್ಟ್ ವಿರುದ್ಧ ಗೆಲುವು ಸಾಧಿಸಿರುವ ಗೇಬ್ರಿಯಲ್ ಬೋರಿಕ್ ಅವರು 2022ರ ಮಾರ್ಚ್ 11ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹಿಂದಿನ ಎಲ್ಲಾ ಅಭ್ಯರ್ಥಿಗಳಿಗಿಂತ ಹೆಚ್ಚು ಮತಗಳನ್ನು ಪಡೆದು ಗೆಲುವಿನ ನಗೆ ಬೀರಿರುವ ಗೇಬ್ರಿಯಲ್ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಇತಿಹಾಸವು ನಮ್ಮಿಂದ ಪ್ರಾರಂಭವಾಗುವುದಿಲ್ಲ ಎಂದು ನನಗೆ ತಿಳಿದಿದೆ’ ಎಂದಿರುವ ಗೇಬ್ರಿಯಲ್, ನಾನು ವಿವಿಧ ಸ್ಥಳಗಳಲ್ಲಿ ದಣಿವರಿಯದೆ ಸಾಮಾಜಿಕ ನ್ಯಾಯ ಹುಡುಕುತ್ತಿರುವವರ ದೀರ್ಘ ಪಥದ ವಾರಸುದಾರನಂತೆ ಭಾಸವಾಗುತ್ತಿದೆ ಎಂದು ಹೇಳುವ ಮೂಲಕ ಸಾಮಾಜಿಕ ನ್ಯಾಯ ದೊರಕಿಸಿಕೊಡುವಲ್ಲಿ ನಿರಂತರವಾಗಿ ಶ್ರಮಿಸುತ್ತೇನೆ ಎಂದು ಎಂಡಪಂಥೀಯ ಗೇಬ್ರಿಯಲ್ ಬೋರಿಕ್ ಹೇಳಿದ್ದಾರೆ.ಬೋರಿಕ್ 1986ರಲ್ಲಿ ಪಂಟಾ ಅರೆನಾಸ್‍ನಲ್ಲಿ ಜನಿಸಿದ್ದು, ಪ್ಯಾಟಗೋನಿಯನ್ ಐಸ್ ಫೀಲ್ಡ್‍ಗಳ ಕೆಳಗಿರುವ ತವರು ಕ್ಷೇತ್ರ ಮ್ಯಾಗಲ್ಲಾನ್ಸ್‍ನ ಬಗ್ಗೆ ಹೆಮ್ಮೆಪಡುತ್ತಾರೆ.2011ರಲ್ಲಿ, ತನ್ನ ಕಾನೂನು ಪದವಿಯ ಅಂತಿಮ ವರ್ಷಕ್ಕೆ ಪ್ರವೇಶಿಸಿದಾಗ, ಬೋರಿಕ್ ಶಿಕ್ಷಣ ವ್ಯವಸ್ಥೆಯ ದನಿಯಾಗಿದ್ದರು. ಈ ಮೂಲಕ ಹಲವು ಯುವ ನಾಯಕರನ್ನು ಹುಟ್ಟಿಹಾಕಿತು. ಅವರೆಲ್ಲರೂ ಬೋರಿಕ್ ಗೆ ರಾಜಕೀಯ ಪ್ರವೇಶಕ್ಕೆ ಪ್ರೇರಣೆ ನೀಡಿದರು.ತಮ್ಮ ಕಾನೂನು ಪದವಿಯನ್ನು ಪೂರ್ಣಗೊಳಿಸದ ಗೇಬ್ರಿಯಲ್ ಬೋರಿಕ್ 2013ರಲ್ಲಿ ಚಿಲಿಯ ಕಾಂಗ್ರೆಸ್ ಚುನಾವಣೆಯಲ್ಲಿ ಜಯಶೀಲರಾದರು ಮತ್ತು ಎರಡು ಅವಧಿಗೆ ಉಪನಾಯಕರಾಗಿ ಸೇವೆ ಸಲ್ಲಿಸಿದರು. ನಂತರ ಚಿಲಿಯ ಎರಡು ಸಾಂಪ್ರದಾಯಿಕ ಒಕ್ಕೂಟಗಳನ್ನು ಮೀರಿ ಬಂದ ಮೊದಲ ಕಾಂಗ್ರೆಸ್ಸಿಗರಲ್ಲಿ ಒಬ್ಬರಾದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

LATEST NEWS : ಕನ್ನಡ ಭಾಷೆಗಾಗಿ ಪ್ರಾಣ ನೀಡಲೂ ಸಿದ್ಧ: ನಟ ಶಿವರಾಜ್‌ಕುಮಾರ್‌

Mon Dec 20 , 2021
ಬೆಂಗಳೂರು: ಇತ್ತೀಚೆಗೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ಕನ್ನಡ ಬಾವುಟವನ್ನು ಸುಟ್ಟು ಹಾಕಿರುವ ಘಟನೆ ಕುರಿತಂತೆ ನಟ ಶಿವರಾಜ್‌ಕುಮಾರ್‌ ಅವರು ಪ್ರತಿಕ್ರಿಯೆ ನೀಡಿದ್ದು, ‘ಮತಬ್ಯಾಂಕ್‌ಗಾಗಿ ಸರ್ಕಾರ ಸುಮ್ಮನೆ ಕುಳಿತುಕೊಳ್ಳಬಾರದು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ನಮ್ಮ ಭಾಷೆಗಾಗಿ ಪ್ರಾಣ ಕೊಡಲೂ ನಾವು ಸಿದ್ಧ’ ಎಂದಿದ್ದಾರೆ. ನಟ ಧನಂಜಯ್‌ ಅವರು ನಟಿಸಿರುವ ‘ಬಡವ ರಾಸ್ಕಲ್‌’ ಸಿನಿಮಾದ ಪ್ರಿರಿಲೀಸ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವರಾಜ್‌ಕುಮಾರ್‌, ‘ಧ್ವಜ ಸುಟ್ಟ ಘಟನೆ ನನ್ನ ಗಮನಕ್ಕೆ ಬಂದ ಕೂಡಲೇ ಟ್ವೀಟ್‌ […]

Advertisement

Wordpress Social Share Plugin powered by Ultimatelysocial